ಐಐಎಸ್ಸಿಗೆ ಭೇಟಿ ಕೊಡಿ

ಐಐಎಸ್ಸಿ ತಲುಪುವುದು ಹೇಗೆ

ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಮತ್ತು ಮೆಜೆಸ್ಟಿಕ್ ನಿಂದ ಐಐಎಸ್ಸಿ ತಲುಪುವ ಮಾರ್ಗ

ಬೆಂಗಳೂರಿಗೆ ದೇಶದ ಪ್ರಮುಖ ಮಹಾನಗರ ಮತ್ತು ಹೆಚ್ಚಿನ ನಗರಗಳಿಂದ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಸಂಪರ್ಕವಿದೆ. ಅಲ್ಲದೆ, ಹಲವಾರು ಅಂತರರಾಷ್ಟೀಯ ವಿಮಾನ ನಿಲ್ದಾಣಗಳಿಂದ ಬೆಂಗಳೂರಿಗೆ ನೇರ ವಿಮಾನ ಸಂಪರ್ಕವಿದೆ.
ಸಂಸ್ಥೆಯು ವಿಮಾನ ನಿಲ್ದಾಣದಿಂದ ಸುಮಾರು 35 ಕಿ.ಮೀ ದೂರವಿದ್ದು ಪ್ರಿಪೇಡ್ ಟ್ಯಾಕ್ಸಿ (ಪ್ರಸ್ತುತ ಪ್ರಯಾಣದರ ರೂ.750, ವಿಮಾನ ನಿಲ್ದಾಣದ ನಿರ್ಗಮನದ ಬಳಿ ಕೌಂಟರ್ ಲಭ್ಯವಿದೆ) ಅಥವಾ ನಗರ ಟ್ಯಾಕ್ಸಿ (ಪ್ರಯಾಣದರ ಸುಮಾರು ರೂ.700). ಐಐಎಸ್ಸಿ ಅನ್ನು ಸ್ಥಳೀಯರು “ಟಾಟಾ ಸಂಸ್ಥೆ” ಎಂದು ಕರೆಯುತ್ತಾರೆ. ಸಂಸ್ಥೆಯು ಬೆಂಗಳೂರಿನ ಮೆಕ್ರಿ ವೃತ್ತದ ಹಿಂದಿದ್ದು ಮತ್ತು ಯಶವಂತವಪುರ ಮಾರ್ಗದಲ್ಲಿದೆ. ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಫೋರ್ಟ್ ಕಾರ್ಪೊರೇಷನ್ (ಬಿ.ಎಂ.ಟಿ.ಸಿ) ಪ್ರತಿ 15 ನಿಮಿಷಕ್ಕೆ ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಸಾಗುತ್ತದೆ, ಬಿ.ಎಂ.ಟಿ.ಸಿ ಬಸ್ ವಿವರವನ್ನು ಇಲ್ಲಿ ಕಾಣಬಹುದು. ವಿಮಾನ ನಿಲ್ದಾಣದ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿಮಾಡಿ (http://www.bengaluruairport.com/).

ಸಂಸ್ಥೆಯು ನಗರ ರೈಲ್ವೇ ನಿಲ್ದಾಣದಿಂದ 7 ಕಿ.ಮೀ ದೂರವಿದೆ. ಒಂದನೆ ಫ್ಲಾಟ್ ಫಾಮ್ ನಿಂದ ಪ್ರಿಪೇಡ್ ಟ್ಯಾಕ್ಸಿ ನಿಲ್ದಾಣ ತಲುಪಿ, ಟ್ಯಾಕ್ಸಿಯನ್ನು ಬಾಡಿಗೆಗೆ ಪಡೆಯಬಹುದು (ಪ್ರಯಾಣದರ ಸುಮಾರು ರೂ.150). ಮೆಜೆಸ್ಟಿಕ್ (ಐಐಎಸ್ಸಿನಿಂದ 7 ಕಿ. ಮೀ) ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣವಾಗಿದ್ದು ಸಿಟಿ ರೈಲ್ವೇ ನಿಲ್ದಾಣದ ಎದುರಾಗಿದೆ. ನಗರ ಬಸ್ ನಿಲ್ದಾಣದ ಫ್ಲಾಟ್ ಫಾಮ್ ಸಂಖ್ಯೆ 22 ರಿಂದ ಹೊರಡುವ ಬಸ್ ಗಳು ಸಂಸ್ಥೆಗೆ ಬರುತ್ತವೆ.

ಯಶವಂತಪುರ ರೈಲ್ವೇ ನಿಲ್ದಾಣ 2 ಕಿ.ಮೀ. ಗಿಂತ ಕಡಿಮೆ ದೂರದಲ್ಲಿದ್ದು, ನಿಲ್ದಾಣದ ಫ್ಲಾಟ್ ಫಾಮ್ ಸಂಖ್ಯೆ 6 ರ ನಿರ್ಗಮನ ದ್ವಾರದಿಂದ ಆಟೋವನ್ನು ಬಾಡಿಗೆಗೆ ಪಡೆಯಬಹುದು.  ಪ್ರಯಾಣದರ ಸುಮಾರು ರೂ.80 ಆಗಿದ್ದು ಲಭ್ಯವಿರುವ ಅತ್ಯುತ್ತಮ ಆಯ್ಕೆ ಇದಾಗಿದೆ. ಸಿ.ಎನ್.ಆರ್. ರಾವ್ ವೃತ್ತದಿಂದ ಐಐಎಸ್ಸಿಯನ್ನು ಪ್ರವೇಶಿಸಬಹುದು. ಆಟೋ ಬಾಡಿಗೆಗೆ ಪ್ರವೇಶದ್ವಾರವೆಂದು ಹೇಳುತ್ತಾರೆ, ಸಂಸ್ಥೆಯಲ್ಲಿನ ವಿಭಾಗಗಳು ಗೇಟ್ನಿಂದ 500 ಮೀಟರ್ ವ್ಯಾಪ್ತಿಯಲ್ಲಿ ಇರುವುದರಿಂದ ನಿವು ಇಚ್ಛಿಸುವ ಸ್ಥಳಗಳಿಗೆ ಬಿಡುವಂತೆ ವಿನಂತಿಸಬಹುದು.

ಸಂಸ್ಥೆಯನ್ನು ತಲುಪಲು 18ನೇ ಕ್ರಾಸ್ ಮಲ್ಲೇಶ್ವರಂ ಬಸ್ ನಿಲ್ದಾಣದಿಂದ ಯಶವಂತಪುರ ಕಡೆಗೆ ಸಾಗುವ ಬಸ್ ಹತ್ತಬೇಕು. ಮೇಲಸೇತುವೆ ಮತ್ತು ಪ್ರೊಫೆಸರ್ ಸಿ.ಎನ್.ಆರ್ ರಾವ್ ವೃತ್ತದಲ್ಲಿ ಬಸ್ ನಿಲ್ದಾಣ ಕೂಡ ಇದೆ. ಯಶವಂತಪುರದ ಟೋಲ್ ಗೇಟ್ ನ ಆರ್ ಬ್ಲಾಕ್ ನಲ್ಲಿರುವ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಬಸ್ಸುಗಳು ನಿಲ್ಲಿಸುತ್ತವೆ.

  • ಮಾರ್ಗದ ನಕ್ಷೆ ವೀಕ್ಷಿಸಿ
  • ಗೂಗಲ್ ನಕ್ಷೆ ವೀಕ್ಷಿಸಿ

ಶಾಲಾ ಕಾಲೇಜುಗಳು

ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸಂಸ್ಥೆಗೆ ಶುಕ್ರವಾರ ಮಧ್ಯಾಹ್ನ 2.30 ರಿಂದ – ಸಂಜೆ 5.00 ರೊಳಗೆ ಭೇಟಿ ನೀಡಬಹುದು.

ಸಂಸ್ಥೆಯನ್ನು ಭೇಟಿ ನೀಡಲು ಇಚ್ಛಿಸುವ ಕಾಲೇಜು / ವಿಶ್ವವಿದ್ಯಾಲಯಗಳ ಪ್ರಾಧಿಕಾರಗಳು  ತಿಂಗಳ ಶುಕ್ರವಾರದಂದು, ನಿರ್ದಿಷ್ಟ ದಿನಾಂಕ ಹಾಗೂ ಭೇಟಿ ನೀಡಲು ಇಚ್ಛಿಸುವ ವಿಭಾಗದ ವಿವರವನ್ನು ಕನಿಷ್ಟ 15 ದಿನಗಳ ಮುಂಚಿತವಾಗಿ  ಸಂಸ್ಥೆಯ ಸಾರ್ವಜನಿಕ ಸಂಪರ್ಕಧಿಕಾರಿ ಗೆ (pro@admin.iisc.ernet.in) ಇ-ಮೇಲ್ ಮೂಲಕ ಮನವಿಯನ್ನು ಸಲ್ಲಿಸಬೇಕು ಮತ್ತು ಮನವಿಯ ನಕಲಿ ಪ್ರತಿಯನ್ನು proo@admin.iisc.ernet.in ( Fax No.080 – 23600853 ) ಕಳುಹಿಸಬೇಕು.  ಯಾವುದೇ ಪ್ರಶ್ನೆಗಳಿಗೆ  ಸಂಸ್ಥೆಯ ಸಾರ್ವಜನಿಕ ಸಂಪರ್ಕಧಿಕಾರಿ ಕಛೇರಿಯನ್ನು ಸಂಪರ್ಕಿಸಬಹುದು (ದೂರವಾಣಿ: 080-22932770 / 22932680).

ಭೇಟಿಯ ಅನುಮತಿಯನ್ನು ಇ-ಮೇಲ್ ಮೂಲಕ ತಿಳಿಸಲಾಗುವುದು ಆದ್ದರಿಂದ ಸಾರ್ವಜನಿಕ  ಸಂಪರ್ಕಧಿಕಾರಿ ರವರ ಪತ್ರ ವ್ಯವಹಾರದಲ್ಲಿ ಕಾಲೇಜು / ವಿಶ್ವವಿದ್ಯಾಲಯಗಳು ತಮ್ಮ ಸರಿಯಾದ ಇ-ಮೇಲ್ ಐಡಿಯನ್ನು ಸ್ಪಷ್ಟವಾಗಿ ತಿಳಿಸುವಂತೆ ಕೋರಲಾಗುತ್ತದೆ

ಐಐಎಸ್ಸಿ ಯಲ್ಲಿ ಸಂಚರಿಸು

app-play-store-android-download