ಭಾರತೀಯ ಉಪಖಂಡದ ಬಿರುಗಾಳಿಗಳ ಅಧ್ಯಯನ

– ಕಪಿಲ್ ದೇವ್ ಸಿಂಧು

ಹವಾಮಾನದ ಪರಿಭಾಷೆಯಲ್ಲಿ ಬಿರುಗಾಳಿಯು ಒಟ್ಟಿಗೆ ಸೇರಿರುವ ಗುಡುಗು ಮೋಡಗಳ ಗುಂಪು. ವಿಪರೀತ ಮಳೆಯು ಬಿರುಗಾಳಿಗಳಿಗೆ ಸಂಬಂಧಿಸಿದ್ದು ಅವು ಹರಿವಿನ ಮೋಡಗಳ 90% ಕ್ಕಿಂತ ಹೆಚ್ಚು ಒಟ್ಟು ಮಳೆಗಳಿಂದ ಕೂಡಿರುತ್ತವೆ. ಬಿರುಗಾಳಿ ಪ್ರಮಾಣದ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದರಿಂದ ಸಣ್ಣ ವ್ಯಾಪ್ತಿಯ ಹವಾಮಾನ ಮುನ್ಸೂಚನೆ ಮತ್ತು ಸಾಂಖಿಕ ಹವಾಮಾನ ನಮೂನೆಗಳಲ್ಲಿ ಹರಿವಿನ ಮಾನದಂಡೀಯ ಯೋಜನೆಗಳ ಸುಧಾರಣೆ ಮಾಡುವುದು ಇವುಗಳ ಮೇಲೆ ಪರಿಣಾಮ ಬೀರುತ್ತದೆ.

ಭಾರತೀಯ ವಿಜ್ಞಾನ ಸಂಸ್ಥೆಯ ವಾತಾವರಣ ಮತ್ತು ಸಾಗರ ವಿಜ್ಞಾನ ಕೇಂದ್ರದ (ಸಿಎಒಎಸ್) ಸಂಶೋಧಕರು ಭೋಪಾಲ್, ಲಕ್ನೋ, ನಾಗ್ಪುರ್ ಮತ್ತು ಪಾಟ್ನಾ ಭಾರತೀಯ ಹವಾಮಾನ ಇಲಾಖೆಗಳು ನಿರ್ವಹಿಸುವ ಡಾಪ್ಲರ್ ವೆದರ್ ರಾಡಾರ್‌ಗಳ (DWRs) ಮಾಹಿತಿಯನ್ನು ಬಳಸಿ ಮುಂಗಾರಿಗೆ ಮೊದಲು ಮತ್ತು ಮುಂಗಾರು ಕಾಲಗಳಲ್ಲಿನ ಬಿರುಗಾಳಿಗಳ ಗುಣಲಕ್ಷಣಗಳನ್ನು ಅಧ್ಯಯನ ಮಾಡಿದರು. ಭೂಪ್ರದೇಶ ಸ್ಥಿತಿ ಮತ್ತು ಕಾಲದ ಮೇಲೆ ಬಿರುಗಾಳಿಗಳ ಉದ್ದನೆಯ ರಚನೆ ಮತ್ತು ಜೀವಿತಾವಧಿ ಅವಲಂಬಿಸುತ್ತದೆಂದು ಕೂಡ ವರದಿಯಾಗಿದೆ. ಹೆಚ್ಚು ಪಾಲು ಬಿರುಗಾಳಿಗಳು ಒಂದು ಗಂಟೆಗಿಂತ ಕಡಿಮೆಕಾಲ ಇರುತ್ತವೆ ಮತ್ತು ಕೆಲವು 2.5 ಗಂಟೆಗಳಿಗಿಂತ ಹೆಚ್ಚು ಕಾಲವಿರುತ್ತವೆ. ಮುಂಗಾರಿನ ಮೊದಲಿನ ಬಿರುಗಾಳಿಗಳು ಸಾಮಾನ್ಯವಾಗಿ ಗಾಢವಿರುವುದಿಲ್ಲ ಮತ್ತು ಮುಂಗಾರಿಗೆ ಹೋಲಿಸಿದರೆ ಕಡಿಮೆ ಕಾಲವಿರುತ್ತವೆ ಎಂದು ತಿಳಿದುಬಂತು.

ಈ ಅಧ್ಯಯನದಿಂದ ಹೊರಬಂದ ಪ್ರಮುಖ ವಿಷಯವೆಂದರೆ ಒಟ್ಟಾರೆ ಮಳೆಯ ಎಣಿಕೆ ಅಂದರೆ ಬಿರುಗಾಳಿಗಳು ಇರುವ ಕಾಲದವರೆಗೆ ಉಂಟಾಗುವ ರೇಡಾರ್ ಅಂದಾಜಿಸಿದ ಮಳೆ ಪ್ರಮಾಣ (RERV, ಯುನಿಟ್ m3). ಮುಂಗಾರುಕಾಲದಲ್ಲಿ RERV ವ್ಯಾಪ್ತಿಯು 2 × 105 ಮತ್ತು 2 × 107 ಮೀ 3 ನಡುವೆ ಇರುತ್ತದೆ. ಉತ್ತರಾಖಂಡದ ತೆಹ್ರಿ ಅಣೆಕಟ್ಟು ಒಟ್ಟು ∼4 × 109 m3 ಸಾಮರ್ಥ್ಯ ಹೊಂದಿದ್ದು ಅಂತಹ 200 ದೊಡ್ಡ ಬಿರುಗಾಳಿಗಳಿಂದ ಮಳೆಯು ಪೂರ್ತಿ ಅಣೆಕಟ್ಟನ್ನು ತುಂಬಬಹುದು. RERV ಮತ್ತು ಬಿರುಗಾಳಿಗಳ ಪ್ರದೇಶ-ಕಾಲದ ಅವಿಭಾಜ್ಯದ (ATI, ಯುನಿಟ್ km2 h) ನಡುವಿನ ಸಂಬಂಧವನ್ನು ಈ ಅಧ್ಯಯನವು ನಾಲ್ಕು ಸ್ಥಳಗಳಲ್ಲಿ ಸೂಚಿಸಿದೆ. ಬಿರುಗಾಳಿಗಳ ಮಳೆ ಸ್ವರೂಪವನ್ನು ಗುರುತಿಸುವಲ್ಲಿ RERV-ATI ಸಂಬಂಧದ ಕುರಿತಾದ ಮಾಹಿತಿಯು ಸಹಾಯಕವಾಗಿದೆ. ಒಟ್ಟಾರೆಯಾಗಿ, ವಾತಾವರಣದ ಹವಾಮಾನ ವ್ಯವಸ್ಥೆಗಳ ಬಿರುಗಾಳಿ ಪ್ರಮಾಣದ ಲಕ್ಷಣಗಳ ಬಗ್ಗೆ ಈ ಸಂಶೋಧನೆಗಳು ಈಗಿನ ತಿಳುವಳಿಕೆಯನ್ನು ಹೆಚ್ಚಿಸುತ್ತವೆ.

ಉಲ್ಲೇಖ:

ಸಿಂಧು, ಕೆ. ಡಿ., ಭಟ್ ಜಿ. ಎಸ್., ಸೀಸನಲ್ ಕ್ಯಾರೆಕ್ಟರಿಸ್ಟಿಕ್ಸ್ ಆಫ್ ಸ್ಟಾರ್ಮ್ಸ್ ಓವರ್ ದಿ ಇಂಡಿಯನ್ ಸಬ್ಕಾಂಟಿನೆಂಟ್ (ಭಾರತೀಯ ಉಪಖಂಡದಲ್ಲಿ ಬಿರುಗಾಳಿಗಳ ಕಾಲಮಾನ ಲಕ್ಷಣಗಳು) ವೈಜ್ಞಾನಿಕ ವರದಿಗಳು, 11, 3355 (2021).

https://doi.org/10.1038/s41598-021-82237-w

ಲ್ಯಾಬ್ ವೆಬ್‌ಸೈಟ್:

http://caos.iisc.ac.in/bhat.html
http://kapildevsindhu.weebly.com/