ದತ್ತಾಂಶ ವಿಜ್ಞಾನದಲ್ಲಿ ಸಹಭಾಗಿತ್ವಕ್ಕೆ ಫ್ಯುಜಿತ್ಸು ಲಿಮಿಟೆಡ್ ಮತ್ತು ಐ.ಐ.ಎಸ್.ಸಿ. ಒಡಂಬಡಿಕೆಗೆ ಸಹಿ


22 ಮೇ 2024

ವಿವಿಧ ತಾತ್ವಿಕ ಮತ್ತು ವ್ಯವಸ್ಥೆಗಳ ಹಿನ್ನೆಲೆಯ ಸಂಶೋಧಕರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ.) ಮತ್ತು ಫ್ಯುಜಿತ್ಸು ಲಿಮಿಟೆಡ್ ಗಳು ಒಡಂಬಡಿಕೆಯೊಂದಕ್ಕೆ ಸಹಿ ಹಾಕಿವೆ. ನಿರ್ಧಾರಗಳನ್ನು ತಳೆಯಲು ದತ್ತಾಂಶ ಬಳಸುವ ವಿಸ್ತೃತ ಹಾಗೂ ಸಂಕೀರ್ಣ ಪ್ರಕ್ರಿಯೆಗಳಲ್ಲಿ ಉದ್ಭವವಾಗುವ ವೈಜ್ಙಾನಿಕ ಸವಾಲುಗಳ ಸಂದರ್ಭಗಳಲ್ಲಿನ ದತ್ತಾಂಶ ವಿಜ್ಞಾನ ಕ್ಷೇತ್ರಕ್ಕೆ ಅಲ್ಗಾರಿದಂ ಬುನಾದಿಯನ್ನು ಸಿದ್ಧಪಡಿಸುವುದು ಈ ಸಹಭಾಗಿತ್ವದ ಗುರಿಯಾಗಿದೆ. ಮಾಡೆಲಿಂಗ್ ತೊಡಕುಗಳು, ಇನ್ಫರೆನ್ಷಿಯಲ್ ಸವಾಲುಗಳು, ಕಾಂಪ್ಯುಟೇಷನಲ್ ತೊಡಕುಗಳು ಹಾಗೂ ಆನ್ವಯಿಕತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಇದು ಗಮನ ಕೇಂದ್ರೀಕರಿಸಲಿದೆ.

ಐ.ಐ.ಎಸ್.ಸಿ. ಹಾಗೂ ಫ್ಯುಜಿತ್ಸು ಲಿಮಿಟೆಡ್ ಗಳು 2024ರ ಮೇ 22ರಂದು ಐ.ಐ.ಎಸ್.ಸಿ. ಬೆಂಗಳೂರು ಕ್ಯಾಂಪಸ್ಸಿನಲ್ಲಿ ಒಡಂಬಡಿಕೆಗೆ ಸಹಿ ಹಾಕಿದವು. ಕಾಂಪ್ಯುಟೇಷನಲ್ ಹಾಗೂ ಡ್ಯಾಟಾ ಸೈನ್ಸಸ್ ವಿಭಾಗದ ಪ್ರೊಫೆಸರ್ ಗಳಾದ ಸೌಮ್ಯೇಂದು ರಹಾ ಮತ್ತು ದೇಬನಾಥ್ ಪಾಲ್ ಅವರು ಸಂಸ್ಥೆಯ ಕಡೆಯಿಂದ ಪ್ರಧಾನ ಪರಿವೀಕ್ಷಕರಾಗಿರುತ್ತಾರೆ.

ಈ ಒಪ್ಪಂದದ ಅನ್ವಯ ಸಂಶೋಧನಾ ದತ್ತಾಂಶದ ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಬಳಕೆಗೆ ಪೂರಕವಾಗಿ ಪ್ರಮಾಣೀಕರಣಗಳು, ಮಾರ್ಗದರ್ಶಿ ಸೂತ್ರಗಳು ಹಾಗೂ ಅನುಪಾಲನಾ ಕ್ರಮಗಳನ್ನು ಸಿದ್ಧಪಡಿಸಲು ಜಂಟಿ ಸಂಶೋಧನೆಗೆ ಗಮನ ಕೇಂದ್ರೀಕರಿಸಲಾಗುವುದು. ಹೈ-ಪರ್ಫಾಮೆನ್ಸ್ ಕಂಪ್ಯೂಟಿಂಗ್ (ಎಚ್.ಪಿ.ಸಿ.) ವಲಯದಲ್ಲಿ ಜ್ಞಾನ ಪ್ರಸರಣದ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಜನಸಂಪರ್ಕ ಕಾರ್ಯಕ್ರಮಗಳಿಗೂ ಒತ್ತು ಕೊಡಲಾಗುವುದು. ಐ.ಐ.ಎಸ್.ಸಿ. ಮತ್ತು ಫ್ಯುಜಿತ್ಸು ಸಂಶೋಧಕರು ಹೈ ಡೈಮನ್ಷನ್ಸ್ ಅಂಡ್ ಸ್ಪೈಕ್ಸ್, ಗ್ರ್ಯಾಫ್ ಗಳು, ಡಿಫ್ಯೂಷನ್ ಮ್ಯಾಪ್ ಗಳು, ಸೆಮಿ-ಸೂಪರ್ ವೈಸ್ಡ್ ಲರ್ನಿಂಗ್, ಸ್ಪೆಕ್ಟ್ರಲ್ ಕ್ಲಸ್ಟರಿಂಗ್, ಕಾನ್ಸೆಂಟ್ರೇಷನ್ ಇನೀಕ್ವಾಲಿಟೀಸ್, ಸ್ಪೇಸ್ ವೆಕ್ಟರ್ಸ್ ಅಂಡ್ ಲೋ-ರ‌್ಯಾಂಕ್ ಮ್ಯಾಟ್ರಿಸಿಸ್, ಸ್ಪೇಸ್ ರಿಕವರಿ ಅಂಡ್ ಸ್ಕ್ಯಾರಿಫಿಕೇಷನ್, ಬ್ಲಾಕ್ ಮಾಡೆಲ್ಸ್ ಮತ್ತು ಸಿಂಕ್ರೊನೈಸೇಷನ್ ತೊಡಕುಗಳ ಬಗ್ಗೆ ಕಾರ್ಯತತ್ಪರರಾಗಲಿದ್ದಾರೆ.

ಈ ಉಪಕ್ರಮವು ಹೊಸದಾದ ಹೈ- ಪರ್ಫಾಮೆನ್ಸ್ ಕಾಂಪ್ಯುಟೇಷನ್ ಮಾದರಿಗಳು ಹಾಗೂ ಅವುಗಳನ್ನು ಕಾರ್ಯರೂಪಕ್ಕೆ ತರುವ ದಿಸೆಯಲ್ಲಿನ ಶೋಧನೆಗಳಿಗೂ ಒತ್ತು ನೀಡಲಿದೆ. ದತ್ತಾಂಶ ವಿಜ್ಞಾನದ ತೊಡಕುಗಳಿಗೆ ಪರಿಣಾಮಕಾರಿ ಹಾಗೂ ಉಪಯುಕ್ತ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ಹೈ-ಪರ್ಫಾಮೆನ್ಸ್ ಅಲ್ಗಾರಿದಮ್ ಜ್ಞಾನಶಾಖೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಜಂಟಿ ಸಂಶೋಧನೆಯ ತಾಂತ್ರಿಕ ಕ್ಷೇತ್ರವು ಈ ಪ್ರಯತ್ನಗಳ ಕೇಂದ್ರ ವಿಷಯವಾಗಿರುತ್ತದೆ.

ಸಂಪರ್ಕಿಸಿ:
ಐ.ಐ.ಎಸ್.ಸಿ. ಸಂವಹನಗಳ ಕಚೇರಿ | news@iisc.ac.in