ಡೀನ್, ಎಂಜಿನಿಯರಿಂಗ್ ಶಾಖೆ
ಪ್ರೊ ವಿನೋದ್ ಶರ್ಮ
ಇ-ಮೇಲ್: dean.engg@iisc.ac.in
ದೂರವಾಣಿ: 91- 80 – 2293 2044
ಡೀನ್, ವಿಜ್ಞಾನ ಶಾಖೆ
ಪ್ರೊ ಉಮೇಶ್ ವರ್ಸ್ನೆ
ಇ-ಮೇಲ್: dean.sci@iisc.ac.in
ದೂರವಾಣಿ: 91- 80 – 2293 3355
ಡೀನ್, ಪದವಿಹಂತದ ಶೈಕ್ಷಣಿಕ ಕೋರ್ಸ್ (ಅಂಡರ್ ಗ್ರ್ಯಾಜುಯೇಟ್ ಪ್ರೋಗ್ರ್ಯಾಮ್)
ಪ್ರೊ. ಬಾಲಾಜಿ ಜಾಗಿರ್ದಾರ್
ಇ-ಮೇಲ್: dean.ug@iisc.ac.in
ದೂರವಾಣಿ: 91-80-2293 3554/2825/3184
ಬಾಲಾಜಿ ಜಾಗೀರ್ದಾರ್ರವರು 1989ರಲ್ಲಿ ಐಐಟಿ-ಬಾಂಬೆಯಿಂದ ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಮತ್ತು 1994ರಲ್ಲಿ ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿಯಿಂದ ರಸಾಯನಶಾಸ್ತ್ರದಲ್ಲಿ ಪಿಎಚ್ಡಿ. ಪದವಿ ಗಳಿಸಿದರು. ಭಾರತಕ್ಕೆ ಮರಳುವ ಮೊದಲು 1994-95ರಲ್ಲಿ ಬೌಲ್ಡರ್ನ ಕೊಲೊರಾಡೋ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ಡಾಕ್ ಆಗಿ ಒಂದೂವರೆ ವರ್ಷ ಕೆಲಸ ಮಾಡಿದರು. ನಂತರ ಅಕ್ಟೋಬರ್ 1995ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಅಜೈವಿಕ ಮತ್ತು ಭೌತಿಕ ರಸಾಯನಶಾಸ್ತ್ರದ ವಿಭಾಗದಲ್ಲಿ ಅಧ್ಯಾಪಕರಾಗಿ ಸೇರಿದರು. ಉಪನ್ಯಾಸಕರಾಗಿ ಸೇರಿಕೊಂಡ ಅವರು 2011ರಲ್ಲಿ ಪೂರ್ಣ ಪ್ರಾಧ್ಯಾಪಕ ಹುದ್ದೆಗೆ ಏರಿದರು. ಆರ್ಗ್ಯಾನೊಮೆಟಾಲಿಕ್ ಸಂಯುಕ್ತಗಳನ್ನು ಬಳಸಿಕೊಂಡು ಸಣ್ಣ ಅಣುಗಳನ್ನು ಸಕ್ರಿಯಗೊಳಿಸುವುದು, ಏಕರೂಪ ಮತ್ತು ವಿವಿಧ ರೂಪಗಳ ವೇಗವರ್ಧನೆ, ಹೈಡ್ರೋಜನ್ ಸಂಗ್ರಹಣೆ ಮತ್ತು ಉತ್ಪಾದನೆಗೆ ಸಂಬಂಧಿಸಿದ ವಸ್ತುಗಳು ಅವರ ಸಂಶೋಧನಾ ಆಸಕ್ತಿಗಳಲ್ಲಿ ಸೇರಿವೆ.
ಅಸೋಸಿಯೇಟ್ ಡೀನ್, ಪದವಿಹಂತದ ಶೈಕ್ಷಣಿಕ ಕೋರ್ಸ್ (ಅಂಡರ್ ಗ್ರ್ಯಾಜುಯೇಟ್ ಪ್ರೋಗ್ರ್ಯಾಮ್)
ಪ್ರೊ ನಾಗಸುಮ ಚಂದ್ರ
ಇ-ಮೇಲ್: ascdean.ugacad@iisc.ac.in
ದೂರವಾಣಿ: 91- 80 – 2293 3554/2892
91-80-2360-1552 / 2360-0683
ನಾಗಸುಮ ಚಂದ್ರ ಅವರು ಯುನೈಟೆಡ್ ಕಿಂಗ್ ಡಮ್ ಬ್ರಿಸ್ಟಲ್ ವಿಶ್ವವಿದ್ಯಾಲಯದಿಂದ 1992ರಲ್ಲಿ ಪಿಎಚ್.ಡಿ. ಪದವಿ ಗಳಿಸಿದ್ದಾರೆ. ಸಂರಚನಾ ಜೀವಶಾಸ್ತ್ರ ಕ್ಷೇತ್ರದಲ್ಲಿ ನೆಹರು ಸೆಂಟೆನರಿ ಫೆಲೋಷಿಪ್ ಮೂಲಕ ಅವರು ಪಿಎಚ್.ಡಿ. ವ್ಯಾಸಂಗ ಮಾಡಿದರು. ನಂತರ, ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಸೇರಿದರು. ಪೋಸ್ಟ್ ಡಾಕ್ಟೋರಲ್ ಫೆಲೋ ಆಗಿ ಸಂಸ್ಥೆ ಸೇರಿದ ಅವರು ನಂತರ ತಮ್ಮದೇ ಸಂಶೋಧನಾ ತಂಡ ರಚಿಸಿದರು. ಪ್ರಸ್ತುತ ಅವರು ಜೀವರಸಾಯನ ಶಾಸ್ತ್ರ ವಿಭಾಗದಲ್ಲಿ ಪ್ರೊಫಸರ್ ಆಗಿದ್ದಾರೆ. ಜೊತೆಗೆ, ಸಂಸ್ಥೆಯ ಜೈವಿಕ ಎಂಜಿನಿಯರಿಂಗ್ ಮತ್ತು ಗಣಿತೀಯ ಜೀವಶಾಸ್ತ್ರ ಉಪಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಮಾಲಿಕ್ಯುಲರ್ ಸಿಸ್ಟಮ್ಸ್ ಬಯಾಲಜಿ ಕ್ಷೇತ್ರವನ್ನು ಸ್ಥಾಪಿಸಿದ ಶ್ರೇಯ ಅವರದ್ದಾಗಿದೆ. ಸಂಸ್ಥೆಯಲ್ಲಿ ಜೈವಿಕ ಮಾಹಿತಿ (ಬಯೋಇನ್ ಫರ್ಮ್ಯಾಟಿಕ್ಸ್) ಅಭಿವೃದ್ಧಿಪಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಂಕೀರ್ಣ ಜೈವಿಕ ಪ್ರಕ್ರಿಯೆಗಳ ಕಾಂಪ್ಯುಟೇಷನಲ್ ಮಾಡೆಲಿಂಗ್ ಅವರ ಅಂತರಶಿಸ್ತು ಸಂಶೋಧನೆಯಾಗಿದೆ. ಅವರು, ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ನ ಚುನಾಯಿತ ಗೌರವ ಸದಸ್ಯ ಆಗಿದ್ದಾರೆ.