ಐಐಎಸ್‌ಸಿಯಲ್ಲಿ ಅಂತರಶಿಸ್ತೀಯ ಇಂಧನ ಸಂಶೋಧನಾ ಕೇಂದ್ರದ (ಐಸಿಇಆರ್) ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ


29 ಡಿಸೆಂಬರ್ 2023

 

ಕೇಂದ್ರದ ವಿದ್ಯುತ್ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನಗಳ ಸಚಿವರಾದ ಶ್ರೀ ಆರ್ ಕೆ ಸಿಂಗ್ ಅವರು ಐ.ಐ.ಎಸ್.ಸಿ.ದಲ್ಲಿ ಅಂತರಶಿಸ್ತೀಯ ಇಂಧನ ಸಂಶೋಧನಾ ಕೇಂದ್ರದ (ICER) ಹೊಸ ಕಟ್ಟಡಕ್ಕೆ 2023ರ ಶಂಕುಸ್ಥಾಪನೆ ನೆರವೇರಿಸಿದರು. ಪವರ್ ಫೈನಾನ್ಸ್ ಕಾರ್ಪೊರೇಷನ್ (PFC) ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಉಪಕ್ರಮದ ಅಡಿಯಲ್ಲಿ ಈ ಕೇಂದ್ರಕ್ಕೆ ನೆರವು ನೀಡುತ್ತಿದೆ. ಇಂಧನ ಸಂಶೋಧನೆ ಮತ್ತು ಸುಸ್ಥಿರ ತಂತ್ರಜ್ಞಾನಗಳ ಭವಿಷ್ಯ ರೂಪಿಸುವ ದಿಸೆಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ಐಸಿಇಆರ್ ಸಂಶೋಧನಾ ಉಪಕ್ರಮಗಳು ಹಸಿರು ಜಲಜನಕ, sCo2, ವಿದ್ಯುತ್, ಟರ್ಬೈನ್ ಮತ್ತು ಶುದ್ಧ ಕಲ್ಲಿದ್ದಲು ತಂತ್ರಜ್ಞಾನಕ್ಕಾಗಿ “ನಿವ್ವಳ ಶೂನ್ಯ” ತಂತ್ರಜ್ಞಾನ ಅಭಿವೃದ್ಧಿ ಸೇರಿದಂತ ನವೀಕರಿಸಬಹುದಾದ ಶಕ್ತಿ ವಲಯಗಳ ವ್ಯಾಪ್ತಿಯ ಮೇಲೆ ಮೇಲೆ ಗಮನ ಕೇಂದ್ರೀಕರಿಸುತ್ತವೆ. ಜೊತೆಗೆ, ಜೈವಿಕ ತ್ಯಾಜ್ಯದಿಂದ ಜಲಜನಕ ಮತ್ತು ಇತರ ಜೈವಿಕ ಇಂಧನಗಳ ಉತ್ಪಾದನೆಂತಹ ಹಸಿರು ಇಂಧನ ತಂತ್ರಜ್ಞಾನಗಳು, ಸುಧಾರಿತ ಬ್ಯಾಟರಿಗಳು ಮತ್ತು ಇಂಧನ ಶೇಖರಣಾ ವ್ಯವಸ್ಥೆಗಳು &; ಸುಸ್ಥಿರ ತಂತ್ರಜ್ಞಾನಗಳ ಬಗ್ಗೆ ಬಗೆಗಿನ ಕುರಿತಾದ ಮುಂಚೂಣಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೂ ಒತ್ತುಕೊಡುತ್ತವೆ.

ಈ ಹೊಸ ಕಟ್ಟಡದ ಕಾಮಗಾರಿಯನ್ನು 2026ರ ಮಾರ್ಚ್ ವೇಳೆಗೆ ಪೂರ್ಣಗೊಳಿಸುವ ಗುರಿ ಇದ್ದು, ಇದಕ್ಕಾಗಿ ಪಿ.ಎಫ್.ಸಿ. ರೂ 60.74 ಕೋಟಿ ಮಂಜೂರು ಮಾಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಆರ್ ಕೆ ಸಿಂಗ್ ಅವರು, “ತನ್ನ ಪರಂಪರೆಗೆ ಕೊಡುಗೆ ನೀಡುತ್ತಾ ಸಾಗುತ್ತಿರುವ ಶ್ರೀಮಂತ ಇತಿಹಾಸ ಹೊಂದಿರುವ ಈ ಗೌರವಾನ್ವಿತ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನಗೆ ಸಂತಸ ತಂದಿದೆ. ಭಾರತವು ನವೀಕರಿಸಬಹುದಾದ ಇಂಧನದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ. ನಾವು 2030ರಲ್ಲಿ ತಲುಪಲು ಹಾಕಿಕೊಂಡಿದ್ದ ಗುರಿಯನ್ನು ಒಂಬತ್ತು ವರ್ಷಗಳ ಮುಂಚೆಯೇ ಸಾಧಿಸಿದ್ದೇವೆ. ನಮ್ಮ ಒಟ್ಟು ಸ್ಥಾಪಿತ ಸಾಮರ್ಥ್ಯದ 43% ಇಂಧನವು ಪಳೆಯುಳಿಕೆಯೇತರವಾಗಿದ್ದು, ಸೌರ, ಗಾಳಿ ಮತ್ತು ಜಲವಿದ್ಯುತ್ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದೇವೆ. ನಮ್ಮ ಬೆಳವಣಿಗೆಯು ಅಭಿವೃದ್ಧಿ ಹೊಂದಿದ ದೇಶಗಳನ್ನು ಮೀರಿ ಮುನ್ನಡೆದಿದ್ದು, ಇದರಿಂದಾಗಿ, ಈ ಕ್ಷೇತ್ರದಲ್ಲಿ ಪ್ರಮುಖ ಪ್ರವರ್ತಕ ದೇಶವಾಗಿದ್ದೇವೆ. ವಿದ್ಯುತ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿದ್ದು, ಎಲ್ಲರಿಗೂ ಇದರ ಲಭ್ಯತೆ ಖಾತರಿಗೊಳಿಸಲಾಗಿದೆ. ಇದೇ ವೇಳೆ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿದ್ಯುತ್ ಲಭ್ಯತೆ ಪ್ರಮಾಣ ಗಮನಾರ್ಹವಾಗಿ ಹೆಚ್ಚಳವಾಗಿದೆ. ಭಾರತ ದೇಶವು “ಇಂಧನ ರೂಪಾಂತರ”ಕ್ಕೆ ಸಂಬಂಧಿಸಿದಂತೆ ವಿಭಿನ್ನ ಹಾಗೂ ಸುಧಾರಿತ ಜಾಗತಿಕ ಅಗ್ರಮಾನ್ಯ ರಾಷ್ಟ್ರವಾಗಿದ್ದು, ಸುಸ್ಥಿರ ಭವಿಷ್ಯಕ್ಕಾಗಿ ಅಗತ್ಯ ಗತಿಯನ್ನು ಸಿದ್ಧಪಡಿಸುತ್ತಿದೆ” ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ, ಐಐಎಸ್ಸಿ ನಿರ್ದೇಶಕ ಪ್ರೊ.ಗೋವಿಂದನ್ ರಂಗರಾಜನ್ ಮಾತನಾಡಿ, “ಪಿ.ಎಫ್.ಸಿ. ಸಂಸ್ಥೆಯ ಈ ಉದಾರ ಧನಸಹಾಯವು ಇಂಧನಕ್ಕೆ ಸಂಬಂಧಿಸಿದಂತೆ ನಿರ್ಣಾಯಕ ಸವಾಲುಗಳನ್ನು ಎದುರಿಸುವ ನಮ್ಮ ಪ್ರಯತ್ನಗಳಿಗೆ ದೊಡ್ಡ ಮಟ್ಟದ ಉತ್ತೇಜನವಾಗಿದೆ. ಉದ್ದೇಶಿತ ಹೊಸ ಕಟ್ಟಡವು ಶುದ್ಧ ಇಂಧನ ಮೂಲಗಳನ್ನು ಆಧರಿಸಿದ ಸುಸ್ಥಿರ ಭವಿಷ್ಯಕ್ಕಾಗಿ ಸಮಾನ ದೃಷ್ಟಿಕೋನದ ಸೂಚಕವಾಗಿದೆ. ಈ ಕೇಂದ್ರದಲ್ಲಿ ನಡೆಯುವ ಸಂಶೋಧನೆಗಳು ಹೊಸಬಗೆಯ ಪರಿಹಾರಗಳನ್ನು ಲಭ್ಯವಾಗಿಸಲಿದ್ದು, ಭಾರತ ದೇಶವನ್ನು ಹವಾಮಾನ ಬದಲಾವಣೆ ವಿರುದ್ಧದ ಜಾಗತಿಕ ಹೋರಾಟದಲ್ಲಿ ಮುಂಚೂಣಿಗೆ ಕೊಂಡಯ್ಯುತ್ತವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.