– ಜೋಯಲ್ ಪಿ ಜೋಸೆಫ್
ಹವಾಮಾನ ಬದಲಾವಣೆಯು ಗಂಭೀರವಾಗಿ ಕಟ್ಟಡಗಳ ಬಾಳಿಕೆ, ಒಳಾಂಗಣ ತಾಪಮಾನ ಮತ್ತು ಶಕ್ತಿ ಅಗತ್ಯ/ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ. ಭಾರತವು ತನ್ನ ವಿಭಿನ್ನ ಭೂಪ್ರದೇಶ ಮತ್ತು ಹವಾಮಾನ ವಲಯಗಳಲ್ಲಿ ವಿವಿಧ ಸಾಂಪ್ರದಾಯಿಕ ಮನೆ ರಚನೆಗಳನ್ನು ಹೊಂದಿದೆ. ಇಂದು ಜನಸಮುದಾಯವು ನಗರಗಳಲ್ಲಿ ಸ್ಥಳೀಯವಾಗಿ ಸಿಗುವ ಕಟ್ಟಡ ಸಾಮಗ್ರಿಗಳು ಮತ್ತು ತಿಳಿವಳಿಕೆಯ ಆಧಾರವಾಗಿರುವ ಸಾಂಪ್ರದಾಯಿಕ ಮನೆಗಳಿಂದ ಕ್ರಮೇಣವಾಗಿ ಆಧುನಿಕ ಮನೆಗಳ ರಚನೆಗೆ ಮೊರೆಹೋಗಿ ಬಹಳಷ್ಟು ಬದಲಾಗಿದೆ. ಇದನ್ನು ನಾವು ಹಳ್ಳಿ ಪ್ರದೇಶಗಳಲ್ಲಿ ಕೂಡ ಕಾಣಬಹುದು.
ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್ ಫಾರ್ ಸಸ್ಟೇನಬಲ್ ಟೆಕ್ನಾಲಜೀಸ್ ವಿಭಾಗದ ಖದೀಜಾ ಹೆನ್ನಾ, ಆಯಿಷಾ ಸೈಫುದ್ದೀನ್ ಮತ್ತು ಮಾಂಟೊ ಮಣಿಯವರು ಇತ್ತೀಚೆಗೆ ಹವಾಮಾನ ಬದಲಾವಣೆಗೆ ಕಾರಣವಾದ ಎರಡು ಪ್ರಮುಖ ಅಂಶಗಳ ಬಗ್ಗೆ ಅಧ್ಯಯನ ಮಾಡಿದರು. ಅವರು ಸಮಾನ ತಾಪಮಾನ, ಬೆಚ್ಚನೆಯ ತೇವಾಂಶದ ಮತ್ತು ಮತ್ತು ತಂಪು ಹವಾಮಾನಗಳ ಭಾರತದ ಮೂರು ಬೇರೆ ಬೇರೆ ಹಳ್ಳಿಗಳ ಮನೆಗಳಲ್ಲಿ ಅಧ್ಯಯನ ಮಾಡಿ ಮೌಲ್ಯಮಾಪನ ಮಾಡಿದರು. ಸಂಶೋಧಕರು ಡೇಟಾ ಲಾಗರ್ಗಳನ್ನು ಬಳಸಿ ಈ ಮನೆಗಳ ಒಳ ತಾಪಮಾನವನ್ನು ಪ್ರತಿ 30 ನಿಮಿಷಗಳಿಗೊಮ್ಮೆಯಂತೆ ಒಂದು ವರ್ಷದವರೆಗೆ ದಾಖಲಿಸಿದರು. ಈ ದಾಖಲೆಗಳ ಆಧಾರದಲ್ಲಿ ಮುಂದಿನ ದಿನಗಳಲ್ಲಿ ಒಳ ತಾಪಮಾನ ಹೇಗಿರುತ್ತದೆಂದು ಊಹಿಸಲು ಗಣಿತದ ನಮೂನೆಯನ್ನು ರಚಿಸಿದರು. ನಂತರ ಈ ತಂಡವು ವಿವಿಧ ಹಸಿರುಮನೆ ಅನಿಲ ಹೊರಸೂಸುವಿಕೆಯ ಮಟ್ಟಗಳು ಮುಂದಿನ ದಿನಗಳಲ್ಲಿ ಹೇಗಿರುತ್ತವೆಂದು ತಿಳಿಯಲು ಮೂರು ಜಾಗತಿಕ ವಿಭಿನ್ನ ತಾಪಮಾನ ಸನ್ನಿವೇಶಗಳನ್ನು ರೂಪಿಸಿದರು. ಈ ಸನ್ನಿವೇಶಗಳಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ವಸ್ತುಗಳನ್ನು ಬಳಸಿ ರೂಪಿಸಿದ ಬೇರೆ ಬೇರೆ ಮನೆಗಳು ಹೇಗಿರುತ್ತವೆಂದು ಅಂದಾಜು ಮಾಡಿದರು.
ಮೇಲಿನ ಎಲ್ಲಾ ಮೂರು ಹವಾಮಾನಗಳಲ್ಲಿ ಮರದ ಗೋಡೆಗಳು ಅಥವಾ ಹಂಚಿನ ಚಾವಣಿಯ ಸಾಂಪ್ರದಾಯಿಕ ಮನೆಗಳು ಆಧುನಿಕ ಮನೆಗಳಿಗೆ ಹೋಲಿಸಿದರೆ ಹವಾಮಾನ ಬದಲಾವಣೆಗೆ ಕಡಿಮೆ ಪ್ರಭಾವಿತವಾಗುತ್ತವೆ. ತಂಪು ಹವಾಮಾನಗಳಲ್ಲಿ ಸಾಂಪ್ರದಾಯಿಕ ಮನೆಗಳು ಹೆಚ್ಚು ಬೆಚ್ಚಗಾಗಿ ವಾಸಿಸಲು ಹೆಚ್ಚು ಸೂಕ್ತವಾಗಿತ್ತವೆ. ಬೆಚ್ಚನೆಯ ತೇವಾಂಶದ ಮತ್ತು ಸಮಾನ ತಾಪಮಾನ ಹವಾಮಾನ ವಲಯಗಳಲ್ಲಿ ಆಧುನಿಕ ಮನೆಗಳಲ್ಲಿ ಒಳಗಿನ ತಾಪಮಾನ ಸ್ವಲ್ಪ ಹೆಚ್ಚಾಗಿರುತ್ತದೆ. ಆದ್ದರಿಂದ ಅಲ್ಲಿ ಕೃತಕ ಹವಾನಿಯಂತ್ರಣದ ಮೇಲೆ ಹೆಚ್ಚು ಅವಲಂಬಿಸ ಬೇಕಾಗುತ್ತದೆ. ಇದರಿಂದ ಜಾಗತಿಕ ತಾಪಮಾನ ಮತ್ತಷ್ಟು ಹೆಚ್ಚುತ್ತದೆ. ಆದ್ದರಿಂದ, ಈ ಅಧ್ಯಯನವು ಸಾಂಪ್ರದಾಯಿಕ ಮನೆಗಳ ವಿನ್ಯಾಸಗಳು ಈ ಸಮಸ್ಯೆಯನ್ನು ಬಗೆಹರಿಸಲು ಸಹಾಯ ಮಾಡುತ್ತವೆ ಮತ್ತು ಹವಾಮಾನ ಬದಲಾವಣೆಗೆ ಹೊಂದಿಕೊಳ್ಳಲು ಪರಿಹಾರಗಳನ್ನು ಹೊಂದಿವೆ ಎಂಬುದನ್ನು ಸೂಚಿಸುತ್ತದೆ.
ಉಲ್ಲೇಖ:
ಹೆನ್ನಾ ಕೆ ಸೈಫುದ್ದೀನ್, ಎ. ಮತ್ತು ಮಣಿ, ಎಂ. ರೆಸಿಲೆನ್ಸ್ ಆಫ್ ವರ್ನಾಕುಲರ್ ಅಂಡ್ ಮಾಡರ್ನೈಸಿಂಗ್ ಡ್ವೆಲಿಂಗ್ಸ್ ಇನ್ ತ್ರಿ ಕ್ಲೈಮಾಟಿಕ್ ಜೋನ್ಸ್ ಟು ಕ್ಲೈಮೇಟ್ ಚೇಂಜ್ ಎಸ್ ಸಿ ಐ ಆರ್ ಇ ಪಿ 11, 9172 (2021).
https://doi.org/10.1038/s41598-021-87772-0
ಲ್ಯಾಬ್ ವೆಬ್ಸೈಟ್: