ಪ್ರೊ.ಗೋವಿಂದನ್ ರಂಗರಾಜನ್ ಅವರು ಪಿಲಾನಿಯ ‘ಬಿರ್ಲಾ ತಂತ್ರಜ್ಞಾನ ಮತ್ತು ವಿಜ್ಞಾನ ಸಂಸ್ಥೆ’ಯಿಂದ ಇಂಟಿಗ್ರೇಟೆಡ್ ಎಂ.ಎಸ್ಸಿ ಪದವಿ (ಗೌರವ) ಪಡೆದಿದ್ದಾರೆ; ಅಲ್ಲದೆ ಅಮೆರಿಕದ ಕಾಲೇಜ್ ಪಾರ್ಕ್ನ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪಡೆದಿದ್ದಾರೆ. 1992 ರಲ್ಲಿ ಭಾರತಕ್ಕೆ ಹಿಂದಿರುಗುವ ಮುನ್ನ ಇವರು, ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಲಾರೆನ್ಸ್ ಬರ್ಕ್ಲಿ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಇವರು ಐಐಎಸ್ಸಿ ನಿರ್ದೇಶಕರಾಗಿದ್ದಾರೆ.
ಪ್ರೊ. ರಂಗರಾಜನ್ ಅವರ ಸಂಶೋಧನಾ ಆಸಕ್ತಿಗಳು ‘ನಾನ್ ಲೀನಿಯರ್ ಡೈನಮಿಕ್ಸ್ ಮತ್ತು ಖ್ಯಾವೋಸ್’ ಹಾಗೂ ‘ಟೈಮ್ ಸಿರೀಸ್ ಅನಾಲಿಸಿಸ್’ ವಿಷಯಗಳನ್ನು ಒಳಗೊಂಡಿದೆ. ಇವರು ಜೆ.ಸಿ. ಬೋಸ್ ರಾಷ್ಟ್ರೀಯ ಫೆಲೋ ಆಗಿದ್ದು, ಭಾರತೀಯ ವಿಜ್ಞಾನ ಅಕಾಡೆಮಿ ಹಾಗೂ ರಾಷ್ಟ್ರೀಯ ವಿಜ್ಞಾನಗಳ ಅಕಾಡೆಮಿ ಫೆಲೊ ಸಹ ಆಗಿದ್ದಾರೆ. ಇವರು ಫ್ರಾನ್ಸ್ ಸರ್ಕಾರದ ‘ನೈಟ್ ಆಫ್ ದಿ ಆರ್ಡರ್ ಆಫ್ ಅಕಡೆಮಿಕ್ ಪಾಮ್ಸ್’ ಪುರಸ್ಕಾರಕ್ಕೆ ಭಾಜನರಾಗಿದ್ದು, ಹೋಮಿ ಭಾಭಾ ಫೆಲೊ ಸಹ ಆಗಿದ್ದಾರೆ.
ಭಾರತ-ಫ್ರಾನ್ಸ್ ಸೈಬರ್ ವಿಶ್ವವಿದ್ಯಾಲಯ ಪ್ರಾಜೆಕ್ಟ್ ನ ಸಹ ಪ್ರಧಾನ ಸಂಶೋಧಕ (ಪಿಐ)ರಾಗಿ ಇವರು ಪ್ರಥಮ ಖಂಡಾಂತರ ಕ್ಷಿಪಣಿ ಆಧಾರಿತ ಕೋರ್ಸ್ ಗಳ ಸ್ಥಾಪನೆಗೆ ಕೊಡುಗೆ ನೀಡಿದ್ದಾರೆ. ಭಾರತ ಮತ್ತು ಫ್ರಾನ್ಸ್ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಈ ಕೋರ್ಸ್ ಗಳನ್ನು ಕಲಿಸಲಾಗುತ್ತಿದೆ. ಗಣಿತಶಾಸ್ತ್ರ ಮತ್ತು ಇತರ ವಲಯಗಳ ಸಮನ್ವಯತೆಯನ್ನೊಳಗೊಂಡ ‘ರಾಷ್ಟ್ರೀಯ ಗಣಿತ’ ಕಾರ್ಯಾಗಾರಗಳಲ್ಲೂ ಇವರು ಮುಖ್ಯಸ್ಥರಾಗಿದ್ದರು. ಗಣಿತ ವಿಜ್ಞಾನಗಳಲ್ಲಿ ಅಂತರಶಿಸ್ತೀಯ ಪಿಎಚ್ ಡಿ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಹಾಗೂ ಮುನ್ನಡೆಸುವಲ್ಲಿ ಇವರು ಮುಖ್ಯ ಪಾತ್ರ ವಹಿಸಿದ್ದಾರೆ. ಭಾರತದ ‘ಭಾರತ-ಯುಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವೇದಿಕೆ’ ಹಾಗೂ ಅಮೆರಿಕದ ‘ನ್ಯಾಷನಲ್ ಸೈನ್ಸ್ ಫೌಂಡೇಷನ್’ ಜಂಟಿಯಾಗಿ ಸ್ಥಾಪಿಸಿರುವ ‘ಭಾರತ-ಅಮೆರಿಕ ಗಣಿತ ಮತ್ತು ಅಂಕಿ-ಅಂಶ ವಿಜ್ಞಾನಗಳ ವರ್ಚುವಲ್ ಸಂಸ್ಥೆ’ಯ ಮುಖ್ಯಸ್ಥರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಇವರು, ‘ಭಾರತ-ಫ್ರೆಂಚ್ ಆನ್ವಯಿಕ ಗಣಿತಶಾಸ್ತ್ರ ಕೇಂದ್ರ’ –(ಐಎಫ್ಸಿಎಎಂ) ನಿರ್ದೇಶಕರಾಗಿದ್ದಾರೆ. ಈ ಸಂಸ್ಥೆ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಫ್ರೆಂಚ್ ಸಂಸ್ಥೆಗಳ ಜಂಟಿ ಕಾರ್ಯಕ್ರಮವಾಗಿದೆ. ಆನ್ವಯಿಕ ಗಣಿತಶಾಸ್ತ್ರದ ವಿಶಾಲ ವಲಯದಲ್ಲಿ ಭಾರತ-ಫ್ರಾನ್ಸ್ ನಡುವೆ ಜಂಟಿ ಸಂಶೋಧನಾ ಯೋಜನೆಗಳಿಗೆ ಈ ಸಂಸ್ಥೆ ನೆರವು ನೀಡುತ್ತದೆ.
ಪ್ರೊ. ರಂಗರಾಜನ್ ಅವರು ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಹಾಗೂ 2002ರಿಂದ 2008ರ ವರೆಗೆ ಡಿಜಿಟಲ್ ಮಾಹಿತಿ ಸೇವಾ ಕೇಂದ್ರದ ಸಂಚಾಲಕರಾಗಿಯೂ ಸೇವೆ ಸಲ್ಲಿಸಿದ್ದಾರೆ. 2008ರಿಂದ 2014ರ ವರೆಗೆ ಇವರು ಅಂತಾರಾಷ್ಟ್ರೀಯ ವ್ಯವಹಾರಗಳ ಘಟಕದ (ಈಗ ಅಂತಾರಾಷ್ಟ್ರೀಯ ಸಂಬಂಧಗಳ ಕಚೇರಿ ಎಂದು ಹೆಸರಿಸಲಾಗಿದೆ) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 2014ರಿಂದ 2020ರ ವರೆಗೆ ಇವರು ಅಂತರಶಿಸ್ತೀಯ ಸಂಶೋಧನಾ ವಿಭಾಗದ (ಇದು 10 ಇಲಾಖೆಗಳು ಮತ್ತು ಕೇಂದ್ರಗಳನ್ನು ಒಳಗೊಂಡಿದೆ) ಅಧ್ಯಕ್ಷರಾಗಿದ್ದರು. ಅಲ್ಲದೆ 2015ರಿಂದ 2020ರ ವರೆಗೆ ಸಂಸ್ಥೆಯ ಅಭಿವೃದ್ಧಿ ಮತ್ತು ಹಿರಿಯ ವಿದ್ಯಾರ್ಥಿಗಳ ವ್ಯವಹಾರಗಳ ಕಚೇರಿಯ ಮುಖ್ಯಸ್ಥರಾಗಿ ಇವರು, ಐಐಎಸ್ ಸಿ ನಿಧಿ ಸಂಗ್ರಹಣೆ ಮತ್ತು ಹಿರಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸುವ ಪ್ರಯತ್ನಗಳ ನೇತ್ವತ್ವ ವಹಿಸಿದ್ದರು.
ಸಂಪರ್ಕ:
ದೂರವಾಣಿ : 91- 80 – 2360 0690 / 91- 80 – 2293 2222
ಇಮೇಲ್: office.director@iisc.ac.in
ನಿರ್ದೇಶಕರ ಕಾರ್ಯದರ್ಶಿ: 91- 80 – 2293 2954
ಫ್ಯಾಕ್ಸ್: 91- 80 – 2360 0936