ಸಾಮಾನ್ಯ ಪ್ರಶ್ನೆಗಳು
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಲಭ್ಯವಿರುವ ಕಾರ್ಯಕ್ರಮಗಳು ಯಾವುವು? ಐಐಎಸ್‌ಸಿಗೆ ನಾನು ಹೇಗೆ ಪ್ರವೇಶ ಪಡೆಯಬಹುದು?
ಈ ಮಾಹಿತಿಯನ್ನು ಕೆಳಗಿನ ಚಾರ್ಟ್ ಒದಗಿಸುತ್ತದೆ.
ಪೂರ್ತಿ ವಿವರಗಳಿಗಾಗಿ ಚಿತ್ರದ ಮೇಲೆ ಕ್ಲಿಕ್ಕಿಸಿ .(ಪಿಡಿಎಫ್).
ಸಂಸ್ಥೆಯ ವೆಬ್‌ಸೈಟ್ www.iisc.ac.in/admissions ನಲ್ಲಿ ಆನ್‌ಲೈನ್ ಮಾಹಿತಿ ಇದೆ.
1. ವಿಜ್ಞಾನ ಪದವಿ(ಸಂಶೋಧನೆ) ಪದವಿಪೂರ್ವ ಕಾರ್ಯಕ್ರಮ – (4 ವರ್ಷಗಳು ಮುಗಿದ ನಂತರ ಮುಂದುವರಿಯಲು ಬಯಸುವ ವಿದ್ಯಾರ್ಥಿಗಳಿಗೆ ಮಾತ್ರ ವಿಜ್ಞಾನ ಸ್ನಾತಕ ಪದವಿಯನ್ನು ಒದಗಿಸಲಾಗುತ್ತದೆ)
2. ಕೋರ್ಸುಗಳು – ಎಂ ಟೆಕ್ / ಎಂ ಡಿಎಸ್ / ಎಂ ಎಂಜಿಟಿ
3. ಸಂಯೋಜಿತ ಪಿಎಚ್ ಡಿ ಕಾರ್ಯಕ್ರಮಗಳು
4. ಸಂಶೋಧನಾ ಕಾರ್ಯಕ್ರಮಗಳು – ಎಂ ಟೆಕ್ (ರೀಸರ್ಚ್) / ಪಿಎಚ್ ಡಿ
ನಾನು ಅನಿವಾಸಿ ಭಾರತೀಯ ಅಭ್ಯರ್ಥಿ, ನಾನು ಐಐಎಸ್ಸಿಯ ವಿವಿಧ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸಬಹುದೇ ?
ಸಂಸ್ಥೆಯಲ್ಲಿ ಭಾರತದ ಸಾಗರೋತ್ತರ ಪೌರತ್ವ ಅರ್ಜಿದಾರರ ಪ್ರವೇಶ
ವರ್ಗ -1: ಭಾರತದ ಪದವಿ ಪಡೆದ / ನಿವಾಸಿಯಾದ ಅನಿವಾಸಿ ಭಾರತೀಯ ವಿದ್ಯಾರ್ಥಿಗಳು. ಭಾರತದಲ್ಲಿ ವಾಸಿಸುವವರಿಗೆ ಅರ್ಹತೆಗೆ ಸಂಬಂಧಿಸಿದಂತೆ ಭಾರತದ ನಿವಾಸಿಯಾಗಿರುವವರಿಗೆ ಎಂ.ಟೆಕ್ ಮತ್ತು ಸಂಶೋಧನೆಗಳ ಪ್ರವೇಶಕ್ಕೆ ಭಾರತದಲ್ಲಿ ಬಿಎಸ್ (4 ವರ್ಷ) / ಬಿಇ / ಬಿ.ಟೆಕ್. / ಎಂ.ಎಸ್ಸಿ ಮತ್ತು ಪದವಿಗೆ ಪ್ರವೇಶಕ್ಕೆ 10 + 2 ಓದು ಅಗತ್ಯವಿರಬೇಕು. ಈ ವರ್ಗ -1ರ ವಿದ್ಯಾರ್ಥಿಗಳು ನಿಯತ ಪ್ರವೇಶ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ವರ್ಗ -1 ವಿದ್ಯಾರ್ಥಿಗಳಿಗೆ ಪ್ರತ್ಯೇಕ ಅರ್ಹತಾ ಪಟ್ಟಿ ಇಲ್ಲ , ಇವರು ಸಾಮಾನ್ಯ ವರ್ಗದಲ್ಲಿ ಅರ್ಹತೆ ಪಟ್ಟಿಯ ಭಾಗವಾಗಿರುತ್ತಾರೆ.
ವರ್ಗ -2: ವಿದೇಶದಲ್ಲಿ ನೆಲೆಸಿದ್ದಾರೆ ವಿದೇಶಿ ಪದವಿ ಪಡೆದ/ನಿವಾಸಿಯಾದ ಭಾರತದ ಸಾಗರೋತ್ತರ ಪೌರತ್ವ ವಿದ್ಯಾರ್ಥಿಗಳು. ವಿದೇಶದಲ್ಲಿ ಎಂ.ಟೆಕ್ ಮತ್ತು ಸಂಶೋಧನೆಗಳ ಪ್ರವೇಶಕ್ಕೆ ಬಿಎಸ್ (4 ವರ್ಷ) / ಬಿಇ / ಬಿ.ಟೆಕ್. / ಎಂ.ಎಸ್ಸಿ ಅಥವಾ ಅದರ ಸಮಾನ , ಮತ್ತು ಪದವಿಗೆ ಪ್ರವೇಶಕ್ಕೆ 10 + 2 ಅಥವಾ ಅದರ ಸಮಾನ ಅರ್ಹತೆಯನ್ನು ಪಡೆದಿರಬೇಕು . ಈಗಿನ ಅಂತರರಾಷ್ಟ್ರೀಯ ವಿದ್ಯಾರ್ಥಿ ಪ್ರವೇಶ ಪೋರ್ಟಲ್ ಮೂಲಕ ಅರ್ಜಿ ಅವರು ಸಲ್ಲಿಸಬೇಕು. ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಜಾರಿಯಾಗಿರುವ ಎಲ್ಲಾ ಪ್ರವೇಶ ನಿಯಮಗಳು ವರ್ಗ -2 ವಿದ್ಯಾರ್ಥಿಗಳಿಗೆ ಅನ್ವಯವಾಗುತ್ತವೆ.
ಐಐಎಸ್‌ಸಿಯಲ್ಲಿ ಎನ್‌ಆರ್‌ಐ ಕೋಟಾ ಇದೆಯೇ?
ಇಲ್ಲ, ಐಐಎಸ್‌ಸಿಯಲ್ಲಿ ಪ್ರವೇಶಕ್ಕಾಗಿ ಎನ್‌ಆರ್‌ಐ ಕೋಟಾ ಇಲ್ಲ. ಅಭ್ಯರ್ಥಿಯು ಸಾಮಾನ್ಯ ಪ್ರವೇಶ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
ಆನ್‌ಲೈನ್ ಅರ್ಜಿಯನ್ನು ಹೇಗೆ ಭರ್ತಿ ಮಾಡ ಬೇಕು?
ನಿಮ್ಮ ಇ-ಮೇಲ್ ( ಜಿಮೇಲ್ ಉತ್ತಮ) ವಿಳಾಸ ಮತ್ತು ಪಾಸ್‌ವರ್ಡ್‌ನೊಂದಿಗೆ ನೋಂದಾಯಿಸಿ ನಂತರ ಆನ್‌ಲೈನ್ ಅರ್ಜಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಹೊಸ ಬಳಕೆದಾರ ಖಾತೆ ರೂಪಿಸಿ. (ಹೊಸ ಬಳಕೆದಾರ ನೋಂದಣಿಗೆ ಇಲ್ಲಿ ಕ್ಲಿಕ್ಕಿಸಿ ). ನೋಂದಣಿಗೆ ಬಳಸುವ ಇಮೇಲ್ ಐಡಿಯನ್ನು ಆಮೇಲೆ ಬದಲಾಯಿಸಲಾಗುವುದಿಲ್ಲ. ನೋಂದಣಿಯ ನಂತರ, ಒಂದು ಪರಿಶೀಲನೆ ಇಮೇಲನ್ನು ನೋಂದಾಯಿಸಿದ ಇಮೇಲ್ ಖಾತೆಗೆ ಕಳುಹಿಸಲಾಗುತ್ತದೆ. ಆ ಇಮೇಲನ್ನು ದೃಢೀಕರಿಸಿ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಬಹುದು.
ಪ್ರವೇಶದ ಬಗ್ಗೆ ಕೆಲವು ಪ್ರಶ್ನೆಗಳಿದ್ದರೆ ಯಾರನ್ನು ಸಂಪರ್ಕಿಸಬೇಕು?
ನೀವು ಸ್ಪಷ್ಟೀಕರಣಕ್ಕೆ ಸಹಾಯಕ ರಿಜಿಸ್ಟ್ರಾರ್ (ಶಿಕ್ಷಣ), ಪ್ರವೇಶ ಘಟಕ, IISc admission.acad@iisc.ac.in ಗೆ ಇಮೇಲ್ ಕಳುಹಿಸಬಹುದು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿವಿಧ ಪಿಜಿ / ಪಿಎಚ್ ಡಿ ಕಾರ್ಯಕ್ರಮಗಳ ಶುಲ್ಕವೇನು?
ಪ್ರವೇಶ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುತ್ತದೆ, ಇಲ್ಲಿ ಕ್ಲಿಕ್ ಮಾಡಿ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪದವಿ ಕಾರ್ಯಕ್ರಮಕ್ಕಾಗಿ ಶುಲ್ಕವೇನು?
ಪ್ರವೇಶ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುತ್ತದೆ,, ಇಲ್ಲಿ ಕ್ಲಿಕ್ ಮಾಡಿ.
1. ವಿಜ್ಞಾನಪದವಿ (ಸಂಶೋಧನೆ) ಕಾರ್ಯಕ್ರಮ
- 12 ನೇ ತರಗತಿಯ ನಂತರ , ಐಐಎಸ್‌ಸಿಯಲ್ಲಿ ಯಾವುದೇ ಕೋರ್ಸು ಇದೆಯೇ?
- ಹೌದು, ಐಐಎಸ್‌ಸಿಯಲ್ಲಿ 4 ವರ್ಷದ ವಿಜ್ಞಾನ ಪದವಿ (ಸಂಶೋಧನೆ) ಕಾರ್ಯಕ್ರಮ ಒದಗಿಸಲಾಗುತ್ತದೆ. ಅಭ್ಯರ್ಥಿಯು ತಮ್ಮ 12ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತವನ್ನು ಓದಿರಬೇಕು. ಇದಲ್ಲದೇ, ಅಭ್ಯರ್ಥಿಯು ಕೆವಿಪಿವೈ / ಐಐಟಿ-ಜೆಇಇ (ಮುಖ್ಯ) ಅಥವಾ (ಮುಂದುವರೆದ) / ನೀಟ್-ಯುಜಿಗಳಂತಹ ಯಾವುದಾದರೂ ಒಂದು ರಾಷ್ಟ್ರೀಯ ಪರೀಕ್ಷೆಗಯಲ್ಲಿ ಪಾಸಾಗಿರಬೇಕು.
- ವಿಜ್ಞಾನ ಪದವಿ (ಸಂಶೋಧನೆ) ಕಾರ್ಯಕ್ರಮದಲ್ಲಿ ಯಾವ ವಿಷಯಗಳನ್ನು ಒದಗಿಸಲಾಗುತ್ತದೆ?
- ವಿಜ್ಞಾನ ಪದವಿ (ಸಂಶೋಧನೆ) ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಯಾವುದೇ ನಿರ್ದಿಷ್ಟ ವಿಷಯವಿಲ್ಲ. ವಿದ್ಯಾರ್ಥಿಯು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಭೂಮಿ ಮತ್ತು ಪರಿಸರ ವಿಜ್ಞಾನ ಮತ್ತು ಘನವಸ್ತು ವಿಷಯಗಳ ಬಗ್ಗೆ ಓದಲೇಬೇಕು. ವಿದ್ಯಾರ್ಥಿಯ ಆಸಕ್ತಿ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ನಾಲ್ಕನೇ ವರ್ಷದಲ್ಲಿ ಮಾತ್ರ ಒಂದು ವಿಶೇಷ ವಿಷಯವನ್ನು ಒದಗಿಸಲಾಗುವುದು.
- ವಿಜ್ಞಾನ ಪದವಿ (ಸಂಶೋಧನೆ) ಕಾರ್ಯಕ್ರಮದ ಅವಧಿಯೇನು?
- 4 ವರ್ಷಗಳು (8 ಅರ್ಧವಾರ್ಷಿಕ/ಸೆಮಿಸ್ಟರ್‌ಗಳು).
- ನಾನು ಪದವಿ ಕಾರ್ಯಕ್ರಮದಲ್ಲಿ ಜೀವಶಾಸ್ತ್ರ ವಿಷಯದಲ್ಲಿ ಅರ್ಜಿ ಸಲ್ಲಿಸಬಹುದೇ?
- ಇಲ್ಲ, ವಿಜ್ಞಾನ ಪದವಿ (ಸಂಶೋಧನೆ) ಕಾರ್ಯಕ್ರಮದಲ್ಲಿ ಯಾವುದೇ ನಿರ್ದಿಷ್ಟ ವಿಷಯವಿಲ್ಲ. ಕೋರ್ಸ್‌ಗಳಲ್ಲಿ ನೀವು ಜೀವಶಾಸ್ತ್ರವನ್ನು ಪ್ರಮುಖ ವಿಷಯವಾಗಿ ತೆಗೆದುಕೊಳ್ಳಬಹುದು.
- ಐಐಎಸ್ಸಿಯಲ್ಲಿ ವಾಯುಯಾನ/ಏರೋನಾಟಿಕಲ್ ಕೋರ್ಸು ಇದೆಯೇ?
- ಇಲ್ಲ, 10 + 2 ಅಭ್ಯರ್ಥಿಗಳಿಗೆ ಐಐಎಸ್ಸಿಯಲ್ಲಿ ಏರೋನಾಟಿಕಲ್ ಕೋರ್ಸು ಇಲ್ಲ.
- +2 ಅಭ್ಯರ್ಥಿಗಳಿಗೆ ಐಐಎಸ್ಸಿಯಲ್ಲಿ ಯಾವುದೇ ಎಂಜಿನಿಯರಿಂಗ್ ಕೋರ್ಸ್ ನೀಡಲಾಗುತ್ತದೆಯೇ?
- ಇಲ್ಲ, 10 + 2 ಅಭ್ಯರ್ಥಿಗಳಿಗೆ ಐಐಎಸ್ಸಿಯಲ್ಲಿ ಎಂಜಿನಿಯರಿಂಗ್ ಕೋರ್ಸ್ ಇಲ್ಲ.
- ಸೆಮಿಸ್ಟರ್ ಯಾವಾಗ ಪ್ರಾರಂಭವಾಗುತ್ತದೆ?
- ಆಗಸ್ಟ್ ತಿಂಗಳ ಮೊದಲ ಕೆಲಸದ ದಿನದಿಂದ ಸೆಮಿಸ್ಟರ್ ಪ್ರಾರಂಭವಾಗುತ್ತದೆ.
- ಪದವಿ ಕಾರ್ಯಕ್ರಮಕ್ಕೆ ಅರ್ಜಿ ಯಾವಾಗ ಸಿಗುತ್ತದೆ?
- ಪ್ರತಿ ವರ್ಷ ಫೆಬ್ರವರಿ 1 ರಿಂದ ಏಪ್ರಿಲ್ ಕೊನೆಯವರೆಗೆ ಆನ್‌ಲೈನ್ ಅಪ್ಲಿಕೇಶನ್ ಲಭ್ಯವಿರುತ್ತದೆ. ಆದರೆ ಆಫ್‌ಲೈನ್ ಅರ್ಜಿ ಸಿಗುವುದಿಲ್ಲ.
- ಪದವಿ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯಲು ಪ್ರಮುಖ ದಿನಗಳು ಯಾವುವು?
- ಪ್ರವೇಶ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುತ್ತದೆ, ಇಲ್ಲಿ ಕ್ಲಿಕ್ಕಿಸಿ
- ಹಿಂದಿನ ವರ್ಷದಲ್ಲಿ ಪದವಿ ಕಾರ್ಯಕ್ರಮದ ಪ್ರವೇಶಕ್ಕೆ ಅಗತ್ಯ ಅಂಕ ಎಷ್ಟಿತ್ತು ?
- ಪ್ರವೇಶ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುತ್ತದೆ, ಇಲ್ಲಿ ಕ್ಲಿಕ್ಕಿಸಿ
2. ಕೋರ್ಸುಕಾರ್ಯಕ್ರಮ(ಎಂ ಟೆಕ್ / ಎಂ ಡೆಸ್ / ಎಂ ಎಂಜಿಟಿ)
- ಎಂ ಟೆಕ್ / ಎಂಡಿಇಎಸ್ / ಎಂ ಎಂಜಿಟಿ ಕಾರ್ಯಕ್ರಮಗಳ ಪ್ರವೇಶಕ್ಕೆ ಆಯ್ಕೆ ವಿಧಾನವೇನು?
- ಪ್ರವೇಶ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುತ್ತದೆ, ಇಲ್ಲಿ ಕ್ಲಿಕ್ಕಿಸಿ
- ಎಂಟೆಕ್ ಕಾರ್ಯಕ್ರಮಗಳ ಪ್ರವೇಶಕ್ಕೆ ಆಯ್ಕೆ ವಿಧಾನದಲ್ಲಿ ಯಾವುದೇ ಸಂದರ್ಶನ ಅಥವಾ ಕೌಶಲ ಪರೀಕ್ಷೆಗಳಿವೆಯೇ ?
- ಪ್ರವೇಶ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುತ್ತದೆ, ಇಲ್ಲಿ ಕ್ಲಿಕ್ಕಿಸಿ
- ಎಂಡಿಇಎಸ್ ಕಾರ್ಯಕ್ರಮಗಳ ಪ್ರವೇಶಕ್ಕೆ ಆಯ್ಕೆ ವಿಧಾನದಲ್ಲಿ ಯಾವುದೇ ಸಂದರ್ಶನ ಅಥವಾ ಕೌಶಲ ಪರೀಕ್ಷೆಗಳಿವೆಯೇ ?
- ಪ್ರವೇಶ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುತ್ತದೆ, ಇಲ್ಲಿ ಕ್ಲಿಕ್ಕಿಸಿ
- ಎಂಎಂಜಿಟಿ ಕಾರ್ಯಕ್ರಮಗಳ ಪ್ರವೇಶಕ್ಕೆ ಆಯ್ಕೆ ವಿಧಾನದಲ್ಲಿ ಯಾವುದೇ ಸಂದರ್ಶನ ಅಥವಾ ಕೌಶಲ ಪರೀಕ್ಷೆಗಳಿವೆಯೇ ?
- ಪ್ರವೇಶ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುತ್ತದೆ, ಇಲ್ಲಿ ಕ್ಲಿಕ್ಕಿಸಿ
- ಎಂಟೆಕ್ / ಎಂಡಿಇಎಸ್ / ಎಂಎಂಜಿಟಿ ಕಾರ್ಯಕ್ರಮಗಳಿಗೆ ಗೇಟ್ ಪಾಸಾಗದೆ ಪ್ರವೇಶ ಸಾಧ್ಯವೇ?
- ಇಲ್ಲ, ಎಂಟೆಕ್ / ಎಂಡಿಇಎಸ್ / ಎಂಎಂಜಿಟಿ ಕಾರ್ಯಕ್ರಮಗಳಿಗೆ ಗೇಟ್ ಪಾಸಾಗದೆ ಪ್ರವೇಶ ಸಿಗುವುದಿಲ್ಲ.
- ನಾನು ಎಎಂಐಇ ಪದವಿಧರ.ನನಗೆ ಎಂ ಟೆಕ್ / ಸಂಶೋಧನೆ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಯಿದೆಯೇ?
- ಎಂಒಇ / ಯುಪಿಎಸ್ ಸಿ /ಎಐಸಿಟಿಇಗಳ ಮಾನ್ಯವಾದ ವೃತ್ತಿಪರ ಸಂಘಗಳ ಬಿಇ/ಬಿಟೆಕ್ ಸಮಾನ ಪರೀಕ್ಷೆಗಳು (ಉದಾ. ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ನ ಎಎಂಐಇ). ಗಮನಿಸಿ: 31. 5.2013 ರವರೆಗೆ ಪ್ರೊಫೆಷನಲ್ ಸೊಸೈಟಿಯೊಂದಿಗೆ (ಉದಾ. ಎಎಂಐಇ) ನೋಂದಣಿಯಾದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
- ನಾನು ಡಿಪ್ಲೊಮಾ ಮತ್ತು ಎಎಂಐಇ ಪದವಿ ಮಾಡಿದ್ದೇನೆ . ನನಗೆ ಎಂ ಟೆಕ್ / ಸಂಶೋಧನೆ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಯಿದೆಯೇ?
- ಎಂಒಇ / ಯುಪಿಎಸ್ ಸಿ /ಎಐಸಿಟಿಇಗಳ ಮಾನ್ಯವಾದ ವೃತ್ತಿಪರ ಸಂಘಗಳ ಬಿಇ/ಬಿಟೆಕ್ ಸಮಾನ ಪರೀಕ್ಷೆಗಳು (ಉದಾ. ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ನ ಎಎಂಐಇ). ಗಮನಿಸಿ: 31. 5.2013 ರವರೆಗೆ ಪ್ರೊಫೆಷನಲ್ ಸೊಸೈಟಿಯೊಂದಿಗೆ (ಉದಾ. ಎಎಂಐಇ) ನೋಂದಣಿಯಾದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
- ಎಂಟೆಕ್ / ಎಂಡಿಇಎಸ್ ಕಾರ್ಯಕ್ರಮಗಳಿಗೆ ಅರ್ಜಿಗೆ ಮಾನದಂಡಗಳು ಯಾವುವು?
- ಕನಿಷ್ಠ ಎರಡನೇ ದರ್ಜೆಯ ಬಿಇ / ಬಿ ಟೆಕ್ ಹಾಗೂ ಮಾನ್ಯವಾದ ಗೇಟ್ / ಸಿಇಡಿಯೊಂದಿಗೆ ಮಾನ್ಯ ಗೇಟ್ ಅಂಕವು ಎಂಟೆಕ್ / ಎಂಡಿಇಎಸ್ ಕಾರ್ಯಕ್ರಮಗಳಿಗೆ ಮಾನದಂಡವಾಗಿದೆ.
- ಎಂಟೆಕ್ / ಎಂಡಿಇಎಸ್ /ಎಂಎಂಜಿಟಿ ಕಾರ್ಯಕ್ರಮಗಳ ಅವಧಿಯೇನು?
- 2 ವರ್ಷಗಳು (4 ಸೆಮಿಸ್ಟರ್‌ಗಳು).
- ಎಂಟೆಕ್ / ಎಂಡಿಇಎಸ್ ಎರಡು ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತೇನೆ. ಒಂದೇ ಅರ್ಜಿಯ ಮೂಲಕ ಅರ್ಜಿ ಸಲ್ಲಿಸಬಹುದೇ ಅಥವಾ ಎರಡು ಬೇರೆ ಬೇರೆ ಅರ್ಜಿಗಳನ್ನು ಭರ್ತಿ ಮಾಡಬೇಕೇ?
- ಎಂಟೆಕ್ ಮತ್ತು ಎಂಡಿಎಸ್ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸಲು ಒಂದು ಅರ್ಜಿ ಹಾಕಿದರೆ ಸಾಕು. ಒಂದು ನಮೂನೆಯಲ್ಲಿ ಗರಿಷ್ಠ 5 ಆದ್ಯತೆಗಳನ್ನು ನಮೂದಿಸಬಹುದು.
- ಸೆಮಿಸ್ಟರ್ ಯಾವಾಗ ಪ್ರಾರಂಭವಾಗುತ್ತದೆ?
- ಪ್ರತಿ ವರ್ಷ ಆಗಸ್ಟ್ ತಿಂಗಳ ಮೊದಲ ಕೆಲಸದ ದಿನದಿಂದ ಸೆಮಿಸ್ಟರ್ ಪ್ರಾರಂಭವಾಗುತ್ತದೆ.
- ಕೋರ್ಸು ಕಾರ್ಯಕ್ರಮಕ್ಕೆ ಪ್ರವೇಶ ಪಡೆಯಲು ಪ್ರಮುಖ ದಿನಗಳು ಯಾವುವು?
- ಪ್ರವೇಶ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುತ್ತದೆ, ಇಲ್ಲಿ ಕ್ಲಿಕ್ಕಿಸಿ
3. ಸಂಯೋಜಿತ ಪಿಎಚ್ ಡಿ ಕಾರ್ಯಕ್ರಮ
- ಸಂಯೋಜಿತ ಪಿಎಚ್ ಡಿ ಕಾರ್ಯಕ್ರಮದಲ್ಲಿ ಸಿಗುವ ವಿಭಾಗಗಳು / ಶಾಖೆಗಳು ಯಾವುವು?
- ಜೈವಿಕ, ರಾಸಾಯನಿಕ, ಭೌತಿಕ ಮತ್ತು ಗಣಿತಶಾಸ್ತ್ರದಲ್ಲಿ ಸಂಯೋಜಿತ ಪಿಎಚ್ಡಿ ಕಾರ್ಯಕ್ರಮಗಳಿವೆ .
- ನಾನು ಎಂ ಎಸ್ ಸಿ ಜೈವಿಕತಂತ್ರಜ್ಞಾನ/ ಬಯೋಟೆಕ್ನಾಲಜಿ ಅಭ್ಯರ್ಥಿಯಾಗಿದ್ದು ಈಗ ಎರಡನೆಯ ಸೆಮಿಸ್ಟರ್‌ನಲ್ಲಿದ್ದೇನೆ ಹಾಗೂ ಸೂಕ್ಷ್ಮಜೀವಶಾಸ್ತ್ರದಲ್ಲಿ (ಮೈಕ್ರೋಬಯಾಲಜಿ) ಬಿಎಸ್‌ಸಿ ಮಾಡಿದ್ದೇನೆ. ಈಗ ನಾನು ಸಂಯೋಜಿತ ಪಿಎಚ್ ಡಿ ಕಾರ್ಯಕ್ರಮಕ್ಕೆ ಅರ್ಹವಾಗುತ್ತೇನಾ?
- ಪ್ರವೇಶ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುತ್ತದೆ, ಇಲ್ಲಿ ಕ್ಲಿಕ್ಕಿಸಿ
- ನಾನು ಬಿ ಎಸ್ ಸಿ ಭೌತಶಾಸ್ತ್ರ, ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನದ ಕೊನೆಯ ವರ್ಷದ ಅಭ್ಯರ್ಥಿಯಾಗಿದ್ದೇನೆ. ಈಗ ನಾನು ಸಂಯೋಜಿತ ಪಿಎಚ್ ಡಿ ಕಾರ್ಯಕ್ರಮಕ್ಕೆ ಅರ್ಹವಾಗುತ್ತೇನಾ?
- ಪ್ರವೇಶ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುತ್ತದೆ, ಇಲ್ಲಿ ಕ್ಲಿಕ್ಕಿಸಿ
- ನಾನು ಜೈವಿಕ ತಂತ್ರಜ್ಞಾನ, ಬಿ ಟೆಕ್ ಅಭ್ಯರ್ಥಿ . ಈಗ ನಾನು ಸಂಯೋಜಿತ ಪಿಎಚ್ ಡಿ ಮತ್ತು ಸಂಶೋಧನೆ ಕಾರ್ಯಕ್ರಮಕ್ಕೆ ಅರ್ಹವಾಗುತ್ತೇನಾ?
- ಪ್ರವೇಶ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುತ್ತದೆ, ಇಲ್ಲಿ ಕ್ಲಿಕ್ಕಿಸಿ
- ಸಂಯೋಜಿತ ಪಿಎಚ್ ಡಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಮಾನದಂಡಗಳು ಯಾವುವು?
- ಪ್ರವೇಶ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುತ್ತದೆ, ಇಲ್ಲಿ ಕ್ಲಿಕ್ಕಿಸಿ
- ಸಂಯೋಜಿತ ಪಿಎಚ್ ಡಿ ಕಾರ್ಯಕ್ರಮದ ಅವಧಿಯೇನು?
- ಸಂಯೋಜಿತ ಪಿಎಚ್ ಡಿ ಕಾರ್ಯಕ್ರಮದ ಅವಧಿಯು 7 ವರ್ಷಗಳು.
- ಸೆಮಿಸ್ಟರ್ ಯಾವಾಗ ಪ್ರಾರಂಭವಾಗುತ್ತದೆ?
- ಆಗಸ್ಟ್ ತಿಂಗಳ ಮೊದಲ ಕೆಲಸದ ದಿನದಿಂದ ಸೆಮಿಸ್ಟರ್ ಪ್ರಾರಂಭವಾಗುತ್ತದೆ
- ಸಂಯೋಜಿತ ಪಿಎಚ್ ಡಿ ಕಾರ್ಯಕ್ರಮದ ಪ್ರವೇಶಕ್ಕೆ ಪ್ರಮುಖ ದಿನಗಳು ಯಾವುವು.?
- ಪ್ರವೇಶ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುತ್ತದೆ, ಇಲ್ಲಿ ಕ್ಲಿಕ್ಕಿಸಿ
4. ಸಂಶೋಧನಾ ಕಾರ್ಯಕ್ರಮ (ಎಂ ಟೆಕ್ (ರೀಸರ್ಚ್) / ಪಿಎಚ್ ಡಿ
- ಸಂಶೋಧನೆ-ಎಂ ಟೆಕ್ (ರೀಸರ್ಚ್) ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಮಾನದಂಡಗಳು ಮತ್ತು ಅರ್ಹತೆಗಳು ಯಾವುವು?
- ಪ್ರವೇಶ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುತ್ತದೆ, ಇಲ್ಲಿ ಕ್ಲಿಕ್ಕಿಸಿ
- ಸಂಶೋಧನೆ-ಪಿಎಚ್ ಡಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಮಾನದಂಡಗಳು ಮತ್ತು ಅರ್ಹತೆಗಳು ಯಾವುವು?
- ಪ್ರವೇಶ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುತ್ತದೆ, ಇಲ್ಲಿ ಕ್ಲಿಕ್ಕಿಸಿ
- ನಾನು ಆನ್‌ಲೈನ್ ಸಂಶೋಧನಾ ನಮೂನೆಯಲ್ಲಿ ನಿರ್ದಿಷ್ಟವಾಗಿ ಎಂ ಟೆಕ್ (ರೀಸರ್ಚ್) ಅಥವಾ ಪಿಎಚ್ ಡಿಗೆ ಅರ್ಜಿ ಸಲ್ಲಿಸಬಹುದೇ?
- ಇಲ್ಲ, ನೀವು ಆನ್‌ಲೈನ್ ಸಂಶೋಧನಾ ನಮೂನೆಯಲ್ಲಿ ನಿರ್ದಿಷ್ಟವಾಗಿ ಎಂ ಟೆಕ್ (ರೀಸರ್ಚ್) ಅಥವಾ ಪಿಎಚ್ ಡಿ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲಾಗದು. ಸಂಶೋಧನಾ ನಮೂನೆಯಲ್ಲಿ ಅಂತಹ ಯಾವುದೇ ಆಯ್ಕೆಗಳಿಲ್ಲ. ವಿಭಾಗದ ಸಂದರ್ಶನ ಸಮಿತಿಯೊಂದಿಗೆ ಸಂದರ್ಶನದ ಸಮಯದಲ್ಲಿ ಎಂ ಟೆಕ್ (ಸಂ) ಅಥವಾ ಪಿಎಚ್ ಡಿ ಕಾರ್ಯಕ್ರಮಕ್ಕೆ ಸೇರುವ ಆಯ್ಕೆಯನ್ನು ಮಾತ್ರ ನೀಡಬಹುದು.
- ನಾನು ಎಂ ಟೆಕ್ / ಎಂಇ / ಎಂಡಿಇಎಸ್ / ಎಂ ಎಸ್ ಸಿ (ಎಂಜಿ) ಅಥವಾ ( ಎಂಬಿಎ ಅಥವಾ ಎಂಎಸ್ ಅಥವಾ ಪಿಜಿಡಿಬಿಎಂ ಅಥವಾ ಪಿಜಿಡಿಸಿಎ ( ಬಿಇ / ಬಿ ಟೆಕ್ ನಂತರ) / ಎಂ ಎಸ್ಸಿ (ಟೆಕ್) / ಎಂ ಆರ್ಕ್ / ಎಂ ಫಾರ್ಮ್ / ಎಂಬಿಬಿಎಸ್ / ಎಂ ಅಗ್ರಿ / ಎಂ ವಿ ಎಸ್ ಸಿ ಪದವಿ ಮಾಡಿದ್ದೇನೆ. ಸಂಶೋಧನಾ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯಲು ನಾನು ಯಾವುದೇ ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ ಪಾಸಾಗಬೇಕೇ?
- ಪ್ರವೇಶ ವೆಬ್‌ಸೈಟ್‌ನಲ್ಲಿ ಮಾಹಿತಿ ಸಿಗುತ್ತದೆ, ಇಲ್ಲಿ ಕ್ಲಿಕ್ಕಿಸಿ
- ಬಿಇ, ಇಸಿಇ ಅಭ್ಯರ್ಥಿ ಆದರೆ ನನಗೆ ಗೇಟ್ ಅಂಕವಿಲ್ಲ, ನಾನು ಎಂ ಟೆಕ್ (ರೀಸರ್ಚ್) ಕಾರ್ಯಕ್ರಮಕ್ಕೆ ಅರ್ಹವಾಗುತ್ತೇನಾ?
- ಎಲ್ಲಾ ಸಂಶೋಧನಾ ಕಾರ್ಯಕ್ರಮಗಳಿಗೆ ಎಂಜಿನಿಯರಿಂಗ್ ವಿಭಾಗಗಳ ಎಲ್ಲಾ ಬಿಇ / ಬಿಟೆಕ್ / ಬಿ ಎಸ್ ಸಿ (ಎಂಜಿ) ಅಭ್ಯರ್ಥಿಗಳು ಮಾನ್ಯ ಗೇಟ್ ಅಂಕ ಹೊಂದಿರಬೇಕು.
- ನಾನು ಮೂರು ವಿಭಾಗಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತೇನೆ. ಒಂದೇ ಅರ್ಜಿಯ ಮೂಲಕ ಅರ್ಜಿ ಸಲ್ಲಿಸಬಹುದೇ ಅಥವಾ ಮೂರು ಬೇರೆ ಬೇರೆ ಅರ್ಜಿಗಳನ್ನು ಭರ್ತಿ ಮಾಡಬೇಕೇ?
- ಸಂಶೋಧನಾ ಕಾರ್ಯಕ್ರಮದ ಮೂರು ವಿಭಾಗಗಳಿಗೆ ಅರ್ಜಿ ಸಲ್ಲಿಸಲು ಒಂದೇ ಅರ್ಜಿ ನಮೂನೆ ಸಾಕು.
- ನಾನು ಕಂಪ್ಯೂಟರ್ ವಿಜ್ಞಾನ ಗಣಿತ ಮತ್ತು ಎಲೆಕ್ಟ್ರಾನಿಕ್ಸ್ ನಲ್ಲಿ ಬಿ ಎಸ್ ಪದವಿ ಪಡೆದಿದ್ದೇನೆ. ಎಂ ಟೆಕ್ (ಸಂ) ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಅರ್ಹವಾಗುತ್ತೇನಾ?
- ಇಲ್ಲ ನೀವು ಅರ್ಹರಲ್ಲ. ನೀವು ಸಂಶೋಧನಾ ಕಾರ್ಯಕ್ರಮದಲ್ಲಿ ಎಂ ಟೆಕ್ (ರೀಸರ್ಚ್) ಅರ್ಜಿ ಸಲ್ಲಿಸಲು ಮಾನ್ಯ ಗೇಟ್ ಅಂಕದೊಂದಿಗೆ ಎಂ ಎಸ್ ಸಿ ಪದವಿ ಪಡೆದಿರಬೇಕು.
- ಐಐಎಸ್ ಸಿಯಲ್ಲಿ ಸೆಮಿಸ್ಟರ್ ಯಾವಾಗ ಪ್ರಾರಂಭವಾಗುತ್ತದೆ?
- ಆಗಸ್ಟ್ ತಿಂಗಳ ಮೊದಲ ಕೆಲಸದ ದಿನದಿಂದ ಸೆಮಿಸ್ಟರ್ ಪ್ರಾರಂಭವಾಗುತ್ತದೆ
- ಪಿಎಚ್ ಡಿ ಕಾರ್ಯಕ್ರಮದ ಅವಧಿಯೇನು?
- ಕನಿಷ್ಟ ಮೂರು ವರ್ಷ ಮತ್ತು ಗರಿಷ್ಟ 6 ವರ್ಷ
- ನಾನು ಬಿಟೆಕ್ ಪದವಿಯೊಂದಿಗೆ ಎಂಬಿಎ ಮಾಡಿದ್ದೇನೆ.ನಾನು ಮ್ಯಾನೇಜುಮೆಂಟ್ ಸ್ಟಡಿಸ್ ನಲ್ಲಿ ಪಿಎಚ್ ಡಿ ಮಾಡಲು ರಾಷ್ಟ್ರೀಯ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಬೇಕೇ?
- ಬಿಇ /ಬಿಟೆಕ್ ನಂತರ ಎಂಬಿಎ ಪದವಿ ಮಾಡಿದ ಅಭ್ಯರ್ಥಿಗಳು ರಾಷ್ಟ್ರೀಯ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಬೇಕಿಲ್ಲ.ಅರ್ಹ ಪದವಿಯಲ್ಲಿ ನಿಮ್ಮ ಕಾರ್ಯಕ್ಷಮತೆಯ ಆಧಾರದಲ್ಲಿ ನಿಮಗೆ ಸಂದರ್ಶನಕ್ಕೆ ಕರೆಯಲಾಗುತ್ತದೆ
- ಎಂಟೆಕ್(ರೀಸರ್ಚ್) ಕಾರ್ಯಕ್ರಮದ ಅವಧಿಯೇನು?
- ಎಂಟೆಕ್(ರೀಸರ್ಚ್) ಕಾರ್ಯಕ್ರಮದ ಅವಧಿ ಎರಡು ವರ್ಷಗಳು
- ನಾನು ಒಂದಕ್ಕಿಂತ ಹೆಚ್ಚು ಕಾರ್ಯಕ್ರಮಕ್ಕೆ ಅರ್ಜಿ ಹಾಕಬಹುದೇ?
- ಹೌದು, ನಿಮ್ಮ ಅರ್ಹತೆಗಳ ಆಧಾರದಲ್ಲಿ ನೀವು ಒಂದಕ್ಕಿಂತ ಹೆಚ್ಚು ಕಾರ್ಯಕ್ರಮಕ್ಕೆ ಅರ್ಜಿ ಹಾಕಬಹುದು. ಆದರೆ ನೀವು ಆನ್ಲೈನ್ ನಮೂನೆಗಳನ್ನು ಸರಿಯಾಗಿ ಭರ್ತಿಮಾಡಬೇಕು. ಅರ್ಜಿದಾರರ ಇಂಟರ್ ಫೇಸಿನಲ್ಲಿ ‘ಇನ್ನೊಂದು ಕಾರ್ಯಕ್ರಮಕ್ಕೆ ಅರ್ಜಿ ಹಾಕಿ’ ಎಂಬ ಲಿಂಕ್ ಇದೆ.ಅದನ್ನು ಬಳಸಿ ನೀವು ಇನ್ನೊಂದು ಕಾರ್ಯಕ್ರಮದ ನಮೂನೆಯನ್ನು ಭರ್ತಿಮಾಡಬಹುದು.
- ಸಂಶೋಧನೆ ಕಾರ್ಯಕ್ರದ ಪ್ರವೇಶಕ್ಕೆ ಮುಖ್ಯ ದಿನಗಳು ಯಾವುವು?
- https://iisc.ac.in/important-dates/ ಪ್ರವೇಶ ವೆಬ್ ಸೈಟಿನಲ್ಲಿ ಸಿಗುತ್ತದೆ , ಇಲ್ಲಿ ಕ್ಲಿಕ್ಕಿಸಿ
- ಪಿಎಚ್ ಡಿ ಕಾರ್ಯಕ್ರಮಗಳ ಮಧ್ಯಂತರ ಪ್ರವೇಶ ಯಾವಾಗ ನಡೆಯುತ್ತದೆ ಅಥವಾ ನಮೂನೆಗಳು ಯಾವಾಗ ಸಿಗುತ್ತವೆ?
- ಮಧ್ಯಂತರ ಪಿಎಚ್ ಡಿ ಕಾರ್ಯಕ್ರಮ ಪ್ರವೇಶಕ್ಕೆ ನಮೂನೆಗಳು ಆನ್ಲೈನಿನಲ್ಲಿ ಅಕ್ಟೋಬರ್ ತಿಂಗಳು ಸಿಗುತ್ತವೆ
- ಮಧ್ಯಂತರ ಪಿಎಚ್ ಡಿ ಕಾರ್ಯಕ್ರಮ ಪ್ರವೇಶ ವೇಳಾಪಟ್ಟಿಯನ್ನು ತಿಳಿಸಿ?
- ಸಂಗತಿಗಳು ದಿನಆನ್ಲೈನ್ ಅರ್ಜಿ ಸಲ್ಲಿಕೆಗೆ ವೆಬ್ ಸೈಟ್ ತೆರೆಯುವುದು ಅಕ್ಟೋಬರ್ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಗಳು ಅಕ್ಟೋಬರ್ 30
(ವೆಬ್ ಸೈಟ್ 23.49 ಗಂಟೆಗೆ ಮುಚ್ಚುತ್ತದೆ)
ಸಂಶೋಧನೆ ಕಾರ್ಯಕ್ರಮಕ್ಕೆ ಸಂದರ್ಶನ ನವೆಂಬರ್ ಮಧ್ಯೆ
ಐಐಎಸ್ ಸಿ ಗೆ ವರದಿ ಮಾಡಿಕೊಳ್ಳುವ ದಿನ ಡಿಸೆಂಬರ್ 31
ತರಗತಿಗಳ ಆರಂಭ ಜನವರಿ 1