ಚರ್ಮ ಕಾಯಿಲೆಗಳ ಅಧ್ಯಯನ ಮಾಡಲು ಜಂತುಹುಳುಗಳ ಬಳಕೆ

ದೇಬಾಯನ್ ದಾಸ್ ಗುಪ್ತಾ

ಪ್ರತಿದಿನ ಮನುಷ್ಯರು ತಮ್ಮ ಪರಿಸರದಲ್ಲಿ ಮಾರಕಗಳನ್ನು ಕಾಣುತ್ತಾರೆ. ಬೇಸಾಯಕ್ಕಾಗಿ ಬಳಸುವ ಸಸ್ಯನಾಶಕಗಳು ಮತ್ತು ಕೀಟನಾಶಕಗಳು ಈ ಮಾರಕಗಳ ಪ್ರಮುಖ ಮೂಲ. ಇವು ನಮ್ಮ ಆಹಾರದಲ್ಲಿ ಸೇರಿಕೊಳ್ಳುತ್ತವೆ. ನಮ್ಮ ಚರ್ಮ ಅಥವಾ ತೊಗಲು ಇಂತಹ ಮಾರಕಗಳ ಮೊದಲ ತಡೆಗೋಡೆಗಳು. ನಮ್ಮ ಚರ್ಮದ ಕೊಲಜಿನ್ ಪ್ರೊಟೀನ್ ಗಳು ಈ ಮಾರಕಗಳು ನಮ್ಮ ದೇಹವನ್ನು ಪ್ರವೇಶಿಸದಂತೆ ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಗೌಚರ್ ಕಾಯಿಲೆ, ಅಟೊಪಿಕ್ ಡರ್ಮಟೈಟಿಸ್ ಮತ್ತು ಸೋರಿಯಾಸಿಸ್ ನಂತಹ ಹಲವಾರು ರೋಗಗಳಿಗೆ ಕೊಲಜಿನ್ ಪ್ರೊಟೀನ್ ತಡೆಗೋಡೆ ದೋಷಗಳು ಕಾರಣವಾಗಬಹುದು.

ಅಣ್ವಿಕ ಪುನರುತ್ಪತ್ತಿ, ಬೆಳವಣಿಗೆ ಮತ್ತು ಜೆನೆಟಿಕ್ಸ್ ವಿಭಾಗದ ವರ್ಷಾ ಸಿಂಗರವರ ಹೊಸ ಅಧ್ಯಯನವು ಪರಿಸರ ಮಾರಕಗಳಿಗೆ ನಮ್ಮ ಚರ್ಮವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ತಿಳಿಯಲು ಸೀನೊರ್ಹಾಬ್ಡಿಟಿಸ್ ಎಲಿಗನ್ಸ್ ಅನ್ನು ಒಂದು ಮಾದರಿ ಜೀವಿಯಾಗಿ ಬಳಸಬಹುದು ಎಂದು ಪ್ರಸ್ತಾಪಿಸಿದೆ. ಸೀನೊರ್ಹಾಬ್ಡಿಟಿಸ್ ಎಲಿಗನ್ಸ್ ಎಂಬುದು ಮಣ್ಣಿನಲ್ಲಿ ವಾಸಿಸುವ ಒಂದು ಜಂತು ಹುಳ. ಇದನ್ನು ಅಣ್ವಿಕ ಮತ್ತು ಬೆಳವಣಿಗೆ ಜೀವಸಂಶೋಧನೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ತನ್ನ ಜೀವಮಾನದಲ್ಲಿ ಇದು 177 ರೀತಿಯ ಕೊಲಾಜೆನ್‌ಗಳನ್ನು ಉತ್ಪಾದಿಸುತ್ತದೆ ಮತ್ತು ಈ ಕೆಲವು ಪ್ರೋಟೀನ್‌ಗಳು ಅದರ ಚರ್ಮದ ಆಕಾರ ಮತ್ತು ರಚನೆಯನ್ನು ಕಾಪಾಡಿಕೊಳ್ಳಲು ಮುಖ್ಯ. ಆದರೆ ಬಹುಪಾಲು ಈ 177 ಪ್ರೋಟೀನ್‌ಗಳ ಕಾರ್ಯಸ್ವರೂಪದ ಬಗ್ಗೆ ನಮಗೆ ಬಹಳ ಕಡಿಮೆ ತಿಳಿದಿದೆ.


—–

ಸಂಶೋಧಕರು ಈ ಅಧ್ಯಯನದಲ್ಲಿ ಪ್ರೋಟೀನುಗಳಲ್ಲಿ ಕನಿಷ್ಠ ಆರು ಪ್ರೋಟೀನುಗಳು ಚರ್ಮದ ಮೂಲಕ ಏನು ಹಾದುಹೋಗಬಹುದೆಂದು ನಿರ್ಧರಿಸಲು ಕಾರಣವೆಂದು ಕಂಡುಹಿಡಿದರು. ಈ ಪ್ರೋಟೀನ್‌ಗಳಲ್ಲಿ ಒಂದು ಕೂಡ ತಳೀಯವಾಗಿ (ಜೀನುಮಟ್ಟದಲ್ಲಿ) ಮಾರ್ಪಡಿಸಿದ ಹುಳುಗಳಲ್ಲಿ ಇಲ್ಲದಿದ್ದರೆ ಸಸ್ಯನಾಶಕಗಳು ಮತ್ತು ಐವರ್ಮೆಕ್ಟಿನ್ ನಂತಹ ಜಂತುಹುಳು ನಿವಾರಕಗಳಿಗೆ ತುತ್ತಾಗುತ್ತವೆ. ಅದರ ಆರು ನಿರ್ಣಾಯಕ ಪ್ರೋಟೀನ್‌ಗಳಲ್ಲಿ ನಾಲ್ಕು ನಷ್ಟವಾದಾಗ ಅದರ ಚರ್ಮದ ರಚನೆಯ ಬದಲಾವಣೆ ಉಂಟಾಯಿತು. ಹೆಚ್ಚಿನ ರೆಸಲ್ಯೂಶನ್ ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಅಡಿಯಲ್ಲಿ ಅದರ ಚರ್ಮವು ಬಿರುಕುಬಿರುಕಾಗಿ ಮುಂದುವರಿಕೆಯಿಲ್ಲದೆ ಸುಕ್ಕುಗಟ್ಟಿದಂತೆ ಕಂಡಿತು. ಆಗ ಇಂತಹ ಚರ್ಮದ ಮೇಲೆ ಹೆಚ್ಚು ಮಾರಕಗಳು ಕಂಡು ಬಂದು ಹೆಚ್ಚಿನ ಅಂಗಾಂಶ ಹಾನಿಯಾಗುತ್ತಾ ಬೇಗ ಅವುಗಳ ಸಾವಾಗಲು ಕಾರಣವಾಯಿತು.

ಉಲ್ಲೇಖ:

ಅಂಜಲಿ ಸಂಧು, ದಿವಾಕರ್ ಬಾದಲ್, ರಿಯ ಶೇಖಂಡ್, ಶಾಲಿನಿ ತ್ಯಾಗಿ, ವರ್ಷ ಸಿಂಗ್, ಸ್ಪೆಸಿಫಿಕ್ ಲೊಲಾಜಿನ್ಸ್ ಮೇನಟೇನ್ ಪೆರ್ಮಿಯಬಿಲಿಟಿ ಬ್ಯಾರಿಯರ್ ಇ ಸೀನೊರ್ಹಾಬ್ಡಿಟಿಸ್ ಎಲಿಗನ್ಸ್ ಸಂಪುಟ 217, ಸಂಚಿಕೆ 3, ಮಾರ್ಚ್ 2021

https://doi.org/10.1093/genetics/iyaa047


ಮಧುಮಂತಿ ದಾಸ್ ಗುಪ್ತ, ವರ್ಷಾ ಸಿಂಗ್ ಮತ್ತು ಅಂಜಲಿ ಸಂಧು (ಎಡದಿಂದ ಬಲಕ್ಕೆ)

ಲ್ಯಾಬ್ ವೆಬ್‌ಸೈಟ್:

https://sites.google.com/view/varshalab/home