ನಮ್ಮ ಉಸಿರಾಟದ ಮಾರ್ಗದ ಶ್ವಾಸನಾಳ ಮತ್ತು ಶ್ವಾಸಕವಲುಗಳಲ್ಲಿ ಅಡೆತಡೆಗಳಿಂದಾಗಿ ಲುಮೆನ್ (ಒಳಮಾರ್ಗ) ಪ್ರದೇಶವು ಕಿರಿದಾಗುವ ಪರಿಸ್ಥಿತಿಯನ್ನು ಸ್ಟೆನೋಸಿಸ್/ಮಾರ್ಗತಡೆ ಎನ್ನುತ್ತಾರೆ. ಈ ಒಳಪ್ರದೇಶ ಕಿರಿದಾಗುವಿಕೆಯು ಗಾಳಿಯ ಒಳಹರಿವಿನ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಈ ತೀವ್ರ ಕಿರಿದಾಗುವಿಕೆಯು ಹೆಚ್ಚಾಗಿ ಅಸ್ವಸ್ಥತೆ ಮತ್ತು ಮರಣವುಂಟಾಗುವ ಸಂದರ್ಭಗಳು ಇವೆ.
ಅಡಚಣೆಗೊಂಡ ಗಾಳಿಮಾರ್ಗದಲ್ಲಿ ನಿರ್ದಿಷ್ಟವಾಗಿ ಅಡಚಣೆಯಿರುವ ಸ್ಥಳಗಳಲ್ಲಿ ಗಾಳಿ ಹರಿವಿನ ಪ್ರಮಾಣೀಕರಣಕ್ಕೆ ಗಾಳಿಯ ಹರಿವಿನ ವಿನ್ಯಾಸಗಳನ್ನು ನಿರೂಪಿಸಲು ಹೊಸ ತಪಾಸಣಾ ಉಪಕರಣಗಳು ಬೇಕು. ಎಲೆಕ್ಟ್ರಾನಿಕ್ ಸಿಸ್ಟಮ್ಸ್ ಎಂಜಿನಿಯರಿಂಗ್ ವಿಭಾಗದ ಸಂಶೋಧಕರಾದ ಅಲೇಖ್ಯಾ ಬಿ ಮತ್ತು ಹಾರ್ದಿಕ್ ಜೆ ಪಾಂಡ್ಯ ತಮ್ಮ ಸಹಯೋಗಿಗಳಾದ ಯೋಂಗ್ಜಿನ್ ಕಿಮ್ ಮತ್ತು ಸಂಜಯ್ ರಾವ್ ಜೊತೆಗೂಡಿ ಉಸಿರಾಟ ಮಾರ್ಗದ ವಿವಿಧ ಭಾಗಗಳಲ್ಲಿ ಗಾಳಿಯ ವೇಗವನ್ನು ಅಳೆಯಬಲ್ಲ ಒಂದು ಸಡಿಲ ಒಳನಾಳ ಕ್ಯಾತೆಟರನ್ನು ರೂಪಿಸಿದ್ದಾರೆ.
ಮೈಕ್ರೋ-ಎಲೆಕ್ಟ್ರೋ-ಮೆಕ್ಯಾನಿಕಲ್ ಸಿಸ್ಟಮ್ಸ್ (ಎಂಇಎಂಎಸ್) ಆಧಾರಿತ ಉಷ್ಣಹರಿವು ಸಂವೇದಕ/ಥರ್ಮಲ್ ಫ್ಲೋ ಸೆನ್ಸರ್ಗಳೊಂದಿಗೆ ಸಂಯೋಜಿಸಲಾದ ಮೂರು-ಪದರದ ಸಡಿಲ ಮುದ್ರಿತ ಸರ್ಕ್ಯೂಟ್ ಬೋರ್ಡ್ ಮತ್ತು ಒಂದು ಜೋಡಿ ಸಬ್-ಮಿಲಿಮೀಟರ್ ಹೆಲಿಕಲ್-ಆಕಾರದ ಮೆಮೊರಿ ಆಕ್ಚುಯೇಟರ್ಸ್ ಗಳನ್ನು ಈ ಕ್ಯಾತೆಟರ್ ಒಳಗೊಂಡಿದೆ. ಮೊದಲು ಒಂದು ಕುರಿಯ ಉಸಿರಾಟ ಸಾಮಾನ್ಯ ಹಾಗೂ ಅಡಚಣೆಯ ಸ್ಥಿತಿಗಳಲ್ಲಿ ಗಾಳಿಯ ವೇಗವನ್ನು ಅಳೆಯುವ ಮೂಲಕ ಇದನ್ನು ಸಂಶೋಧಕರು ಪರೀಕ್ಷಿಸಿದರು. ಗಾಳಿ ಮಾರ್ಗದ ಅಡ್ಡ ರೇಖಾ ಸ್ಥಳವು 10% ಕಡಿಮೆಯಾದರೂ ಕೂಡ ಅಡಚಣೆಯ ಸ್ಥಳಕ್ಕೆ ಅನುಗುಣವಾಗಿ ನಿರ್ದಿಷ್ಟ ಏರಿಳಿತಗಳು ಕಂಡುಬಂದವು. ತಪಾಸಣಾ ಪೂರ್ವ ಹಂತಗಳಲ್ಲಿ ಅಡಚಣೆಯನ್ನು ಗುರುತಿಸಲು ಇಂತಹ ಕ್ಯಾತೆಟರನ್ನು ಬಳಸಬಹುದು.
ಉಲ್ಲೇಖ:
ಬಿ ಅಲೇಖ್ಯ, ವಿ ಎಸ್ ಎನ್ ಸೀತಾರಾಮಗುಪ್ತ ವಿ, ಬಿ ಎಸ್ ಅರ್ಜುನ್, ವಿ ಭೂಷಣ್, ಕೆವಿನ್ ಅಭಿಷೇಕ್, ಸಂಜಯ್ ರಾವ್, ಯೋಂಗ್ ಜಿನ್ ಕಿಮ್ ಮತ್ತು ಹಾರ್ದಿಕ್ ಜೆ ಪಾಂಡ್ಯ,
ಆನ್ ಇಂಟ್ಯೂಬೇಶನ್ ಕ್ಯಾತೆಟರ್ ಇಂಟೆಗ್ರೇಟೆಡ್ ವಿತ್ ಫ್ಲೋ ಸೆನ್ಸರ್ ಅಂಡ್ ಸ್ಮಾರ್ಟ್ ಆಕ್ಚುಯೇಟರ್ಸ್ ಫಾರ್ ಕ್ಯಾರಕ್ಟರೈಸಿಂಗ್ ಏರ್ ಫ್ಲೋ ಪ್ಯಾಟರ್ನಸ್ ಇನ್ ಸ್ಟೀನೋಸ್ಡ್ ಟ್ರೇಕಿಯ : ಆನ್ ಆಬ್ಜೆಕ್ಟಿವ್ ಗೈಡ್ ಫಾರ್ ಸಿಎಒ ಮ್ಯಾನೆಜ್ಮೆಂಟ್ ಜರ್ನಲ್ ಆಫ್ ಮೈಕ್ರೋಮೆಕಾನಿಕ್ಸ್ ಮತ್ತು ಮೈಕ್ರೋ ಇಂಜಿನಿಯರಿಂಗ್ (2021).
https://doi.org/10.1088/1361-6439/abf335
ಲ್ಯಾಬ್ ವೆಬ್ಸೈಟ್: