ಶಾಖಾ ಡೀನ್ ಗಳು

ಡೀನ್, ಎಂಜಿನಿಯರಿಂಗ್ ಶಾಖೆ
ಪ್ರೊ ವೈ ಎನ್ ಶ್ರೀಕಾಂತ್
ಇ-ಮೇಲ್: dean.engg@iisc.ac.in
ದೂರವಾಣಿ: 91- 80 – 2293 2044

ವೈ.ಎನ್.ಶ್ರೀಕಾಂತ್ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಬಿ.ಇ. ಪದವಿ ಪಡೆದಿದ್ದಾರೆ. ನಂತರ, ಭಾರತೀಯ ವಿಜ್ಞಾನ ಸಂಸ್ಥೆಯ ಕಂಪ್ಯೂಟರ್ ವಿಜ್ಞಾನ ಮತ್ತು ಆಟೋಮೇಷನ್ ವಿಭಾಗಗಳಿಂದ ಕ್ರಮವಾಗಿ ಎಂ.ಇ. ಹಾಗೂ ಪಿಎಚ್.ಡಿ. ಗಳಿಸಿದ್ದಾರೆ. ಕಂಪೈಲರ್ ಡಿಸೈನ್ ಮತ್ತು ಲ್ಯಾಂಗ್ವೇಜ್ ಪ್ರೋಗ್ರ್ಯಾಮಿಂಗ್ ಅವರ ಆಸಕ್ತಿಯ ಕ್ಷೇತ್ರಗಳು. ಅವರು 1987ರಲ್ಲಿ ಸಹಾಯಕ ಪ್ರೊಫೆಸರ್ ಆಗಿ ಸಿಎಸ್ಎ ವಿಭಾಗ ಸೇರಿದರು. 2000-2005ರ ಅವಧಿಯಲ್ಲಿ ಸಿಎಸ್ಎ ಛೇರ್ ಮ್ಯಾನ್ ಆಗಿದ್ದರು.

ಡೀನ್, ವಿಜ್ಞಾನ ಶಾಖೆ
ಪ್ರೊ ಎ ಜಿ ಸ್ಯಾಮುಯೇಲ್ಸನ್
ಇ-ಮೇಲ್: dean.sci@iisc.ac.in
ದೂರವಾಣಿ: 91- 80 – 2293 3355

ಅಶೋಕ ಸ್ಯಾಮ್ಯುಯೆಲ್ಸನ್ ಅವರು ಐಐಟಿ ಮದ್ರಾಸ್ ನಲ್ಲಿ 1978ರಲ್ಲಿ ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ. ವ್ಯಾಸಂಗ ಮಾಡಿದರು. ನಂತರ, ಕಾರ್ನೆಲ್ ವಿಶ್ವವಿದ್ಯಾಲಯದಿಂದ 1983ರಲ್ಲಿ ಪಿಎಚ್.ಡಿ. ಪಡೆದರು. 1983ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಸೇರಿದರು. ಆಗಿನಿಂದಲೂ ಸಂಸ್ಥೆಯ ನಿರವಯವ ಮತ್ತು ಭೌತ ರಸಾಯನ ಶಾಸ್ತ್ರ ವಿಭಾಗದ ಅಧ್ಯಾಪಕ ವರ್ಗದಲ್ಲಿದ್ದಾರೆ. ಹೊಸ ವೇಗವರ್ಧಕಗಳ ತಯಾರಿಕೆಗೆ ಸಂಬಂಧಿಸಿದಂತೆ ಆರ್ಗ್ಯಾನೋಮೆಟ್ಯಾಲಿಕ್ ಮತ್ತು ಕೋಆರ್ಡಿನೇಷನ್ ಕೆಮಿಸ್ಟ್ರಿಯಲ್ಲಿ ಸಂರಚನಾ ಕ್ರಿಯಾಶೀಲತೆ ಸಂಬಂಧಗಳು ಅವರು ಆಸಕ್ತಿಯ ಕ್ಷೇತ್ರಗಳಾಗಿವೆ.

ಡೀನ್, ಪದವಿಹಂತದ ಶೈಕ್ಷಣಿಕ ಕೋರ್ಸ್ (ಅಂಡರ್ ಗ್ರ್ಯಾಜುಯೇಟ್ ಪ್ರೋಗ್ರ್ಯಾಮ್)
ಪ್ರೊ. ಬಾಲಾಜಿ ಜಾಗಿರ್ದಾರ್
ಇ-ಮೇಲ್: dean.ug@iisc.ac.in
ದೂರವಾಣಿ: 91-80-2293 3554/2825/3184

ಬಾಲಾಜಿ ಜಾಗೀರ್ದಾರ್‌ರವರು 1989ರಲ್ಲಿ ಐ‌ಐಟಿ-ಬಾಂಬೆಯಿಂದ ರಸಾಯನಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಮತ್ತು 1994ರಲ್ಲಿ ಕಾನ್ಸಾಸ್ ಸ್ಟೇಟ್ ಯೂನಿವರ್ಸಿಟಿಯಿಂದ ರಸಾಯನಶಾಸ್ತ್ರದಲ್ಲಿ ಪಿ‌ಎಚ್‌ಡಿ. ಪದವಿ ಗಳಿಸಿದರು.  ಭಾರತಕ್ಕೆ ಮರಳುವ ಮೊದಲು 1994-95ರಲ್ಲಿ ಬೌಲ್ಡರ್‌ನ ಕೊಲೊರಾಡೋ ವಿಶ್ವವಿದ್ಯಾಲಯದಲ್ಲಿ ಪೋಸ್ಟ್‌ಡಾಕ್ ಆಗಿ ಒಂದೂವರೆ ವರ್ಷ ಕೆಲಸ ಮಾಡಿದರು. ನಂತರ ಅಕ್ಟೋಬರ್ 1995ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಅಜೈವಿಕ ಮತ್ತು ಭೌತಿಕ ರಸಾಯನಶಾಸ್ತ್ರದ ವಿಭಾಗದಲ್ಲಿ ಅಧ್ಯಾಪಕರಾಗಿ ಸೇರಿದರು.  ಉಪನ್ಯಾಸಕರಾಗಿ ಸೇರಿಕೊಂಡ ಅವರು 2011ರಲ್ಲಿ ಪೂರ್ಣ ಪ್ರಾಧ್ಯಾಪಕ ಹುದ್ದೆಗೆ ಏರಿದರು.  ಆರ್ಗ್ಯಾನೊಮೆಟಾಲಿಕ್ ಸಂಯುಕ್ತಗಳನ್ನು ಬಳಸಿಕೊಂಡು ಸಣ್ಣ ಅಣುಗಳನ್ನು ಸಕ್ರಿಯಗೊಳಿಸುವುದು, ಏಕರೂಪ ಮತ್ತು ವಿವಿಧ ರೂಪಗಳ ವೇಗವರ್ಧನೆ, ಹೈಡ್ರೋಜನ್ ಸಂಗ್ರಹಣೆ ಮತ್ತು ಉತ್ಪಾದನೆಗೆ ಸಂಬಂಧಿಸಿದ ವಸ್ತುಗಳು ಅವರ ಸಂಶೋಧನಾ ಆಸಕ್ತಿಗಳಲ್ಲಿ ಸೇರಿವೆ.

ಅಸೋಸಿಯೇಟ್ ಡೀನ್, ಪದವಿಹಂತದ ಶೈಕ್ಷಣಿಕ ಕೋರ್ಸ್ (ಅಂಡರ್ ಗ್ರ್ಯಾಜುಯೇಟ್ ಪ್ರೋಗ್ರ್ಯಾಮ್)
ಪ್ರೊ ನಾಗಸುಮ ಚಂದ್ರ
ಇ-ಮೇಲ್: ascdean.ugacad@iisc.ac.in
ದೂರವಾಣಿ: 91- 80 – 2293 3554/2892
91-80-2360-1552 / 2360-0683

ನಾಗಸುಮ ಚಂದ್ರ ಅವರು ಯುನೈಟೆಡ್ ಕಿಂಗ್ ಡಮ್ ಬ್ರಿಸ್ಟಲ್ ವಿಶ್ವವಿದ್ಯಾಲಯದಿಂದ 1992ರಲ್ಲಿ ಪಿಎಚ್.ಡಿ. ಪದವಿ ಗಳಿಸಿದ್ದಾರೆ. ಸಂರಚನಾ ಜೀವಶಾಸ್ತ್ರ ಕ್ಷೇತ್ರದಲ್ಲಿ ನೆಹರು ಸೆಂಟೆನರಿ ಫೆಲೋಷಿಪ್ ಮೂಲಕ ಅವರು ಪಿಎಚ್.ಡಿ. ವ್ಯಾಸಂಗ ಮಾಡಿದರು. ನಂತರ, ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಸೇರಿದರು. ಪೋಸ್ಟ್ ಡಾಕ್ಟೋರಲ್ ಫೆಲೋ ಆಗಿ ಸಂಸ್ಥೆ ಸೇರಿದ ಅವರು ನಂತರ ತಮ್ಮದೇ ಸಂಶೋಧನಾ ತಂಡ ರಚಿಸಿದರು. ಪ್ರಸ್ತುತ ಅವರು ಜೀವರಸಾಯನ ಶಾಸ್ತ್ರ ವಿಭಾಗದಲ್ಲಿ ಪ್ರೊಫಸರ್ ಆಗಿದ್ದಾರೆ. ಜೊತೆಗೆ, ಸಂಸ್ಥೆಯ ಜೈವಿಕ ಎಂಜಿನಿಯರಿಂಗ್ ಮತ್ತು ಗಣಿತೀಯ ಜೀವಶಾಸ್ತ್ರ ಉಪಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಮಾಲಿಕ್ಯುಲರ್ ಸಿಸ್ಟಮ್ಸ್ ಬಯಾಲಜಿ ಕ್ಷೇತ್ರವನ್ನು ಸ್ಥಾಪಿಸಿದ ಶ್ರೇಯ ಅವರದ್ದಾಗಿದೆ. ಸಂಸ್ಥೆಯಲ್ಲಿ ಜೈವಿಕ ಮಾಹಿತಿ (ಬಯೋಇನ್ ಫರ್ಮ್ಯಾಟಿಕ್ಸ್) ಅಭಿವೃದ್ಧಿಪಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಂಕೀರ್ಣ ಜೈವಿಕ ಪ್ರಕ್ರಿಯೆಗಳ ಕಾಂಪ್ಯುಟೇಷನಲ್ ಮಾಡೆಲಿಂಗ್ ಅವರ ಅಂತರಶಿಸ್ತು ಸಂಶೋಧನೆಯಾಗಿದೆ. ಅವರು, ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ ನ ಚುನಾಯಿತ ಗೌರವ ಸದಸ್ಯ ಆಗಿದ್ದಾರೆ.