ಇತಿಹಾಸ

ಈ ಸಂಸ್ಥೆಯು ಯಶಸ್ವಿ ಉದ್ಯಮಿ ಮತ್ತು ಸಮಾಜ ಸೇವಕರಾಗಿದ್ದ (ಮಾನವ ಕಲ್ಯಾಣದ ಹಿತೈಷಿಯಾಗಿದ್ದ) ಜಮ್ ಷೇಟಜಿ ನುಸ್ಸರ್ ವಾಂಜಿ ಟಾಟಾ ಅವರ ಕಲ್ಪನೆಯ ಕೂಸು. ಅವರಲ್ಲಿ ಈ ಕನಸು ಮೊದಲಿಗೆ ಮೊಳೆತದ್ದು 1800ರ ದಶಕದಲ್ಲಿ. ಟಾಟಾ ಅವರು ಇದನ್ನು ಸಾಕಾರಗೊಳಿಸುವ ಸಲುವಾಗಿ ಶಿಕ್ಷಣ ತಜ್ಞ ಬುರ್ ಜೋರ್ಜಿ ಪದ್ ಷಾ ಅವರ ನೇತೃತ್ವದಲ್ಲಿ ಹಂಗಾಮಿ ಸಮಿತಿಯನ್ನು ರಚಿಸಿ, ಅದಕ್ಕೆ, ಉದ್ದೇಶಿತ ವಿಶ್ವವಿದ್ಯಾಲಯದ ನೀಲನಕ್ಷೆ ಸಿದ್ಧಪಡಿಸುವ ಜವಾಬ್ದಾರಿ ವಹಿಸಿದರು. ಈ ಸಮಿತಿ ಸಿದ್ಧಪಡಿಸಿದ ಕರಡನ್ನು ಹಲವಾರು ಬಾರಿ ಪರಿಷ್ಕೃತಗೊಳಿಸಿದ ನಂತರ ಅಂತಿಮಗೊಳಿಸಲಾಯಿತು. ಟಾಟಾ ಅವರು ಈ ಮಹತ್ವಾಕಾಂಕ್ಷೆ ಯೋಜನೆಗಾಗಿ ತಮ್ಮ ವೈಯಕ್ತಿಕ ಸಂಪತ್ತಿನ ಗಣನೀಯ ಮೊತ್ತವನ್ನು ಧಾರೆಯೆರೆದರು.

ದುರದೃಷ್ಟವಶಾತ್, ಟಾಟಾ ಅವರು ಸಂಸ್ಥೆಯ ಸ್ಥಾಪನೆಗೂ ಬಲು ಮುನ್ನವೇ, 1904ರಲ್ಲಿ ಕೊನೆಯುಸಿರೆಳೆದರು. ಕಡೆಯದಾಗಿ, ಭಾರತ ಸರ್ಕಾರವು 1909ರ ಮೇ 27ರಂದು ಹೊರಡಿಸಿದ ಶಾಸನಬದ್ಧ ಆದೇಶದ ಮೂಲಕ ಮೈಸೂರು ಸಂಸ್ಥಾನವು ದಕ್ಷಿಣ ಭಾರತದ ಬೆಂಗಳೂರಿನಲ್ಲಿ ದಾನವಾಗಿ ನೀಡಿದ 371 ಎಕರೆ ಪ್ರದೇಶದಲ್ಲಿ ಸಂಸ್ಥೆಯು ಸ್ಥಾಪನೆಗೊಂಡಿತು.

ಸಂಸ್ಥೆ ಆರಂಭವಾಗಿದ್ದು ಕೇವಲ ಎರಡು ವಿಭಾಗಗಳೊಂದಿಗೆ. ಜನರಲ್ ಅಂಡ್ ಅಪ್ಲೈಡ್ ಕೆಮಿಸ್ಟ್ರಿ (ಸಾಮಾನ್ಯ ಮತ್ತು ಆನ್ವಯಿಕ ರಸಾಯನಶಾಸ್ತ್ರ) ಹಾಗೂ ಎಲೆಕ್ಟ್ರಿಕಲ್ ಟೆಕ್ನಾಲಜಿ (ವಿದ್ಯುತ್ ತಾಂತ್ರಿಕತೆ) ವಿಭಾಗಗಳೊಂದಿಗೆ ಪ್ರಾರಂಭಗೊಂಡ ಸಂಸ್ಥೆಯಲ್ಲಿ ಈಗ ಆರು ಬೇರೆ ಬೇರೆ ವಲಯಗಳಿಗೆ ಸೇರಿದ 40ಕ್ಕೂ ಹೆಚ್ಚು ವಿಭಾಗಗಳಿವೆ. ಜೈವಿಕ ವಿಜ್ಞಾನ, ರಸಾಯನ ವಿಜ್ಞಾನ, ಎಲೆಕ್ಟ್ರಿಕಲ್ ವಿಜ್ಞಾನ, ಅಂತರಶಿಸ್ತು ಸಂಶೋಧನೆ (ಇಂಟರ್ ಡಿಸಿಪ್ಲಿನರಿ ರೀಸರ್ಚ್), ಯಂತ್ರ ವಿಜ್ಞಾನ (ಮೆಕ್ಯಾನಿಕಲ್ ಸೈನ್ಸ್) ಮತ್ತು ಭೌತಿಕ ಹಾಗೂ ಗಣಿತೀಯ ವಿಜ್ಞಾನ (ಫಿಸಿಕಲ್ ಅಂಡ್ ಮ್ಯಾಥಮ್ಯಾಟಿಕಲ್ ಸೈನ್ಸಸ್) ವಲಯಗಳಲ್ಲಿ ಈ ವಿಭಾಗಗಳು ಹಂಚಿಕೆಯಾಗಿವೆ. ಸಂಸ್ಥೆಯು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಹೊಸ ಆವರಣವನ್ನೂ (ಕ್ಯಾಂಪಸ್) ಹೊಂದಿದೆ.

ಜೆಎನ್ ಟಾಟಾ ಪುತ್ತಳಿಕೆಯ ಕೈಯಲ್ಲಿ  ಐಐಎಸ್ಸಿಯ  ಮುಖ್ಯ  ಕಟ್ಟಡದ  ಮಾದರಿ  ಇದೆ. 1904 ರಲ್ಲಿ ಸಂಸ್ಥೆ ಅಸ್ತಿತ್ವಕ್ಕೆ ಬರುವ ಮೊದಲು ಟಾಟಾ ನಿಧನರಾದರು. (ಕೃಪೆ: ಎಪಿಸಿ)

ಮೈಸೂರು ರಾಜ್ಯದ ಯುವ ಮಹಾರಾಜ ಮತ್ತು ಅವನ ತಾಯಿ, ದಿ ರೀಜೆಂಟ್ ಕ್ವೀನ್ ಆಫ್ ಮೈಸೂರು ಸ್ಟೇಟ್ (ಕೃಪೆ:  ಎಪಿಸಿ)

ಭಾರತ ಸರ್ಕಾರ, ಮೈಸೂರು ಮಹಾರಾಜರು ಮತ್ತು ಜಮ್ಸೆಟ್ಜಿ ನುಸರಾವಾಂಜಿ ಟಾಟಾ ಅವರ ಜಂಟಿ ಪ್ರಯತ್ನಗಳಿಂದ ಭಾರತೀಯ ವಿಜ್ಞಾನ ಸಂಸ್ಥೆ 1909 ರಲ್ಲಿ ಸ್ಥಾಪನೆಯಾಯಿತು.

1896 ರಲ್ಲಿ ಟಾಟಾರವರು ವಿಜ್ಞಾನದ ವಿಶ್ವವಿದ್ಯಾನಿಲಯವನ್ನು ರೂಪಿಸಿದರು, ಇದು ಭಾರತದ ಪ್ರಯೋಜನಕ್ಕಾಗಿ ಕೆಲಸ ಮಾಡುತ್ತದೆ ಮತ್ತು 1898 ರಲ್ಲಿ ಅಂತಹ ಸಂಸ್ಥೆಯನ್ನು ಸ್ಥಾಪಿಸಲು ದತ್ತಿ ರಚಿಸಲಾಯಿತು.

ಭಾರತ ಸರ್ಕಾರವು ಈ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ನಿರ್ಧರಿಸಿತು. ಮೈಸೂರಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ 4, ಸಂಸ್ಥೆಯ ಸ್ಥಾಪನೆಗೆ 370 ಎಕರೆ ಭೂಮಿಯನ್ನು ದಾನ ಮಾಡಿದ್ದರು.

ಈ ಸಂಸ್ಥೆಯನ್ನು 1909 ರಲ್ಲಿ ವಿದ್ಯುಕ್ತವಾಗಿ ಸ್ಥಾಪಿಸಲಾಯಿತು, 1911 ರಲ್ಲಿ ಮೊದಲ ಬ್ಯಾಚ್ ವಿದ್ಯಾರ್ಥಿಗಳ ಅಧ್ಯಯನ ಪ್ರಾರಂಭವಾಯಿತು.

ಹಿನ್ನೋಟದ ತುಣುಕುಗಳು

(ಹೆಚ್ಚಿನ ಮಾಹಿತಿಗೆ ಕೆಳಗಿನ ಕೊಂಡಿಗಳನ್ನು ಒತ್ತಿ)

ಹುಟ್ಟು
ನಿರ್ದೇಶಕರು
ಪ್ರಧಾನ ಕಟ್ಟಡ ಮತ್ತು ಮೊದಲ ನಿರ್ದೇಶಕರು
ಶಂಕುಸ್ಥಾಪನೆ
ಸ್ಥಾಪಕರ ಸ್ಮಾರಕ
ಆರಂಭಿಕ ಕೈಗಾರಿಕೀಕರಣಕ್ಕೆ ಐಐಎಸ್ ಸಿ ಕೊಡುಗೆ
ಐಐಎಸ್ ಸಿಯಲ್ಲಿ ಸಿ.ವಿ.ರಾಮನ್ ಮತ್ತು ಭೌತಶಾಸ್ತ್ರ
ಐಐಎಸ್ ಸಿಯಲ್ಲಿ ಗಾಂಧಿ
ಕೋನಿಂಗ್ಸ್ ಬರ್ಗರ್ ಅವರ ವಾಸ್ತುಶಿಲ್ಪ ಬಳುವಳಿ
ಐಐಎಸ್ ಸಿ ಮತ್ತು ಎರಡನೇ ಮಹಾಯುದ್ಧ
ಮೂರು ಮೈಲುಗಲ್ಲುಗಳು: ಸುವರ್ಣ ವರ್ಷಾಚರಣೆ, ಅಮೃತ ಮಹೋತ್ಸವ ಮತ್ತು ಶತಮಾನೋತ್ಸವ
ಶತಮಾನೋತ್ಸವದ ನಂತರ ಐಐಎಸ್ ಸಿ ಬೆಳವಣಿಗೆ

ಐಐಎಸ್ ಸಿ ನಿರ್ದೇಶಕರು

ಹೆಸರುಅವಧಿ
ಎಂ.ಡಬ್ಲ್ಯು.ಟ್ರ್ಯಾವೆರ್ಸ್ನವೆಂಬರ್ 1906- ಜೂನ್ 1914
ಆಲ್ ಫ್ರೆಡ್ ಬೌರ್ನ್ಅಕ್ಟೋಬರ್ 1915- ಮಾರ್ಚಿ 1921
ಮಾರ್ಟಿನ್ ಆನ್ ಸ್ಲೊ ಫಾರ್ಸ್ ಟರ್ನವೆಂಬರ್ 1922- ಮಾರ್ಚಿ 1933
ಸಿ.ವಿ.ರಾಮನ್ಏಪ್ರಿಲ್ 1933- ಜುಲೈ 1937
ಜ್ಞಾನಚಂದ್ರ ಘೋಷ್ ಆಗಸ್ಟ್ 1939- ಡಿಸೆಂಬರ್ 1948
ಎಂ.ಎಸ್.ಥ್ಯಾಕರ್ಸೆಪ್ಟೆಂಬರ್ 1949- ಆಗಸ್ಟ್ 1955
ಕೆ.ಶ್ರೀನಿವಾಸನ್ ಆಗಸ್ಟ್ 1955- ಮಾರ್ಚ್ 1957
ಎಸ್.ಭಗವಂತಮ್ಮಾರ್ಚ್ 1957- ಡಿಸೆಂಬರ್ 1962
ಎಸ್.ಧವನ್ಡಿಸೆಂಬರ್ 1962- ಜುಲೈ 1981
ಎಸ್.ರಮೇಶನ್ ಆಗಸ್ಟ್ 1981- ಜುಲೈ 1984
ಸಿ.ಎನ್.ಆರ್.ರಾವ್ಆಗಸ್ಟ್ 1984- ಜುಲೈ 1994
ಜಿ.ಪದ್ಮನಾಭನ್ಆಗಸ್ಟ್ 1994- ಜುಲೈ 1998
ಗೋವರ್ಧನ್ ಮೆಹ್ತಾಆಗಸ್ಟ್ 1998- ಜೂನ್ 2005
ಪಿ.ಬಲರಾಮ್ಜುಲೈ 2005- ಜುಲೈ 2014
ಅನುರಾಗ್ ಕುಮಾರ್ಆಗಸ್ಟ್ 2014ರಿಂದ ಅಧಿಕಾರದಲ್ಲಿದ್ದಾರೆ.

ಜಂಟಿ/ ಸಹ/ ಉಪ ನಿರ್ದೇಶಕರುಗಳು

ಹೆಸರುಹುದ್ದೆ ಮತ್ತು ಅವಧಿ
ಎಸ್.ರಮೇಶನ್ಜಂಟಿ ನಿರ್ದೇಶಕರು 1979-81
ಜಿ.ಪದ್ಮನಾಭನ್ಉಪ ನಿರ್ದೇಶಕರು 1993-94
ಎ.ಶ್ರೀಧರನ್ಉಪ ನಿರ್ದೇಶಕರು 1994-97
ಎಂ.ವಿಜಯನ್ಸಹ ನಿರ್ದೇಶಕ 2000-2004
ಎನ್.ಬಾಲಕೃಷ್ಣನ್ಸಹ ನಿರ್ದೇಶಕ 2005-2014
ಜಯಂತ್ ಎಂ.ಮೋದಕ್ಉಪ ನಿರ್ದೇಶಕ ಆಗಸ್ಟ್ 2015ರಿಂದ ಜುಲೈ2020
ಎಸ್.ರಾಮಕೃಷ್ಣನ್ಉಪ ನಿರ್ದೇಶಕ ಆಗಸ್ಟ್ 2015ರಿಂದ ಜುಲೈ 2018
ರುದ್ರ ಪ್ರತಾಪ್ಉಪ ನಿರ್ದೇಶಕ ಆಗಸ್ಟ್ 2018ರಿಂದ ಜುಲೈ 2020

ಪದನಿಮಿತ್ತ/ ಪ್ರಭಾರ/ ಕಾರ್ಯನಿರತ ನಿರ್ದೇಶಕರುಗಳು

ಹೆಸರು

ಹುದ್ದೆ
ಮತ್ತು ಅವಧಿ
ಆಲ್ ಫ್ರೆಡ್ ಹೇಪದನಿಮಿತ್ತ ನಿರ್ದೇಶಕರು ಜೂನ್ 1914- ಅಕ್ಟೋಬರ್ 1915,
ಮಾರ್ಚಿ 1921- ನವೆಂಬರ್ 1922
ಬಿ.ವೆಂಕಟೇಶಾಚಾರ್ಪ್ರಭಾರ ನಿರ್ದೇಶಕರು ಜುಲೈ 1937- ಜುಲೈ 1939
ಇ.ವಿ.ಗಣಪತಿ ಅಯ್ಯರ್ಹಂಗಾಮಿ ನಿರ್ದೇಶಕರು ನವೆಂಬರ್ 1947- ಸೆಪ್ಟೆಂಬರ್ 1949
ಕೆ.ಶ್ರೀನಿವಾಸನ್ಹಂಗಾಮಿ ನಿರ್ದೇಶಕರು ಆಗಸ್ಟ್ 1955- ಮಾರ್ಚ್ 1957
ಡಿ.ಕೆ.ಬ್ಯಾನರ್ಜಿ ಹಂಗಾಮಿ ನಿರ್ದೇಶಕರು ಏಪ್ರಿಲ್ 1971- ಮಾರ್ಚ್ 1972