ನಿಮ್ಮ ಸಹ-ಪ್ರೋಗ್ರಾಮರ್‌ಗೆ ಗರಿಷ್ಠ ಕಾರ್ಯ ಸ್ವಾತಂತ್ರ್ಯವನ್ನು ನೀಡುವುದು 

ಓದಲು ನೀವು ಬಳಸುವ ಬ್ರೌಸರ್ ಅಥವಾ ಬ್ರೌಸರ್ ಚಾಲನೆಯಲ್ಲಿರುವ ಆಪರೇಟಿಂಗ್ ಸಿಸ್ಟಮ್ ಆಗಿರಬಹುದು ಕಂಪ್ಯೂಟರ್ ಪ್ರೋಗ್ರಾಂಗಳು ಎಲ್ಲೆಡೆ ಸರ್ವವ್ಯಾಪಿಯಾಗಿದೆ. ಪ್ರೋಗ್ರಾಂಗಳು ಅನಿರೀಕ್ಷಿತ ವರ್ತನೆಗಳನ್ನು ಪ್ರದರ್ಶಿಸಲು ಕಾರಣವಾಗುವ ದೋಷಗಳನ್ನು ಹೊಂದಿರಬಹುದು. ಬಳಕೆದಾರರ ಮೇಲೆ ಪರಿಣಾಮ ಬೀರುವ ಮೊದಲು ಪ್ರೋಗ್ರಾಂಗಳ ದೋಷಗಳನ್ನು ಕಂಡುಹಿಡಿಯಲು  ವಿಶೇಷವಾಗಿ ಪರೀಕ್ಷಿಸಲಾಗುತ್ತದೆ. ಸಂಪೂರ್ಣವಾಗಿ ಪ್ರೋಗ್ರಾಂ ದೋಷರಹಿತವಾಗಿದೆ ಎಂದು ಪರೀಕ್ಷೆಯು ಎಂದಿಗೂ ಖಾತರಿಪಡಿಸುವುದಿಲ್ಲ.  ಆದರೆ ಸುರಕ್ಷತೆಯು  ಬಹುಮುಖ್ಯವಾಗಿರುವ  ವ್ಯವಸ್ಥೆಗಳಲ್ಲಿ ಬಳಸುವ ಪ್ರೋಗ್ರಾಂಗಳಿಗೆ ಇಂತಹ ಖಾತರಿಪಡಿಸುವಿಕೆ ಬಹಳ ಅಮೂಲ್ಯ. ಒಂದು ಪ್ರೋಗ್ರಾಂ ಒಂದು ನಿರೀಕ್ಷಿತ ರೀತಿಯಲ್ಲಿ ವರ್ತಿಸುತ್ತದೆ ಎಂಬ ಔಪಚಾರಿಕ ಖಾತರಿಯನ್ನು ಪ್ರೋಗ್ರಾಂ ಪರಿಶೀಲನೆಯ ಮೂಲಕ  ಸ್ವಯಂಚಾಲಿತವಾಗಿ ಸಾಧಿಸಬಹುದು.

ತೀವ್ರವಾಗಿ ಹೆಚ್ಚುತ್ತಿರುವ ಸಾಫ್ಟ್ ವೇರ್ ಬೆಳವಣಿಗೆಯಲ್ಲಿ   ಪ್ರೋಗ್ರಾಂಗಳ ಫಂಕ್ಷನ್ ಕಾಲ್ಗಳಿರುವ ಬರೆಯಬೇಕಾದ ಫಂಕ್ಷನ್‌ಗಳ ಬಗ್ಗೆ ತರ್ಕಿಸಬೇಕಾಗಿರುವುದು ಸಾಮಾನ್ಯವಾಗಿಬಿಟ್ಟಿದೆ. ಫಂಕ್ಷನ್ನಿನ ಇನ್ಪುಟ್ ಮತ್ತು ಔಟ್ಪುಟ್ ಮೇಲೆ  ಒಂದು ಕನ್ಸ್ಟ್ರೇಂಟ್ ಹುಡಕುವ ಮೂಲಕ ಮತ್ತು ಫಂಕ್ಷನ್ ಕಾಲ್  ಬದಲು  ಇದನ್ನು ಬಳಸುವ ಮೂಲಕ ಇದನ್ನು ನಿರ್ವಹಿಸಲಾಗುತ್ತದೆ. ಅಂತಹ ಕನ್ಸ್ಟ್ರೇಂಟ್ ಅನ್ನು ಸ್ಪೆಸಿಫಿಕೇಷನ್/ನಿರ್ದಿಷ್ಟತೆ ಎಂದು ಕರೆಯಲಾಗುತ್ತದೆ.   ಈ ಸ್ಪೆಸಿಫಿಕೇಷನ್/ ನಿರ್ದಿಷ್ಟತೆಯನ್ನು ಕಂಡುಹಿಡಿಯುವ ಪ್ರಕ್ರಿಯೆಯನ್ನು ನಿರ್ದಿಷ್ಟ/ ಸ್ಪೆಸಿಫಿಕೇಷನ್ ಸಂಶ್ಲೇಷಣೆ ಎಂದು ಕರೆಯಲಾಗುತ್ತದೆ. ಸಾಧ್ಯವಾದಷ್ಟು ಪ್ರಮಾಣದ ಫಂಕ್ಷನ್‌ ಗಳನ್ನು ಜಾರಿಗಳಿಸಲು/ ಅನುಮತಿಸಲು ಅತ್ಯಂತ  ದುರ್ಬಲವಾದ ಸ್ಪೆಸಿಫಿಕೇಷನ್ ಬೇಕು.   ಲೂಪ್‌ಗಳು ಮತ್ತು ರೆಕರ್ಷನ್ ನಂತಹ  ಸಂಕೀರ್ಣ ನಿಯಂತ್ರಣ ಹರಿವು ಹೊಂದಿರುವ ಫಂಕ್ಷನ್‌ಗಳಿಗೆ ಇದು ಒಂದು   ಸವಾಲಾಗಿದೆ.  ಏಕೆಂದರೆ ಸ್ಪೆಸಿಫಿಕೇಷನ್  ಜೊತೆಗೆ  ಈ ನಿಯಂತ್ರಣ-ಹರಿವಿನ ರಚನೆಗಳಿಗಾಗಿ ಅಸ್ಥಿರಗಳನ್ನು ಕೂಡ  ಸಂಶ್ಲೇಷಣೆ ಮಾಡಬೇಕಾಗುತ್ತದೆ.

ಸಮ್ಮೇಳನ ‘ಎಸಿಎಂ ಪಿಎಲ್‌ಡಿಐ 2021’ರಲ್ಲಿ ವಿಶಿಷ್ಟವಾದ ಲೇಖನ  ಪ್ರಶಸ್ತಿಯನ್ನು ಗೆದ್ದ” ಕನ್ಸ್ಟ್ರೇಂಟ್ ಹಾರ್ನ್  ಅಂಶಗಳೊಂದಿಗೆ ಸ್ಪೆಸಿಫಿಕೇಷನ್ ಸಂಶ್ಲೇಷಣೆ” ಎಂಬ ಇತ್ತೀಚಿನ ಲೇಖನದಲ್ಲಿ, ಸುಮಂತ್ ಪ್ರಭು, ಎಸ್. ದೀಪಕ್ ಡಿಸೋಜಾ ಮತ್ತು ಅವರ ಸಹಯೋಗಿಗಳು ಮೊದಲ ಬಾರಿಗೆ  ಗರಿಷ್ಠ ದುರ್ಬಲ ಸ್ಪೆಸಿಫಿಕೇಷನ್ಗಳಿಗೆ  ಮಾತ್ರವಲ್ಲ ಸಂಕೀರ್ಣ ನಿಯಂತ್ರಣ ಹರಿವಿನ ಜೊತೆಗಿರುವ ಅಸ್ಥಿರಗಳಿಗೆ  ಸಹ  ಒಂದು ತಂತ್ರವನ್ನು ನಿರೂಪಿಸಿದರು.   ಈ ತಂತ್ರವು ಕನ್ಸ್ಟ್ರೇಂಟ್ ಹಾರ್ನ್ ಅಂಶಗಳಾಗಿ ಪ್ರತಿನಿಧಿಸುವ ಪ್ರೋಗ್ರಾಂಗಳನ್ನು ನಿರ್ವಹಿಸುತ್ತದೆ. ಕನ್ಸ್ಟ್ರೇಂಟ್ ಹಾರ್ನ್ ಅಂಶಗಳು ಸಾಮಾನ್ಯ ಚೌಕಟ್ಟುಗಳಾಗಿರುವುದರಿಂದ  ಸುರಕ್ಷತಾ ಆಟಗಳಂತಹ ಅನೇಕ ಇತರ ಪರಿಶೀಲನೆ ಮತ್ತು ಸಂಶ್ಲೇಷಣೆಯ ಸಮಸ್ಯೆಗಳನ್ನು ಪ್ರತಿನಿಧಿಸುವುದರಿಂದ ಇವು ವ್ಯಾಪಕವಾಗಿ ಅಳವಡಿಕೆಗೆ ಒಳಗಾಗಬಲ್ಲವು.

ಇದು ಸುಮಂತ್ ಪ್ರಭು ಎಸ್ (ಟಿಸಿಎಸ್ ರಿಸರ್ಚ್ ಮತ್ತು ಐಐಎಸ್ಸಿ ), ಗ್ರಿಗರಿ ಫೆಡ್ಯುಕೋವಿಚ್ (ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿ), ಕುಮಾರ್ ಮಧುಕರ್ (ಟಿಸಿಎಸ್ ರಿಸರ್ಚ್, ಇಂಡಿಯಾ) ಮತ್ತು ದೀಪಕ್ ಡಿಸೋಜಾ (ಐಐಎಸ್ಸಿ) ನಡುವಿನ ಸಹಯೋಗದ   ಒಂದು ಸಂಶೋಧನೆ .

ಉಲ್ಲೇಖ: 

ಎಸ್. ಪ್ರಭು, ಜಿ. ಫೆಡ್ಯುಕೋವಿಚ್, ಕೆ. ಮಧುಕರ್, ಮತ್ತು ಡಿ. ಡಿ’ಸೋಜಾ.

ಸ್ಪೆಸಿಫಿಕೇಷನ್ ಸಿಂತಸಿಸ್ ವಿತ್ ಕನ್ಸ್ತ್ರೇನ್ಡ್ ಹಾರ್ನ್ ಕ್ಲಾಸಸ್ , ಟು ಅಪಿಯರ್ ಇನ್  ಪ್ರಾಕ್. ಎಸಿಎಂ ಸ್ ಐ ಜಿ ಪಿ ಎಲ್ ಎಎ ನ್.   ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಆನ್ ಪ್ರೋಗ್ರಾಮಿಂಗ್ ಲಾಂಗ್ವೇಜ್ ಡಿಸೈನ್ ಮತ್ತು ಇಂಪ್ಲಿಮೆಂಟೇಶನ್ (PLDI), 2021.

https://doi.org/10.1145/3453483.3454104 [ಸಮ್ಮೇಳನದ ನಂತರ ಲಭ್ಯವಿದೆ]

ಲ್ಯಾಬ್ ವೆಬ್‌ಸೈಟ್: 

https://www.csa.iisc.ac.in/~deepakd/