ಕೋವಿಡ್ -19 ಗಾಗಿ ಲಸಿಕೆ ತಯಾರಿ ಕೆಲಸವು ವೇಗವಾಗಿ ಮುಂದುವರಿದಿದ್ದರೂ ಮುನ್ಹಾದಿ ಸೂಚಕಗಳು ಮತ್ತು ವೈರಾಣು ಮಾರಕ/ಆಂಟಿವೈರಲ್ ಔಷಧಗಳ ಆವಿಷ್ಕಾರವು ಹಿಂದಕ್ಕೆ ಬಿದ್ದಿದೆ. ಹಲವಾರು ಸಂಶೋಧನಾ ಗುಂಪುಗಳು OMICs ತಂತ್ರಜ್ಞಾನಗಳನ್ನು ಬಳಸಿ ಉಸಿರಾಟ ಮಾರ್ಗದಲ್ಲಿ SARS-CoV-2 ಸೋಂಕಿಗೆ ಜೀವಿ(ಹೊಸ್ಟ್) ಪ್ರತಿಕ್ರಿಯೆಯನ್ನು ಪರೀಕ್ಷಿಸಿವೆ ಮತ್ತು ದೊಡ್ಡ ಮಟ್ಟದಲ್ಲಿ ಮಾಹಿತಿಯನ್ನು ಕಲೆಹಾಕಲಾಗಿದೆ. ಈ ಮಾಹಿತಿಯ ಜಾಗರೂಕ ವಿಶ್ಲೇಷಣೆಯು COVID-19 ಮುನ್ಹಾದಿ ಮತ್ತು ವೈರಾಣು ಮಾರಕಗಳ ತಯಾರಿಗೆ ಒಳನೋಟಗಳನ್ನು ಒದಗಿಸುತ್ತದೆ.
ಸಾಂಕ್ರಾಮಿಕ ರೋಗಗಳ ಸಂಶೋಧನಾ ಕೇಂದ್ರದ ಶಶಾಂಕ್ ತ್ರಿಪಾಠಿ ಮುಂದಾಳತ್ವದ ಇತ್ತೀಚಿನ ಅಧ್ಯಯನವು ಇ ಬಿಯೊಮೆಡಿಸಿನ್ ನಲ್ಲಿ ಪ್ರಕಟವಾಗಿದ್ದು ಎರಡು ಹೊಸ ಸಂಶೋಧನೆಗಳನ್ನು ವರದಿ ಮಾಡಿದೆ . ಮೂಗಿನ ಹತ್ತಿನಮೂನೆಗಳು ಕೋವಿಡ್ -19 ತೀವ್ರತೆಯನ್ನು ಊಹಿಸಬಹುದಾದ ನಿರ್ದಿಷ್ಟ ಜೀನ್ ಲಕ್ಷಣವನ್ನು ಮತ್ತು COVID-19 ಚಿಕಿತ್ಸೆಗಾಗಿ ಎಫ್‌ಡಿಎ ಅನುಮೋದಿತ ಔಷಧಿಯು(Auranofin) ಒದಗಿಸಬಹುದಾದ ಪರಿಹಾರದ ಬಗ್ಗೆ ಬೆಳಕು ಚೆಲ್ಲುತ್ತದೆ. .
COVID-19 ತೀವ್ರತೆಯನ್ನು ನಿರ್ಣಯಿಸುವ ಈಗಿನ ವಿಧಾನಗಳಲ್ಲಿ ಆಸ್ಪತ್ರೆಗೆ ಭೇಟಿ ನೀಡುವ ಅಗತ್ಯವಿರುವ ರಕ್ತವನ್ನು ತೆಗೆಯುವ ಅಥವಾ ಎದೆಗೂಡು ಕ್ಷಕಿರಣ ತಗೆಯುವ ಕ್ರಮಗಳು ಕೂಡ ಸೇರುತ್ತವೆ. ಈ ಅಧ್ಯಯನದಲ್ಲಿ, ಸಂಶೋಧಕರು ಮೂಗುಗಂಟಲುಮಾರ್ಗ ನಮೂನೆಗಳ ಮೂಲಕ COVID-19 OMIC ಗಳ ಮಾಹಿತಿಯ ವ್ಯಾಪಕ ವಿಶ್ಲೇಷಣೆಯನ್ನು ನಡೆಸಿದರು. ಸೋಂಕಿರುವಾಗ ನಿರಂತರವಾಗಿ ಜೀವಿಯ ಕೆಲವು ಅಂಶಗಳು ಪ್ರೇರಿತವಾಗುವುದು ತಿಳಿದುಬಂತು. ಅವರು ತೀವ್ರ COVID-19 ನ ಮುನ್ಸೂಚಕ ಗುರುತುಗಳಾಗಿ ಕಾರ್ಯನಿರ್ವಹಿಸುವ S100 ವರ್ಗಕ್ಕೆ (S100A6, S100A8, S100A9 ಮತ್ತು S100P) ಸೇರಿದ ನಿರ್ದಿಷ್ಟ ಜೀನ್/ ವಂಶವಾಹಿಗಳನ್ನು ಗುರುತಿಸಿದರು. ಈ ಜೀನ್ ಲಕ್ಷಣವನ್ನು ಮೂಗಿನ ಹತ್ತಿನಮೂನೆಗಳ ಆರ್‌ಟಿ-ಪಿಸಿಆರ್ ಪರೀಕ್ಷೆಯಿಂದ ಪತ್ತೆ ಹಚ್ಚಬಹುದು ಮತ್ತು ಇವುಗಳನ್ನು ಕೋವಿಡ್ -19 ರೋಗತಪಾಸಣೆಗೆ ಸಂಗ್ರಹಿಸಲಾಗುತ್ತದೆ.
ಈ ಅಧ್ಯಯನದಲ್ಲಿ, ವೈರಾಣು ಪುನರುತ್ಪತ್ತಿ ಮತ್ತು ರೋಗದ ಪ್ರಗತಿಯಲ್ಲಿ ಒಳಗೊಂಡಿರುವ ಬಹು ಜೀವಿ ಪ್ರಕ್ರಿಯೆಗಳನ್ನು ಸಂಶೋಧಕರು ಗುರುತಿಸಿದ್ದಾರೆ . ಇವು ಜೀವಿನಿರ್ದೇಶಿತ ಚಿಕಿತ್ಸೆಗೆ ಸಹಾಯವಾಗಬಹುದು ಎಂಬ ವಿಷಯ ಬೆಳಕಿಗೆ ಬಂದಿದೆ. ಗಮನಾರ್ಹವಾಗಿ, ಕೋವಿಡ್ -19 ರೋಗಿಗಳಲ್ಲಿ ಥಿಯೋರೆಡಾಕ್ಸಿನ್ (ಟಿಎಕ್ಸ್‌ಎನ್) ಎಂಬ ರೆಡಾಕ್ಸ್ ರೆಗ್ಯುಲೇಟರಿ ಪ್ರೋಟೀನ್ ನಿರಂತರವಾಗಿ ಅನಿಯಂತ್ರವೆಂದು ತಿಳಿಯಿತು. FDA ಅನುಮೋದಿತ ಔಷಧಿಯಾದ ಔರನೋಫಿನ್ ಥಿಯೊರೆಡಾಕ್ಸಿನ್ ರಿಡಕ್ಟೇಸ್ ಎಂಜೈಮನ್ನು ಗುರಿ ಮಾಡಿ ಥಿಯೋರೆಡಾಕ್ಸಿನ್ ಮಾರ್ಗವನ್ನು ನಿರ್ಬಂಧಿಸುತ್ತದೆ. ಇದು ಪ್ರಿಲಿನಿಕಲ್ ಸಿರಿಯನ್ ಹ್ಯಾಮ್ಸ್ಟರ್ ಮಾದರಿಯಲ್ಲಿ SARS-CoV-2 ಪುನರಾವರ್ತನೆಯನ್ನು ಕೂಡ ತಗ್ಗಿಸುತ್ತದೆ. ಔರನೋಫಿನ್ ಅನ್ನು ಸುರಕ್ಷಿತ ಮತ್ತು ಮಿಗುತಾಯದ ಔಷಧಯಾಗಿ ಆರ್ತ್ರೈಟಿಸ್ ಚಿಕಿತ್ಸೆಗೆ ಬಳಸಲಾಗುತ್ತದೆ. ಆದ್ದರಿಂದ ಈ ಅಧ್ಯಯನವು COVID-19 ಆಂಟಿವೈರಲ್ ಆಗಿ ಕಾರ್ಯನಿರ್ವಹಿಸುತ್ತದೆ ಎಂಬ ಭರವಸೆಯನ್ನು ಮೂಡಿಸುತ್ತದೆ.
ಈ ಸಂಶೋಧನೆಗಳನ್ನು ಉದ್ದಿಮೆ ಮತ್ತು ವೈದ್ಯಕೀಯ ಪಾಲುದಾರರ ಬೆಂಬಲದೊಂದಿಗೆ ಕ್ಲಿನಿಕಲ್ ಪ್ರಯೋಗಗಳ ರೂಪದಲ್ಲಿ ಮುಂದಕ್ಕೆ ತೆಗೆದುಕೊಂಡುಹೋಗಲು ಸಂಶೋಧಕರು ಯೋಜಿಸಿದ್ದಾರೆ.
ಉಲ್ಲೇಖ:
ಅಭಿಜಿತ್ ಬಿಜಿ, ಒಯಾಹಿದ ಖಾಟುನ್, ಶಚೀ ಸ್ವರಾಜ್, ರೋಹನ್ ನಾರಾಯಣ್, ರಾಜು ಎಸ್. ರಾಜಮಣಿ, ರಹಿಲಾ ಸರ್ದಾರ್, ದೀಪಶಿಖಾ ಸತೀಶ್, ಸಿಮ್ರನ್ ಮೆಹ್ತಾ, ಹಿಮ ಬಿಂದು, ಮಧುಮೋಲ್ ಜೀವನ್, ದೀಪಕ್ ಕೆ ಸೈನಿ, ಅಮಿತ್ ಸಿಂಗ್, ದಿನೇಶ್ ಗುಪ್ತಾ, ಶಶಾಂಕ್ ತ್ರಿಪಾಠಿ
ಡೆಂಟಿಫಿಕೇಷನ್ ಆಫ್ COVID-19 ಪ್ರೊಗ್ನಾಸಿಸ್ ಮಾರ್ಕರ್ಸ್ ಅಂಡ್ ತೆರಪೆಟಿಕ್ ಟಾರ್ಗೆಟ್ಸ್ ತ್ರು ಮೆಟ ಅನಾಲಿಸಿಸ್ ಅಂಡ್ ವ್ಯಾಲಿಡೇಷನ್ EBioMedicine, ಸಂಪುಟ 70, 2021, 103525, ISSN 2352-3964.
https://www.scientedirect.com/science/article/pii/S2352396421003182
ಲ್ಯಾಬ್ ವೆಬ್‌ಸೈಟ್: