ಗುಂಪುಗಳಲ್ಲಿ ಜೀರುಂಡೆ/ಕ್ರಿಕೆಟ್‌ಗಳ ಸುಳಿವನ್ನು  ಹಿಡಿಯಲು ಹೊಂಚು 
ಹಾಕುವ  ಬಾವಲಿಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ

ಗಂಡು ಕ್ರಿಕೆಟ್‌ಗಳು  ಗುಂಪುಗಳಾಗಿ ಹೆಣ್ಣುಗಳ ಮನವೊಲಿಸಲು ಒಟ್ಟಾಗಿ ಸುಳಿವನ್ನು  ನೀಡುತ್ತವೆ. ಗುಂಪಿನಲ್ಲಿ ಕರೆಯುವುದರಿಂದ   ಹೆಚ್ಚು ಹೆಣ್ಣುಗಳು ಆಕರ್ಷಿತಗೊಳ್ಳುತ್ತವೆ.  ಸುಳಿವನ್ನು ನೀಡುವ ಗಂಡಿಸಿಗೆ ತಮ್ಮ ಸಂಗಾತಿಯ ಜೊತೆಗೆ ಸೇರಲು ಹೆಚ್ಚಿನ  ಅವಕಾಶ  ತೆರೆಯುತ್ತದೆ. ಆದರೆ  ಈ  ಗಂಡು ಕ್ರಿಕೆಟ್‌ಗಳು  ಬಾವಲಿಗಳಂತಹ ಶಬ್ದವನ್ನು ಆಲಿಸುವ ಕಬಳಿಗ/ಪರಭಕ್ಷಕಗಳನ್ನು ಆಕರ್ಷಿಸುವ ಅಪಾಯಕ್ಕೆ ಎದುರಾಗುತ್ತವೆ. ಅವು ಗುಂಪಾಗಿ ಕೂಗಿದಾಗ ಈ ಅಪಾಯ ಹೆಚ್ಚಾಗುತ್ತದೆಯೇ?

ಟೆಲ್ ಅವಿವ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಪರಿಸರ ವಿಜ್ಞಾನ ಕೇಂದ್ರದ   ಹರೀಶ್ ಪ್ರಕಾಶ್ ಮತ್ತು ರೋಹಿಣಿ ಬಾಲಕೃಷ್ಣನ್ರವರು  ಹೊಸ ಅಧ್ಯಯನವೊಂದರಲ್ಲಿ ಬುಷ್ ಕ್ರಿಕೆಟುಗಳು ಗುಂಪಾಗಿ ಗುಂಪಿನಲ್ಲಿ ಕೂಗುವುದರಿಂದ ಬಾವಲಿಗಳ ಅಪಾಯವನ್ನು ತಗ್ಗಿಸುತ್ತವೆಯೇ ಎಂಬುದನ್ನು ಪರೀಕ್ಷಿಸಿದರು. ಆ ಆಯ್ಕೆಯ ಪ್ರಯೋಗದಲ್ಲಿ ಒಂದೇ ಕೂಗಿಗಿಂತ ಮೂರು ಕೂಗುಗಳು ಬಾವಲಿಗಳನ್ನು ಹೆಚ್ಚು ಆಕರ್ಷಿಸುತ್ತವೆ ಎಂದು ಅವರು ಗಮನಿಸಿದರು. ಹಾಗಾದರೆ ಗುಂಪಿನಲ್ಲಿ ಕೂಗುವುದು ಹೆಚ್ಚು ಅಪಾಯಕಾರಿಯೇ? ಹೌದು, ಆದರೆ ಇದು ಒಂದು ಅಂಶದಲ್ಲಿ ಮಾತ್ರ ನಿಜ.

ಒಂಟಿಯಾಗಿ ಕೂಗುವುದಕ್ಕೆ ಹೋಲಿಸಿದರೆ ಗುಂಪಿನಲ್ಲಿ ಕೂಗುವುದು ಬಾವಲಿಗಳ ಗಮನ ಸೆಳೆಯಲು  ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ಕೂಡ ಸಂಶೋಧಕರು ಪರೀಕ್ಷಿಸಿದ್ದಾರೆ. ಒಂಟಿಯಾಗಿ ಕೂಗುವುದಕ್ಕಿಂತ  ಮೂರರ  ಒಂದು ಗುಂಪಿನಲ್ಲಿ ಕೂಗುವ ಕೂಗು  ಬಾವಲಿಗಳು ಗಮನ ಸೆಳೆಯುವುದಕ್ಕೆ ಗಣನೀಯವಾಗಿ ಹೆಚ್ಚು ಸಮಯ ತೆಗೆದುಕೊಂಡಿತು.    ಈ ವಿಳಂಬವು  ಈ ಕೀಟಗಳಿಗೆ ಕೂಗುವುದನ್ನು ನಿಲ್ಲಿಸಿ  ತಪ್ಪಿಸಿಕೊಳ್ಳಲು ಅವಕಾಶವನ್ನು ನೀಡುತ್ತದೆ.  ಆದ್ದರಿಂದ, ಗುಂಪಿನಲ್ಲಿ ಕೂಗುವುದು  ಬಾವಲಿಗಳನ್ನು ಆಕರ್ಷಿಸಬಹುದಾದರೂ, ಗುಂಪುಗಳಲ್ಲಿ ಅವುಗಳನ್ನು  ಹಿಡಿಯುವಲ್ಲಿ ಬಾವಲಿಗಳ ಅಸಮರ್ಥತೆ ಉಂಟುಮಾಡಲು  ಅವುಗಳಿಗೆ ಉಪಯೋಗವಾಗುತ್ತದೆ.

ಹಾಗಾದಲ್ಲಿ, ತನ್ನ ಬೇಟೆಯ ಕೂಗನ್ನು  ಗುಂಪಿನಲ್ಲಿ ಕಂಡುಹಿಡಿಯಲು ಬಾವಲಿಗಳು ಹೆಚ್ಚು ಸಮಯ ಏಕೆ ತೆಗೆದುಕೊಳ್ಳುತ್ತವೆ?  ಇದಕ್ಕೆ ಒಂದು  ಕಾರಣವೆಂದರೆ ಗೊಂದಲ.  ಕಬಳಿಗವಾದ ಬಾವುಲಿಗೆ  ಗುಂಪಿನಲ್ಲಿರುವ  ತನ್ನ ಒಂದು ಬೇಟೆಯನ್ನು   ಪ್ರತ್ಯೇಕಿಸಿ ಗುರಿಮಾಡಿ ಹಿಡಿಯುವುದು  ಕಷ್ಟಕರವಾಗುತ್ತದೆ. ಇದೇ ಕೋತಿಗಳು, ಗೆಕೊಹಲ್ಲಿಗಳು ಮತ್ತು ಮೀನುಗಳಂತಹ ಕಬಳಿಗಗಳ ಬಗ್ಗೆ ಹಿಂದಿನ ಅಧ್ಯಯನಗಳು ನಡೆದಿದ್ದವು. ಈ ಅಧ್ಯಯನವು ಬಾವಲಿಗಳಂತಹ ಕಬಳಿಗಗಳ  ಆಲಿಕೆ   ಗೊಂದಲದ ಬಗ್ಗೆ ಮೊದಲ  ಪುರಾವೆಯನ್ನು ಒದಗಿಸುತ್ತದೆ.

ಉಲ್ಲೇಖ: 

ಪ್ರಕಾಶ್, ಎಚ್., ಗ್ರೀಫ್  ಎಸ್., ಯೊವೆಲ್ ವೈ  ಮತ್ತು ಬಾಲಕೃಷ್ಣನ್, ಆರ್. (2021). ಅಕೌಸ್ಟಿಕಲಿ ಇವ್ಸ್ ಡ್ರಾಪಿಂಗ್ ಬ್ಯಾಟ್ ಟೇಕ್ ಲಾಂಗರ್ ಟು ಕ್ಯಾಪ್ಚರ್ ಕಾಟ್ಲಿಡ್ ಪ್ರೆ ಸಿಗ್ನಲಿಂಗ್ ಇನ್ ಅಗ್ರಿಗೇಷನ್

 ಜರ್ನಲ್ ಆಫ್ ಎಕ್ಸ್ ಪೆರಿಮೆಂಟಲ್  ಜರ್ನಲ್ ಸಂಪುಟ. 224 (10), ಜೆಬ್ 233262

https://journals.biologists.com/jeb/article-abstract/224/10/jeb233262/268371/Acoustically-eavesdropping-bat-predators-take

ಲ್ಯಾಬ್ ವೆಬ್‌ಸೈಟ್: