ಭೋಧನಾ ಸಿಬ್ಬಂದಿ – 88
ಡಾಕ್ಟರೇಟ್ ವಿದ್ಯಾರ್ಥಿಗಳು – 231
ಸ್ನಾತಕೋತ್ತರ ವಿದ್ಯಾರ್ಥಿಗಳು – 14
ಏಕೀಕೃತ ಡಾಕ್ಟರೇಟ್ ವಿದ್ಯಾರ್ಥಿಗಳು – 69
34 ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆದಿದ್ದಾರೆ
14 ವಿದ್ಯಾರ್ಥಿಗಳು IntPhD ಪದವಿ ಪಡೆದಿದ್ದಾರೆ
3 ವಿದ್ಯಾರ್ಥಿಗಳು Mtech ಪದವಿ ಪಡೆದಿದ್ದಾರೆ
3 ವಿದ್ಯಾರ್ಥಿಗಳು Mtech (Res) ಪದವಿ ಪಡೆದಿದ್ದಾರೆ
ಪ್ರಮುಖ ಸಂಶೋಧನಾ ಕ್ಷೇತ್ರ
ಈ ವಿಭಾಗದ ಸಂಶೋಧನೆಯು ಸ್ಟ್ರಿಂಗ್ ಸಿದ್ಧಾಂತ, ಕಣವಿದ್ಯಮಾನ ವಿಜ್ಞಾನ (ಪಾರ್ಟಿಕಲ್ ಫೆನಾಮಿನಾಲೊಜಿ), ಕ್ಷೇತ್ರ(ಫೀಲ್ಡ್ )ಸಿದ್ಧಾಂತ, ಸಘನ ದ್ರವ್ಯ ಭೌತಶಾಸ್ತ್ರ (ಸೈದ್ಧಾಂತಿಕ ಹಾಗೂ ಪ್ರಯೋಗಪ್ರಧ), ಮೃದುದ್ರವ್ಯ(ಸಾಫ್ಟ್ ಮಾಟರ್) ಮತ್ತು ಸಂಕೀರ್ಣ ವ್ಯವಸ್ಥೆಗಳು(ಕಾಂಪ್ಲೆಕ್ಸ್ ಸಿಸ್ಟಂಸ್), ಜೀವಶಾಸ್ತ್ರ-ಪ್ರೇರಿತ ಭೌತಶಾಸ್ತ್ರ, ಜೈವಿಕಅಣು ರಚನೆ ಮತ್ತು ಜೈವಿಕಭೌತಿಕ ಶಾಸ್ತ್ರ, ಅಣು ಮತ್ತು ದ್ಯುತಿಭೌತವಿಜ್ಞಾನ, ಖಗೋಳಶಾಸ್ತ್ರ ಮತ್ತು ಖಗೋಳಭೌತಶಾಸ್ತ್ರ, ಮತ್ತು ಎಂಇಎಂಎಸ್ ಆಧಾರಿತ ಮತ್ತು ಫೈಬರ್–ದ್ಯುತಿ ಸೆನ್ಸರುಗಳು, ಗ್ರಾಫಿನ್ ಮತ್ತು ನ್ಯಾನೋ ಟ್ಯೂಬುಗಳಂತಹ ಬಹುಕಾರ್ಯರೂಪಿ ದ್ರವ್ಯಗಳು,ಸೂಪರ್ ರೆಸಲುಷನ್ ಪ್ರತಿದೀಪ್ತಿ ಸೂಕ್ಷ್ಮದರ್ಶಕ, ನ್ಯಾನೊ ಮಟ್ಟದ ಇಮೇಜಿಂಗ್, ದ್ಯುತಿ ಶಾಸ್ತ್ರ ಮತ್ತು ಸೂಕ್ಷ್ಮ ಸ್ರಾವಕವಿಜ್ಞಾನ(ಫ್ಲುಯಿಡಿಕ್ಸ್)ಗಳಂತಹ ಅತ್ಯಾಧುನಿಕ ಅನ್ವಯಿಸಕ ಭೌತಶಾಸ್ತ್ರ ಸಂಶೋಧನೆಶಕ್ತಿ ಮತ್ತು ಆರೋಗ್ಯ ನಿಯಂತ್ರಣ ಉಪಕರಣಶಾಸ್ತ್ರ, ಮತ್ತು ದ್ರವ್ಯಗಳ ಅತಿಶೈತ್ಯಕಗಳು, ಅತಿಶೈತ್ಯಕಾರಿ ಉಪಕರಣವಿಜ್ಞಾನ, ದ್ರವ್ಯಗಳ ಮೇಲೆ ಅತಿಶೈತ್ಯಕಾರಿ ಸಂಸ್ಕರಣೆ ವಿಜ್ಞಾನಗಳಂತಹ ಹಲವಾರು ಕ್ಷೇತ್ರಗಳನ್ನು ಒಳಗೊಂಡಿದೆ. ಗಣಿತಶಾಸ್ತ್ರದ ಸಂಶೋಧನೆಗಳಲ್ಲಿ ಶುದ್ಧ ಮತ್ತು ಅನ್ವಯಿಕ ಗಣಿತ, ಸಂಭವನೀಯತೆ, ಭಾಗಶಃ ನಿಷ್ಪನ್ನ ಸಮೀಕರಣಗಳು, ವಿಶ್ಲೇಷಣೆ, ಜ್ಯಾಮಿತಿ, ಟಾಪಾಲಜ, ವಿಶ್ಲೇಷಣಾತ್ಮಕ ಅಂಕಿ ಸಿದ್ಧಾಂತ ಇತ್ಯಾದಿಗಳಿವೆ.
ವಿಷಯ
ಈ ವಿಭಾಗದ ವೈವಿಧ್ಯತೆಯಷ್ಟೇ ಸಂಶೋಧನಾ ವಿಷಯಗಳಲ್ಲೂ ವೈವಿಧ್ಯತೆಯಿದೆ. ಇವುಗಳನ್ನು ಮೇಲೆ ಉಲ್ಲೇಖಿಸಿದ ಸಂಶೋಧನಾ ಕ್ಷೇತ್ರಗಳಿಂದ ಆರಿಸಿಕೊಳ್ಳಬಹುದು. ಈ ಹಲವಾರು ಕ್ಷೇತ್ರಗಳು ಸೈದ್ಧಾಂತಿಕ ಹಾಗೂ ಪ್ರಯೋಗ ಶುದ್ಧ ವಿಜ್ಞಾನಗಳಲ್ಲಿವೆ. ಇವುಗಳ ಜೊತೆಗೆ ಕೆಲವು ಅಂತರವಿಭಾಗೀಯ ಕಾರ್ಯಕ್ರಮಗಳೂ ಬೆಳೆಯುತ್ತಿವೆ. ಉದಾ, ಗಣಿತೀಯ ಜೀವಶಾಸ್ತ್ರ ಮತ್ತು ನ್ಯಾನೋವಿಜ್ಞಾನ. ಉತ್ಪನ್ನ ಪೂರಕ ಸಂಶೋಧನೆಗಳನ್ನೂ ಕೂಡ ಈಗ ನಡೆಸಲಾಗುತ್ತಿದ್ದು ಸಂಶೋಧನೆಗಳ ಪ್ರತಿಫಲದಿಂದ ಉಂಟಾಗುವ ಸೃಜನಶೀಲತೆ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳ ಆಧಾರಿತವಾದ ಉತ್ಪನ್ನಗಳನ್ನು ಅಥವಾ ಪದಾರ್ಥಗಳನ್ನು ವಿಭಾಗದ ಉದ್ದಿಮೆದಾರ ಶಿಕ್ಷಕವರ್ಗದವರು ಮಾರುಕಟ್ಟೆಗೆ ತರುತ್ತಿದ್ದಾರೆ.
ಸಂಶೋಧನಾ ಚಿತ್ರಣ
pdf ಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಈ ವಿಭಾಗದಲ್ಲಿನ ಇಲಾಖೆಗಳು