ಮರದಿಂದ ಮರಕ್ಕೆ ತೆರಳಲು ಜಂತುಗಳು ತಮ್ಮ ವಾಹಕ ಆಯ್ದುಕೊಳ್ಳುವುದು ಹೇಗೆ ?


ರಂಜಿನಿ ರಘುನಾಥ್

ಅಂಜೂರದ ಮರದಲ್ಲಿ ಆಶ್ರಯ ಪಡೆದಿರುವ ಪುಟಾಣಿ ಜಂತುಗಳು ಯಾವ ಘಾಸಿಯನ್ನೂ ಮಾಡದೆ ಅಂಜೂರ ಕಣಜದ ಹೊಟ್ಟೆಯನ್ನು ತೆವಳಿ ಸೇರಿಕೊಳ್ಳುವ ಮೂಲಕ, ಅವುಗಳನ್ನು ‘ವಾಹಕ’ವನ್ನಾಗಿ ಮಾಡಿಕೊಂಡು ಒಂದು ಮರದಿಂದ ಮತ್ತೊಂದು ಮರಕ್ಕೆ ಸವಾರಿ ಮಾಡುತ್ತವೆ. ಈ ಸಂಬಂಧ ಕೋಟ್ಯಂತರ ವರ್ಷಗಳಿಂದ ಹೀಗೆಯೇ ನಡೆದುಕೊಂಡು ಬಂದಿದೆ. ಆದರೆ ನೆಮಟೋಡ್ ಗಳೆಂದು (ಉರುಳೆಯಾಕಾರಾದ ಜಂತುಗಳು) ಕರೆಯಲಾಗುವ ಈ ಜಂತುಗಳು ತಮ್ಮ ವಾಹಕ ದುಂಬಿಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತವೆ? ತಮ್ಮ ಸಹ-ಪ್ರಯಾಣಿಕರು ಯಾರೆಂಬುದನ್ನು ಪತ್ತೆ ಹಚ್ಚಲು ಯಾವ ರೀತಿಯಾಗಿ ಸುಳಿವುಗಳನ್ನು ಪಡೆಯುತ್ತವೆ? ಭಾರತೀಯ ವಿಜ್ಞಾನ ಸಂಸ್ಥೆಯ (ಐ.ಐ.ಎಸ್.ಸಿ) ಜೀವವೈವಿಧ್ಯ ವಿಜ್ಞಾನಗಳ (CES) ಕೇಂದ್ರವು ಈ ಪ್ರಶ್ನೆಗಳಿಗೆ ಒಂದಷ್ಟು ಉತ್ತರಗಳನ್ನು ಕಂಡುಕೊಂಡಿದೆ.


Pollinator wasp on a fig fruit (Photo: Nikhil More)

ಈ ಜಂತುಗಳು ಸಾಮಾನ್ಯವಾಗಿ ಹೆಚ್ಚು ದಟ್ಟಣೆಯಿಲ್ಲದ ದುಂಬಿಯ ಹೊಟ್ಟೆಗಳನ್ನು ಆಯ್ದುಕೊಳ್ಳುತ್ತವೆ. ಜೊತೆಗೆ, ಹೀಗೆ ಮಾಡುವಾಗ, ತಮ್ಮದೇ ಪ್ರಭೇದದ ಬೇರೆ ಹುಳುಗಳು ಅಲ್ಲಿ ಇರುವುದನ್ನು ಖಾತರಿಪಡಿಸಿಕೊಳಿಸಿಕೊಳ್ಳುತ್ತವೆ. ಹೀಗಾದಾಗ, ಅವು ನಿಗದಿತ ಸ್ಥಳ ತಲುಪಿದ ಮೇಲೆ ತಮ್ಮ ಸಂಗಾತಿಯನ್ನು ಹುಡುಕಿಕೊಳ್ಳುವ ಅವಕಾಶ ಹೆಚ್ಚಿರುತ್ತದೆ. ಜೊತೆಗೆ, ಕಡಿಮೆ ಸಂಖ್ಯೆಯ ಜಂತುಗಳನ್ನು ಹೊತ್ತೊಯ್ಯುವ ಕಣಜಗಳಿಗೆ ನಿಗದಿತ ಸ್ಥಳವನ್ನು ಸುರಕ್ಷಿತವಾಗಿ ತಲುಪುವ ಅವಕಾಶ ಕೂಡ ಹೆಚ್ಚಾಗಿರುತ್ತದೆ.

“ನೆಮಟೋಡ್ಸ್ ನಂತಹ ಪುಟಾಣಿ ಜಂತುಗಳು ಕೂಡ ಸಂಕೀರ್ಣವಾದ ನಿರ್ಧಾರ ತಳೆಯುವ ಪ್ರವೃತ್ತಿ ಹೊಂದಿರುತ್ತವೆ ಎಂಬುದು ಇದರಿಂದ ನಿಚ್ಚಳವಾಗುತ್ತದೆ’ ಎನ್ನುತ್ತಾರೆ ಸಿಇಎಸ್ ಪ್ರಾಧ್ಯಾಪಕ ಹಾಗೂ ಜರ್ನಲ್ ಆಫ್ ಅನಿಮಲ್ ಎಕಾಲಜಿಯಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯ ಮೊದಲ ಲೇಖಕ ರೀನಿ ಬೋರ್ಜಸ್. “ನಾವು ಮನುಷ್ಯರು ಹೇಗೆ ಯಾವ ರೀತಿಯ ವಾಹನವನ್ನು ಸಂಚಾರಕ್ಕೆ ಆಯ್ದುಕೊಳ್ಳಬೇಕು ಎಂದು ತೀರ್ಮಾನಿಸುತ್ತದೆಯೋ ಅದೇ ರೀತಿಯಲ್ಲಿ ಈ ಜಂತುಗಳಲ್ಲೂ ನಿರ್ಧಾರ ತಳೆಯುವ ಪ್ರವೃತ್ತಿ ಇರುತ್ತದೆ. ಬೇರೆ ಯಾವುದೇ ಬಸ್ ಇಲ್ಲದಿದ್ದಾಗ ಮಾತ್ರ ನಾವು ದಟ್ಟಣೆಯಿಂದ ತುಂಬಿರುವ ಬಸ್ ಅನ್ನು ಅನಿವಾರ್ಯವಾಗಿ ಹತ್ತುತ್ತೇವೆ. ಇಲ್ಲದಿದ್ದರೆ, ದಟ್ಟಣೆಯಿರುವ ಬಸ್ ಏರಲು ಬಯಸುವುದಿಲ್ಲ. ಈ ಜಂತುಗಳಲ್ಲಿಯೂ ತಮ್ಮ ವಾಹಕ ಆಯ್ದುಕೊಳ್ಳುವಾಗ ಇದೇ ಪ್ರವೃತ್ತಿ ಕಂಡುಬರುತ್ತದೆ.”

ಅಂಜೂರದ ಮರಗಳು ಅಂಜೂರದ ಕಣಜಗಳೊಂದಿಗೆ ಸರಿಸಮನಾದ ಕೊಡು-ಕೊಳ್ಳುವಿಕೆಯ ಸಂಬಂಧ ಹೊಂದಿವೆ. ಕಣಜವು ಪರಾಗಸ್ಪರ್ಶ ಪ್ರಕ್ರಿಯೆಗೆ ಸಹಕಾರಿಯಾದರೆ, ಮರಗಳು ಅವಕ್ಕೆ ಆಹಾರವನ್ನು ಒದಗಿಸುತ್ತವೆ. ಈ ಮರವು, ಮೂರು ಬೇರೆ ಬೇರೆ ರೀತಿಯ ಜಂತುಗಳಿಗೆ ಕೂಡ ಆಶ್ರಯವನ್ನು ಕಲ್ಪಿಸುತ್ತದೆ ಒದಗಿಸುತ್ತವೆ. ಈ ಜಂತುಗಳು, ಒಂದು ಅಂಜೂರದ ಮರದಿಂದ ಮತ್ತೊಂದು ಅಂಜೂರದ ಮರಕ್ಕೆ ವಯಸ್ಕ ಜಂತುಗಳನ್ನು ಕೊಂಡೊಯ್ಯುವ ಕಣಜಗಳನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತವೆ. ನಂತರ, ಅಂಜೂರದ ಮರದಲ್ಲಿ ಇವು ಪ್ರಬುದ್ಧಾವಸ್ಥೆಗೆ ಬಂದು, ಮಿಲನ ಕ್ರಿಯೆಯಲ್ಲಿ ಭಾಗಿಯಾಗಿ ಸಂತಾನೋತ್ಪತ್ತಿ ಮಾಡುತ್ತವೆ.

ಈ ಮುಂಚೆ ಸಂಶೋಧಕರು ತಮ್ಮ ಅಧ್ಯಯನದ ವೇಳೆ ನಿಯಂತ್ರಿತ ಪ್ರಯೋಗಗಳನ್ನು ಮಾಡಿದ್ದರು. ಹೆಚ್ಚಿನ ಸಂಖ್ಯೆಯ ಜಂತುಗಳು ದುಂಬಿಯನ್ನು ಒಳ ಪ್ರವೇಶಿಸಿದರೆ ಅವು ಪರಾವಲಂಬಿಗಳಾಗುವ ಜೊತೆಗೆ, ದುಂಬಿಗೆ ಮಾತ್ರವಲ್ಲದೆ ತಮಗೆ ಆಸರೆ ಒದಗಿಸುವ ಮರಕ್ಕೂ ಹಾನಿ ಎಸಗುತ್ತವೆ ಎಂದು ಹೇಳಿದ್ದರು. “ಆದರೆ, ನೈಸರ್ಗಿಕ ಸನ್ನಿವೇಶದಲ್ಲಿ, ನೆಮಟೋಡ್ ಗಳ (ಜಂತುಗಳ) ಸಂಖ್ಯೆ ಯಾವಾಗಲೂ ಕಡಿಮೆಯೇ ಇರುತ್ತದೆ” ಎನ್ನುತ್ತಾರೆ ಸಿಇಎಸ್ ಸಂಶೋಧಕ ಸಹವರ್ತಿ ಹಾಗೂ ಅಧ್ಯಯನದ ಮೊದಲ ಲೇಖಕ ಸತ್ಯಜೀತ್ ಗುಪ್ತ.

ದಟ್ಟಣೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಜಂತುಗಳು ಕಡಿಮೆ ಜಂತುಗಳಿರುವ ದುಂಬಿಗಳನ್ನೇ ಆಯ್ದುಕೊಳ್ಳುವ ಪ್ರವೃತ್ತಿ ಹೊಂದಿವೆ. ರಾಸಾಯನಿಕ ಸುಳಿವುಗಳ ಮೂಲಕ ಇದನ್ನು ಖಾತರಿಗೊಳಿಸಿಕೊಳ್ಳುತ್ತವೆ. ದುಂಬಿಗಳು ಬಾಲದ ಮೇಲೆ ಕುಳಿತುಕೊಂಡು ಹಾಗೂ ಅಲ್ಲಿ ತಮ್ಮ ತಲೆಯನ್ನು ಅತ್ತಿತ್ತು ಆಡಿಸಿ ಆವಿಶೀಲ ಸಂಯುಕ್ತಗಳ ವಾಸನೆಯನ್ನು ಹೀರಿಕೊಳ್ಳುತ್ತವೆ. ಸಂಶೋಧಕರು ಈ ಜಂತುಗಳಿಗೆ, ಕಡಿಮೆ ಜಂತುಗಳಿರುವ ದುಂಬಿ ಹಾಗೂ ಹೆಚ್ಚು ಜಂತುಗಳಿರುವ ದುಂಬಿಗಳ ಪೈಕಿ ಒಂದನ್ನು ಆಯ್ದುಕೊಳ್ಳುವ ಅವಕಾಶ ಕೊಟ್ಟರೆ ಅವು ಕಡಿಮೆ ಜಂತುಗಳಿರುವ ದುಂಬಿಯನ್ನೇ ಆಯ್ದುಕೊಳ್ಳುತ್ತವೆ ಎಂಬುದು ಹೊಸ ಅಧ್ಯಯನದಲ್ಲಿ ಕಂಡುಬಂದಿದೆ.

ಈ ಜಂತುಗಳು ದುಂಬಿಯ ಒಡಲೊಳಗೆ ತಮ್ಮದೇ ಪ್ರಭೇದದ ಜಂತುಗಳ ಸಂಖ್ಯೆ ಹೆಚ್ಚಾಗಿದೆಯೋ ಅಥವಾ ಕಡಿಮೆ ಇದೆಯೋ ಎಂಬುದನ್ನೇನೋ ಪತ್ತೆಹಚ್ಚಬಲ್ಲವು. ಆದರೆ, ದುಂಬಿಗಳ ಒಡಲೊಳಗೇನಾದರೂ ಬೇರೆ ಪ್ರಭೇದದ ಹುಳುಗಳಿದ್ದರೆ ಅವುಗಳ ಇರುವಿಕೆಯನ್ನು ಪತ್ತೆ ಮಾಡಲಾರವು. ಅಂತಹ ಸಂದರ್ಭದಲ್ಲಿ, ದುಂಬಿಯ ಒಡಲೊಳಗೆ ಏನೂ ಇಲ್ಲ ಎಂಬ ನಿರ್ಧಾರಕ್ಕೆ ಅವು ಬರುತ್ತವೆ.

ವಿಭಿನ್ನ ಪ್ರಭೇದಗಳಾದ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಜಂತುಗಳು ತಮ್ಮ ವಾಹಕವನ್ನು ನಿರ್ಧರಿಸಲು ಬೇರೆ ಬೇರೆ ಮಾನದಂಡಗಳನ್ನು ಉಪಯೋಗಿಸುತ್ತವೆ. ಸಸ್ಯಾಹಾರಿ ಜಂತುಗಳು ಖಾಲಿ ವಾಹಕಗಳನ್ನು ಬಳಸಲು ಆದ್ಯತೆ ಕೊಟ್ಟು, ಜೋಡಿಯಾಗಿ ಅದರ ಒಡಲೊಳಕ್ಕೆ ತೆರಳಲು ಇಚ್ಛಿಸುತ್ತವೆ. ನಿಗದಿತ ಜಾಗವನ್ನು ತಲುಪಿದ ಮೇಲೆ ಮಿಲನ ಸಂಗಾತಿ ಖಾತರಿಗೊಳಿಸಿಕೊಳ್ಳುವುದೇ ಇದರ ಹಿಂದಿನ ಕಾರಣವಾಗಿದೆ. ಆದರೆ, ಮಾಂಸಾಹಾರಿ ಭಕ್ಷ್ಯಕ ದುಂಬಿಗಳು, ಒಂದಷ್ಟು ಸಂಖ್ಯೆಯಲ್ಲಿ ತಮ್ಮದೇ ಪ್ರಭೇದದ  ಜಂತುಗಳಿರುವ ದುಂಬಿಗಳನ್ನು ವಾಹಕವನ್ನಾಗಿಸಿಕೊಳ್ಳಲು ಬಯಸುತ್ತವೆ.

“ಇವು ಮೊದಲ ನೋಟಕ್ಕೆ ಸಿಲುಕಿರುವ ಅಂಶಗಳಾಗಿವೆ. ನೆಮಟೋಡ್ ಗಳು (ಜಂತುಗಳು) ತಮ್ಮ ಆಶ್ರಯ ನೆಲೆಯನ್ನು ಅಥವಾ ವಾಹಕವನ್ನು ಆಯ್ದುಕೊಳ್ಳುವಾಗ ಹೇಗೆ ನಿರ್ಧಾರ ತೆಗೆದುಕೊಳ್ಳುತ್ತವೆ ಎಂಬ ಮುಖ್ಯ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಇದು ಪ್ರಾಥಮಿಕ ಅಧ್ಯಯನವಾಗಿದೆ” ಎನ್ನುತ್ತಾರೆ ಗುಪ್ತಾ.

ಉಲ್ಲೇಖ:

ಗುಪ್ತಾ, ಎಸ್, ಬೋರ್ಜಸ್, ಆರ್.ಎಂ. Hopping on: Conspecific traveller density within a vehicle regulates parasitic hitchhiking between ephemeral microcosms. Journal of Animal Ecology, 2021; 00: 1– 10. https://doi.org/10.1111/1365-2656.13418

ಸಂಪರ್ಕಿಸಿ:

ರೀನೀ ಬೋರ್ಜಸ್
ಪ್ರಾಧ್ಯಾಪಕರು
ಜೀವವೈವಿಧ್ಯ ವಿಜ್ಞಾನಗಳ ಕೇಂದ್ರ (ಸಿಇಎಸ್)
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ)
renee@iisc.ac.in
+91-80-23602972

ಸತ್ಯಜೀತ್ ಗುಪ್ತಾ
ಸಂಶೋಧನಾ ಸಹಾಯಕ
ಜೀವವೈವಿಧ್ಯ ವಿಜ್ಞಾನಗಳ ಕೇಂದ್ರ (ಸಿಇಎಸ್)
ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ)
satyajeetg@iisc.ac.in
+91-8762733087

ಪರ್ತಕರ್ತರಿಗೆ ಸೂಚನೆ:

ಅ) ಈ ಪತ್ರಿಕಾ ಪ್ರಕಟಣೆಯನ್ನು ಯಥಾವತ್ತಾಗಿ ಸುದ್ದಿಯಾಗಿ ಪ್ರಕಟಿಸಿದರೆ ದಯವಿಟ್ಟು ಐ.ಐ.ಎಸ್.ಸಿ. ಹೆಸರಿನೊಂದಿಗೆ ಪ್ರಕಟಿಸಿ.

ಆ) ಐ.ಐ.ಎಸ್.ಸಿ. ಪತ್ರಿಕಾ ಪ್ರಕಟಣೆಗಳಿಗೆ ಸಂಬಂಧಿಸಿದಂತೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು news@iisc.ac.in or pro@iisc.ac.in ಗೆ ಬರೆಯಿರಿ.

—-000—