ಐಐಎಸ್ ಸಿ ಅಂತರವಿಭಾಗೀಯ ಸಂಶೋಧನೆಗೆ ವಿಶೇಷ ಒತ್ತು ನೀಡುತ್ತದೆ. ಬೋಧಕವರ್ಗದವರು ತಮ್ಮ ವಿಭಾಗಗಳು ಮತ್ತು ಶಾಖೆಗಳನ್ನೂ ಸೇರಿಸಿಕೊಂಡು ಸಮಕಾಲೀನ ಅಂತರ ವಿಭಾಗೀಯ ವಿಷಯಗಳಲ್ಲಿ ಸಹಯೋಗ ಮಾಡಿಕೊಳ್ಳುವ, ಬೆಳೆಯುತ್ತಿರುವ ಸಂಸ್ಕೃತಿಯನ್ನು ವಿಷಯಾಧಾರಿತ ಸಮೂಹ ಸಂಶೋಧನೆಗಳು ಪ್ರತಿನಿಧಿಸುತ್ತವೆ. ಸಂಶೋಧನಾ ಸಮೂಹದ ಮುಖ್ಯ ಗುರಿಯೆಂದರೆ ನಮ್ಮ ಧ್ಯೇಯೋದ್ದೇಶಗಳ ಹಂಚಿಕೆ ಮೂಲಕ ಒಟ್ಟಾರೆಯಾಗಿ ಸಹಯೋಗದ ಸಂಶೋಧನೆ ನಡೆಸುವುದು, ನಿಯತ ತಾಂತ್ರಿಕ ಸಭೆಗಳ ಏರ್ಪಾಡು, ಕೇಂದ್ರೀಯ ಕಾರ್ಯಾಗಾರಗಳ ಆಯೋಜನೆ , ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಭಾವದ ಮುಂದೊಡಗುಗಳ ಗುರುತಿಸುವಿಕೆ ಮತ್ತು ಹೆಚ್ಚಿನ ಅನುದಾನವನ್ನು ಪಡೆಯುವುದು. ಇಂತಹ ಹೆಚ್ಚುತ್ತಿರುವ ಸಂಶೋಧನಾ ಸಮೂಹಗಳ ಪಟ್ಟಿ ಈ ಕೆಳಗಿದೆ