ಘನವಸ್ತು ವಿಜ್ಞಾನದಲ್ಲಿ ಅತ್ಯಂತ ಸವಾಲಿನ ವಿಷಯವೆಂದರೆ ಶೂನ್ಯ-ಪ್ರತಿರೋಧ ವಿದ್ಯುತ್ ಹರಿವನ್ನು ಸಾಧಿಸುವುದು ಮತ್ತು ಸಾಂದ್ರೀಕೃತ ಭೌತಶಾಸ್ತ್ರ ಸಂಶೋಧನೆಯಲ್ಲಿ ಶಕ್ತಿಯ ನಷ್ಟವನ್ನು ತಗ್ಗಿಸುವುದು. ಹೊಸ ವ್ಯಾಲಿ-ಪೋಲರೈಸ್ಡ್ ಕ್ವಾಂಟಮ್ ಅನಾಮಲಸ್ ಹಾಲ್ (VP-QAH) ಇನ್ಸುಲೇಟರ್‌ಗಳು ಕಡಿಮೆ ಪ್ರಸರಣವಾಗುವ ವಿದ್ಯುತ್ ಹರಿವನ್ನು ತೋರಿಸುವ ಸಾಮರ್ಥ್ಯವನ್ನು ಹೊಂದಿವೆ. ಒಂದೇ ವಸ್ತುವಿನಲ್ಲಿ ವ್ಯಾಲಿ ಹಾಲ್ ಮತ್ತು ಕ್ವಾಂಟಮ್ ಅನಾಮಲಸ್ ಹಾಲ್ ಪರಿಣಾಮವು ಏಕಕಾಲದಲ್ಲಿ ಇರುವುದರಿಂದ ಇದು ಬಹಳಸಶಕ್ತ ವ್ಯಾಲಿ ಅವಲಂಬಿತ ಎಡ್ಜ್ ವಿದ್ಯುತ್ ಪ್ರವಾಹಕ್ಕೆ ಎಡೆಮಾಡಿಕೊಡುತ್ತದೆ.
ಕಠಿಣ ಪೂರೈಕೆ ಅಗತ್ಯಗಳ ಕಾರಣ ಮತ್ತು ವ್ಯಾಲಿ ಮತ್ತು ಟೋಪೋಲಾಜಿಕಲ್ ಭೌತಶಾಸ್ತ್ರದ ನಡುವೆ ಸಂಕೀರ್ಣ ಅಂತರಕ್ರಿಯೆಯಿಂದಾಗಿ VP-QAH ವಸ್ತುಗಳು ಬಹಳ ಅಪರೂಪ. ಹೊಸ VP-QAH ವಸ್ತುಗಳನ್ನು ಹುಡುಕಲು ಈ ಅಡಚಣೆಗಳನ್ನು ಹೈ-ಥ್ರೂಪುಟ್ ಸ್ಕ್ರೀನಿಂಗ್ (ಎಚ್‌ಟಿಎಸ್) ಮತ್ತು ಹೊಸದಾಗಿ ಅಭಿವೃದ್ಧಿಪಡಿಸಿದ ಯಂತ್ರ ಕಲಿಕೆ (ಮಷೀನ್ ಲರ್ನಿಂಗ್) ಆಧಾರಿತ ಮುನ್ಸೂಚನೆಗಳಿಂದ ಸುಲಭವಾಗಿ ನಿಯಂತ್ರಿಸಬಹುದು.
ಘನ ವಸ್ತು ಸಂಶೋಧನಾ ಕೇಂದ್ರದಲ್ಲಿ ಅಭಿಷೇಕ್ ಕುಮಾರ್ ಸಿಂಗ್ ಮುಂದಾಳತ್ವದ ತಂಡವು ಮುಂದಿನ ಪೀಳಿಗೆಯ ಎಲೆಕ್ಟ್ರಾನಿಕ್ ಸಾಧನಗಳ ವಿನ್ಯಾಸವನ್ನು ತ್ವರಿತಗೊಳಿಸುವ ಕಾರ್ಯವಿಧಾನದ ಅಲ್ಗಾರಿದಮ್ ಅನ್ನು HTS ಕಪಲ್ಡ್ ML ಮಾದರಿಗಳನ್ನು ಬಳಸುವುದರ ಮೂಲಕ VP-QAH ಇನ್ಸುಲೇಟರುಗಳನ್ನು ಸಮರ್ಥವಾದ ಗುರುತಿಸಲು ಅಭಿವೃದ್ಧಿಪಡಿಸಿದೆ. ಭೌತಿಕವಾಗಿ ಉಪಯುಕ್ತ ಪರಿಸ್ಥಿತಿಗಳನ್ನು ಬಳಸಿ, 13000 ಯಾವ ಕ್ರಮವನ್ನೂ ಬಳಸದೆ ಆಯ್ಕೆ ಮಾಡಿದ ರಚನೆಗಳ ಮೇಲೆ ಮೊದಲ ತತ್ವ MXene ಡೇಟಾಬೇಸ್ “aNANT” ನಲ್ಲಿ ಹೈಥ್ರೋಪುಟ್ ಸ್ಕ್ರೀನಿಂಗ್ ಅನ್ನು ನಡೆಸಲಾಗುತ್ತದೆ. ಅವುಗಳನ್ನು ಕಡಿಮೆ ಪ್ರಸರಣ ವ್ಯಾಲಿಟ್ರಾನಿಕ್ಸ್ ಹೊಂದಲು ಸೂಕ್ತ ವಾಗಿ ಮಾಡಿ ಹೆಚ್ಚು ಬಲಿಷ್ಟ ವ್ಯಾಲಿ ಎಡ್ಜ್ ಸ್ಥಿತಿಗಳನ್ನು ಹೊಂದಿದ ಸ್ಕ್ರೀನಿಂಗ್ 14 MXenes ಎಡೆಮಾಡಲಾಯಿತು . HTS ವಿಧಾನವು ಅತ್ಯಂತ ಸದೃಢವಾಗಿದೆ.ಆದರೆ ಇದಕ್ಕೆ ಡೇಟಾಬೇಸ್ ರಚಿಸಲು ದುಬಾರಿ ಮೊದಲ ತತ್ವಗಳ ಎಣಿಕೆಗಳು ಬೇಕಾಯಿತು. ಆದ್ದರಿಂದ VP-QAH ವಸ್ತುಗಳನ್ನು ಉತ್ತಮವಾಗಿ ಮುನ್ಸೂಚಿಸಲು ML- ಆಧಾರಿತ ಮಾದರಿಗಳನ್ನು ಬಳಸಲಾಯಿತು ಎಂದು ಅಧ್ಯಯನ ತಂಡವು ವಿವರಿಸಿತು.
ಅಭಿವೃದ್ಧಿಪಡಿಸಿದ ಮಾದರಿಗಳು ಅತ್ಯುತ್ತಮ ಮೆಟ್ರಿಕ್ ಅಂಕಗಳೊಂದಿಗೆ ಅತ್ಯಂತ ನಿಖರ ಹಾಗೂ ವರ್ಗಾಯಿಸಲ್ಪಡುವಂತಹವು. ಎಂಎಲ್ ಮಾದರಿಗಳು ಮಾಹಿತಿ/ಡೇಟಾದ ಏರಿಳಿತಗಳನ್ನು ತಿಳಿಯಬಲ್ಲದು. . ಆದ್ದರಿಂದ ಈ ಅಧ್ಯಯನವು VP-QAH ವಸ್ತುಗಳನ್ನು ಅಭಿವೃದ್ಧಿಪಡಿಸಲು ಸಂಪೂರ್ಣ ಹೊಸ ಒಳನೋಟಗಳನ್ನು ಒದಗಿಸುತ್ತದೆ.
ಉಲ್ಲೇಖ:
ಆಕ್ಸಲರೇಟೆಡ್ ಡಿಸಡ್ಕವರಿ ಆಫ್ ವ್ಯಾಲಿ ಪೋಲರೈಸ್ಡ್ ಕ್ವಾಂಟಂ ಅನಮಲಸ್ ಹಾಲ್ ಎಫೆಕ್ಟ್ ಇನ್ MXenes ಕೆಂ.ಮಾಟರ್. DOI: https://doi.org/10.1021/acs.chemmater.1c00798
ವೆಬ್‌ಸೈಟ್ URL: