ತೆಳುವಾದ ಆವಿ ಮತ್ತು ದ್ರಾವಣಗಳಿಂದ ಹರಳುಗಳು ಹೇಗೆ ನ್ಯೂಕ್ಲಿಯೇಟ್/ಬೀಜೀಕರಣ ಆಗುತ್ತವೆ


———

ಮೇಲ್ನೋಟಕ್ಕೆ ಸರಳವಾಗಿದ್ದರೂ, ದ್ರವ ಹಂತದಿಂದ ಹರಳುಗಳ ನ್ಯೂಕ್ಲಿಯೇಶನ್ ಒಂದು ಸಂಕೀರ್ಣ ವಿದ್ಯಮಾನವಾಗಿದೆ. ಹಲವಾರು ಗಣಿತ ಮತ್ತು ಪ್ರಾಯೋಗಿಕ ಅಧ್ಯಯನಗಳಾಗಿಯೂ ಸಂಪೂರ್ಣವಾಗಿ ಅದರ ಕಾರ್ಯವಿಧಾನ ನಮಗೆ ಇನ್ನೂ ಅರ್ಥವಾಗಿಲ್ಲ. ಇತ್ತೀಚಿನ ಅಧ್ಯಯನಗಳು ಶತಮಾನ ಹಳೆಯದಾದ ಶಾಸ್ತ್ರೀಯ ನ್ಯೂಕ್ಲಿಯೇಶನ್ ಸಿದ್ಧಾಂತಕ್ಕೆ ವಿರುದ್ಧವಾಗಿ ಮೊದಲಿಗೆ ಅಣುಗಳು ಒಟ್ಟುಗೂಡುವ ಒಟ್ಟಾರೆಯಾಗಿ ಸ್ಫಟಿಕ ನ್ಯೂಕ್ಲಿಯೇಶನ್ ಆಗುವ ಹರಳುಗಳ ನ್ಯೂಕ್ಲಿಯೇಶನ್ ಎರಡು-ಹಂತದ ಕಾರ್ಯವಿಧಾನದಲ್ಲಿ ನಡೆಯುತ್ತದೆ ಎಂದು ತೋರಿಸಿವೆ. ರಾಸಾಯನಿಕ ಕೈಗಾರಿಕೆಗಳಲ್ಲಿ, ಸ್ಫಟಿಕೀಕರಣ ಪ್ರಕ್ರಿಯೆಗಳ ವಿನ್ಯಾಸ ಮತ್ತು ನಿಯಂತ್ರಣಕ್ಕೆ ನ್ಯೂಕ್ಲಿಯೇಶನ್ ಕಾರ್ಯವಿಧಾನ ತಿಳುವಳಿಕೆ ಮುಖ್ಯ . ಉದಾಹರಣೆಗೆ, ಔಷಧಿ ಉದ್ಯಮದ ವಿಷಯಕ್ಕೆ ಬಂದರೆ ಒಬ್ಬ ವ್ಯಕ್ತಿಯು ಸೇವಿಸುವ ಒಂದು ಔಷಧದ ಪರಿಣಾಮಕಾರಿತ್ವವು ಸಕ್ರಿಯ ಔಷಧೀಯ ಪದಾರ್ಥವನ್ನು ಹೊಂದಿರುವ ಹರಳುಗಳ (ಪಾಲಿಮಾರ್ಫ್ ಎಂದೂ ಕರೆಯುತ್ತಾರೆ) ರಚನೆಯನ್ನು ಅವಲಂಬಿಸಿರುತ್ತದೆ. ಆದ್ದರಿಂದ, ಹರಳುಗಳ ರಚನೆ ಸಮಯದಲ್ಲಿ ಬಹುರೂಪದ ನಿಯಂತ್ರಣವು ಪ್ರಮುಖ ತಾಂತ್ರಿಕ ಮತ್ತು ವಾಣಿಜ್ಯ ಪ್ರಾಮುಖ್ಯತೆಯನ್ನು ಹೊಂದಿದೆ.

ಇಂತಹ ಸನ್ನಿವೇಶದಲ್ಲಿ, ರಾಸಾಯನಿಕ ಎಂಜಿನಿಯರಿಂಗ್ ವಿಭಾಗದ ರವಿಕುಮಾರ್ ರೆಡ್ಡಿ ಅಡ್ಡುಲ ಮತ್ತು ಸುದೀಪ್ ಎನ್ ಪುನ್ನಾಥನಮ್ ಅವರು ಹರಳುಗಳ ನ್ಯೂಕ್ಲಿಯೇಶನ್ ಅನ್ನು ದುರ್ಬಲಗೊಳಿಸುವ ಹಂತಗಳಿಂದ ವಿವರಿಸಲು ಹೊಸ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದ್ದಾರೆ, ಇದನ್ನು ‘ಮಾಲಿಕ್ಯುಲಾರ್ ತಿಯರಿ ಆಫ್ ನ್ಯೂಕ್ಲಿಯೇಶನ್’ (ನ್ಯುಕ್ಲಿಯೇಶನ್ನಿನ ಅಣು ಸಿದ್ಧಾಂತ)ಎಂದು ಕರೆಯಲಾಗುತ್ತದೆ. ಆವಿಗಳು ಮತ್ತು ದುರ್ಬಲಗೊಳಿಸುವ ದ್ರಾವಣಗಳಳಂತಹ ನ್ಯೂಕ್ಲಿಯಸ್ ಅನ್ನು ರೂಪಿಸುವ ಘಟಕದ ಸಾಂದ್ರತೆಯು ಕಡಿಮೆ ಇರುವುದನ್ನು ದುರ್ಬಲಗೊಳಿಸುವ ಹಂತವೆಂದು ವ್ಯಾಖ್ಯಾಯಿಸಲಾಗಿದೆ. ಸಂಖ್ಯಾಶಾಸ್ತ್ರ ಯಂತ್ರಕಶಾಸ್ತ್ರದ ಆಧಾರದ ಅಣ್ವಿಕ ಸಿದ್ಧಾಂತವು ಇಲ್ಲಿಯವರೆಗೆ ನ್ಯೂಕ್ಲಿಯೇಶನ್ ಪ್ರಕ್ರಿಯೆಯ ದುರ್ಬಲ ಘಟ್ಟಗಳಿಂದ ಸಂಪೂರ್ಣವಾದ ವಿವರಣೆ ನೀಡಲು ಸಾಧ್ಯವಾಗಿದೆ. ಅಣ್ವಿಕ ಸಿದ್ಧಾಂತವು ದ್ರಾವಣಗಳಿಂದ ಹರಳು ನ್ಯೂಕ್ಲಿಯೇಶನ್ ಕಾರ್ಯವಿಧಾನದ ಬಗ್ಗೆ ಪ್ರಮುಖ ಒಳನೋಟಗಳನ್ನು ನೀಡುತ್ತದೆಂಬ ನಿರೀಕ್ಷೆಯಿದೆ. ಇದು ಹರಳು ವಿನ್ಯಾಸ ರಚನೆಯಲ್ಲಿ ಪ್ರಗತಿ ಸಾಧಿಸಲು ಮತ್ತು ಹರಳೀಕರಣ ಪ್ರಕ್ರಿಯೆಯನ್ನು ನಿಯಂತ್ರಿಸಲು ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಉಪಯುಕ್ತವಾಗಬಲ್ಲದು

ಉಲ್ಲೇಖ:

ರವಿಕುಮಾರ್ ರೆಡ್ಡಿ ಅಡ್ಡುಲಾ ಮತ್ತು ಸುದೀಪ್ ಎನ್ ಪುನ್ನಾಥನಮ್, ಮಾಲಿಕ್ಯುಲಾರ್ ತಿಯರಿ ಆಫ್ ನುಕ್ಲಿಯೇಷನ್ ಫ್ರಂ ಡೈಲೂಟ್ ಫೇಸಸ್: ಫಾರ್ಮುಲೇಷನ್ ಅಂಡ್ ಅಪ್ಲಿಕೇಷನ್ ತೊ ಲೆನ್ನಾರ್ಡ್- ಜೋನ್ಸ್ ವೇಪರ್, ಫಿಸಿಕಲ್ ರಿವ್ಯು ಲೆಟರ್ಸ್ (2021).

https://journals.aps.org/prl/abstract/10.1103/PhysRevLett.126.146001

ಲ್ಯಾಬ್ ವೆಬ್‌ಸೈಟ್:

https://chemeng.iisc.ac.in/chemeweb/faculty_sudeep.htm