————————
08ನೇ ಜುಲೈ 2022
ಇಂಡಿಯಾ- ನೋಕಿಯಾ ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್ ಸಿ) ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು, ಐ.ಐ.ಎಸ್. ಸಿ.ಯಲ್ಲಿ “ನೆಟ್ ವರ್ಕ್ಡ್ ರೊಬೊಟಿಕ್ಸ್”ಗೆ ಸಂಬಂಧಿಸಿದ ನೋಕಿಯಾ ಉತ್ಕಷ್ಟತಾ ಕೇಂದ್ರದ ಕಾರ್ಯಾರಂಭವನ್ನು ಇಂದು ಪ್ರಕಟಿಸಿದವು. ಈ ಉತ್ಕೃಷ್ಟತಾ ಕೇಂದ್ರವು ರೋಬೋಟಿಕ್ಸ್ ಗೆ ಸಂಬಂಧಿಸಿದ ಅಂತರ್-ಶಿಸ್ತೀಯ ಸಂಶೋಧನೆಯನ್ನು ಮತ್ತು 5ಜಿ ಹಾಗೂ ಕೃತಕ ಬುದ್ಧಿಮತ್ತೆ (ಎಐ)ಯಲ್ಲಿ ಉನ್ನತ ಸಂವಹನ ತಾಂತ್ರಿಕತೆಯನ್ನು ಉತ್ತೇಜಿಸುತ್ತದೆ. ಕೈಗಾರಿಕಾ ಸ್ವಯಂಚಾಲನೆ, ಕೃಷಿ ಮತ್ತು ವಿಕೋಪ ನಿರ್ವಹಣೆ ವಲಯಗಳ ಕ್ರಮಾನುಸರಣೆಗಳನ್ನು ಕೂಡ (ಯೂಸ್ ಕೇಸಸ್) ಈ ಕೇಂದ್ರವು ಅಭಿವೃದ್ಧಿಪಡಿಸುತ್ತದೆ. ಜೊತೆಗೆ, ಶಿಕ್ಷಣ ವಲಯ, ನವೋದ್ಯಮಗಳು ಹಾಗೂ ಉದ್ಯಮ ಕಾರ್ಯಪರಿಸರ ಪಾಲುದಾರರ ನಡುವೆ ಸಂಶೋಧನೆಗಳನ್ನು ಮತ್ತು ಕ್ರಮಾನುಸರಣೆಗಳನ್ನು ಸಿದ್ಧಪಡಿಸುವುದರಲ್ಲಿ ಪರಸ್ಪರ ತೊಡಗಿಸಿಕೊಳ್ಳುವಿಕೆಗೆ ಹಾಗೂ ಸಹಕಾರಕ್ಕೆ ಅನುವು ಮಾಡಿಕೊಡುತ್ತದೆ.
ಈ ಉತ್ಕೃಷ್ಟತಾ ಕೇಂದ್ರವು ಕೈಗೊಂಡಿರುವ ಕಾರ್ಯಯೋಜನೆಗಳಲ್ಲಿ, ಮುಂದಿನ ತಲೆಮಾರಿನ ದೂರಸಂಪರ್ಕ ಜಾಲಗಳು ಮತ್ತು ಸಾಮಾಜಿಕ ಪ್ರಸ್ತುತತೆಯ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವಲ್ಲಿ ಅವುಗಳ ಆನ್ವಯಿಕತೆಗಳನ್ನು ಆಧರಿಸಿದ ಸುಧಾರಿತ ರೊಬೊಟಿಕ್ಸ್, ಕೃತಕ ಬುದ್ಧಿಮತ್ತೆ ಹಾಗೂ ಸ್ವಯಂಚಾಲನೆ ಪರಿಹಾರಗಳ ವಿನ್ಯಾಸಗಳನ್ನು ಒಳಗೊಂಡಿವೆ. ನೆಟ್ ವರ್ಕ್ಡ್ ರೊಬೊಟಿಕ್ಸ್ ನಲ್ಲಿ ಸಿಒಇ (ಉತ್ಕಷ್ಟತಾ ಕೇಂದ್ರ) ಸ್ಥಾಪಿಸುವ ಸಂಬಂಧವಾಗಿ ಒಪ್ಪಂದ ಪ್ರಕ್ರಿಯೆಯು 2020ರ ಆಗಸ್ಟ್ ನಲ್ಲಿ ಮುಕ್ತಾಯಗೊಂಡಿತ್ತು. ಆಗಿನಿಂದಲೂ ತಜ್ಞರ ತಂಡವು ಈ ಕೇಂದ್ರದ ಸ್ಥಾಪನೆಯ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿತ್ತು.
ಈಗ ಒಪ್ಪಂದದ ಅನ್ವಯ ನೋಕಿಯಾವು ಈ ಉತ್ಕಷ್ಟತಾ ಕೇಂದ್ರಕ್ಕೆ (ಸಿಒಇ) ಸತತ 3 ವರ್ಷಗಳ ಅವಧಿಯವರೆಗೆ ಅನುದಾನ ಒದಗಿಸಲಿದೆ.
“ತಾಂತ್ರಿಕ ಸಮಾಗಮಗಳ ಕಾಲಘಟ್ಟದಲ್ಲಿ ಭಾರತವು ಜಾಗತಿಕ ನಾವೀನ್ಯತೆಯನ್ನು ನಿರ್ದೇಶಿಸಬೇಕೆಂಬುದು ನಮ್ಮ ಬಯಕೆಯಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ವಿಸ್ತರಿತ ವಾಸ್ತವತೆ (XR- ಎಕ್ಸ್ ಟೆಂಡೆಡ್ ರಿಯಾಲಿಟಿ) ಮತ್ತು ಡಿಜಿಟಲ್-ಭೌತಿಕ ಬೆಸುಗೆಯು ಹಿಂದೆಂದೂ ಕಂಡಿರದ ರೀತಿಯಲ್ಲಿ ರೂಪಿಸಲು, ಸಹಭಾಗಿತ್ವ ಸಾಧಿಸಲು ಹಾಗೂ ಸಂವಹನ ನಡೆಸುವುದನ್ನು ಸಾಧ್ಯವಾಗಿಸಲಿದೆ. ಭಾರತದಲ್ಲಿ ಅವಕಾಶಕ್ಕಾಗಿ ಕಾಯುತ್ತಿರುವ ಬೌದ್ಧಿಕ ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕತೆ ಗಮನಾರ್ಹ ಪ್ರಮಾಣದಲ್ಲಿದೆ. ಐ.ಐ.ಎಸ್ ಸಿ.ಯಂತಹ ಪ್ರತಿಷ್ಠಿತ ಸಂಸ್ಥೆಯೊಂದಿಗಿನ ನಮ್ಮ ಒಪ್ಪಂದವು ಉದ್ಯಮ ಹಾಗೂ ಸಮಾಜಕ್ಕೆ ಕುತೂಹಲಕರ ಸಾಧ್ಯತೆಗಳನ್ನು ಉಂಟುಮಾಡಲಿದೆ ಎನ್ನುತ್ತಾರೆ ನೋಕಿಯಾದ ಮುಖ್ಯ ಕಾರ್ಯತಂತ್ರ ಹಾಗೂ ತಾಂತ್ರಿಕ ಅಧಿಕಾರಿ ನಿಶಾಂತ್ ಬಾತ್ರ.
“5ಜಿ ಮತ್ತು 6ಜಿಯಂತಹ ಮುಂಬರುವ ತಲೆಮಾರಿನ ಸಂವಹನಗಳು ಭಾರತದ ಆರ್ಥಿಕತೆಯ ಬೆಳವಣಿಗೆಗೆ ಭಾರೀ ದೊಡ್ಡಮಟ್ಟದ ಕೊಡುಗೆ ನೀಡಲಿವೆ. ಜಾಗತಿಕ ಗುಣಮಟ್ಟದ ನೋಕಿಯಾ ಕಂಪನಿ ಜೊತೆ ನಾವು ಮಾಡಿಕೊಂಡಿರುವ ಸಹಭಾಗಿತ್ವದಿಂದಾಗಿ ಸಮಾಜದ ಉಪಯೋಗಕ್ಕಾಗಿ ಉನ್ನತ ತಂತ್ರಜ್ಞಾನದ ಸಂಶೋಧನೆಯ ಹೊಸ ಮಜಲುಗಳನ್ನು ಶೋಧಿಸಲು ಹಾಗೂ ವಿದ್ಯಾರ್ಥಿಗಳಿಗೆ ಮುಂಬರುವ ದಶಕಗಳಲ್ಲಿ ತಾಂತ್ರಿಕ ನಾಯಕರಾಗುವುದಕ್ಕೆ ಪೂರಕವಾಗಿ ಆಧುನಿಕ ತರಬೇತಿಯನ್ನು ಒದಗಿಸಲು ಅನುವು ಮಾಡಿಕೊಡಲಿದೆ” ಎನ್ನುವುದು ಐ.ಐ.ಎಸ್ ಸಿ. ನಿರ್ದೇಶಕ ಪ್ರೊ.ರಂಗರಾಜನ್ ಅವರ ಅಭಿಪ್ರಾಯ.
ವರ್ಷ 2000ರ ಆರಂಭದಲ್ಲಿ, ಭಾರತದಲ್ಲಿ 2ಜಿ/ಜಿಎಸ್ಎಂ ತಾಂತ್ರಿಕತೆಯನ್ನು, 2011ರಲ್ಲಿ ಅಧಿಕ ಗುಣಮಟ್ಟದ 3 ಜಿ ಸೇವೆಗಳನ್ನು, 2012ರಲ್ಲಿ 4 ಜಿ/ಎಲ್.ಟಿ.ಇ. ತಾಂತ್ರಿಕತೆಯನ್ನು ಹಾಗೂ ಈಗ ದೇಶವನ್ನು 5ಜಿ ತಾಂತ್ರಿಕತೆಗೆ ಸನ್ನದ್ಧಗೊಳಿಸುವುದರಲ್ಲಿ ನೋಕಿಯಾ ವಹಿಸಿರುವ ಪಾತ್ರ ಗಮನಾರ್ಹವಾಗಿದೆ.
ಭಾರತದಲ್ಲಿ ನೋಕಿಯಾದ ಸಕ್ರಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿ.ಎಸ್.ಆರ್.) ಕಾರ್ಯಕ್ರಮಗಳು ಕಂಪನಿಯ ಪ್ರಮುಖ ವಿಷಯಗಳಾದ ಕಾರ್ಪೊರೇಟ್ ಸಮುದಾಯ ಹೂಡಿಕೆ, ಸೆಕ್ಷನ್ 135 ಹಾಗೂ ಕಂಪನಿಗಳ ಕಾಯಿದೆ 2013ರ ಷೆಡ್ಯೂಲ್ VII ಮತ್ತು ಕಂಪನಿಗಳ (ಸಿಎಸ್ಆರ್ ನೀತಿ) ನಿಯಮಾವಳಿಗಳು 2014, ಇವಕ್ಕೆ ಅನುಗುಣವಾಗಿವೆ. ನೋಕಿಯಾವು ಭಾರತದಲ್ಲಿ ಸಿಎಸ್ಆರ್ ಕಾರ್ಯಕ್ರಮಗಳಿಗಾಗಿ ಒಟ್ಟಾರೆ ರೂ 150 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ.
ಆಕರ ಮೂಲಗಳು:
ನೋಕಿಯಾ ಬಗ್ಗೆ:
ಪ್ರಪಂಚದಲ್ಲಿರುವ ಎಲ್ಲರೂ ಒಟ್ಟಾಗಿ ರಚನಾತ್ಮಕ ಕಾರ್ಯದಲ್ಲಿ ಪಾಲ್ಗೊಳ್ಳಲು ಪೂರಕವಾದ ತಂತ್ರಜ್ಞಾನವನ್ನು ನಾವು ರೂಪಿಸುತ್ತೇವೆ.
ಮಹತ್ವದ ನೆಟ್ ವರ್ಕ್ ಗಳಿಗಾಗಿ ವಿಶ್ವಸಾರ್ಹ ಪಾಲುದಾರರಾಗಿ ಮೊಬೈಲ್, ಸ್ಥಿರ ಹಾಗೂ ಕ್ಲೌಡ್ ಜಾಲ ವಲಯಗಳ ನಾವೀನ್ಯತೆ ಮತ್ತು ತಾಂತ್ರಿಕ ನಾಯಕತ್ವಕ್ಕೆ ನಾವು ಬದ್ಧರಾಗಿದ್ದೇವೆ. ಪ್ರಶಸ್ತಿ ಪುರಸ್ಕೃತ ನೋಕಿಯಾ ಬೆಲ್ ಲ್ಯಾಬ್ಸ್ ನೇತೃತ್ವದಲ್ಲಿ ಬೌದ್ಧಿಕ ಸ್ವತ್ತು ಹಾಗೂ ದೀರ್ಘಾವಧಿ ಸಂಶೋಧನೆಯಲ್ಲಿ ನಾವು ಮೌಲ್ಯವನ್ನು ಸೃಷ್ಟಿಸುತ್ತೇವೆ.
ಶ್ರೇಷ್ಠ ಮಟ್ಟದ ವಿಶ್ವಾಸಾರ್ಹತೆ ಮತ್ತು ಸುರಕ್ಷತೆಗೆ ಒತ್ತುಕೊಟ್ಟು ಹೆಚ್ಚು ಉತ್ಪಾದಕವಾದ, ಸುಸ್ಥಿರವಾದ ಹಾಗೂ ಎಲ್ಲರನ್ನೂ ಒಳಗೊಳ್ಳುವ ಜಗತ್ತಿಗೆ ಬೇಕಾದ ಸಾಮರ್ಥ್ಯಗಳನ್ನು ಬೆಳೆಸಲು ನಾವು ಕೈಜೋಡಿಸುತ್ತೇವೆ.
ಮಾಧ್ಯಮ ಸಂಪರ್ಕ: ಸಂವಹನಗಳು
ನೋಕಿಯಾ
ಇಮೇಲ್: press.services@nokia.com
ಐ.ಐ.ಎಸ್ ಸಿ. ಬಗ್ಗೆ:
ಉದ್ಯಮಿ ಜಮ್ ಷೇಟ್ ಜಿ ನಸರ್ ವಾಂಜಿ ಟಾಟಾ, ಮೈಸೂರು ರಾಜಸಂಸ್ಥಾನ ಮತ್ತು ಭಾರತ ಸರ್ಕಾರಗಳ ದೂರದರ್ಶಿತ್ವದ ಪಾಲುದಾರಿಕೆಯಲ್ಲಿ ಭಾರತ ವಿಜ್ಞಾನ ಸಂಸ್ಥೆಯು (ಐ.ಐ.ಎಸ್ ಸಿ.ಯಲ್ಲಿ) 1909ರಲ್ಲಿ ಸ್ಥಾಪನೆಗೊಂಡಿತು. ಕಳೆದ 113 ವರ್ಷಗಳಲ್ಲಿ ಐ.ಐ.ಎಸ್.ಸಿ.ಯು ಆಧುನಿಕ ವೈಜ್ಞಾನಿಕ ಹಾಗೂ ತಾಂತ್ರಿಕ ಸಂಶೋಧನೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಭಾರತದ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ಭಾರತದ ಭೌತಿಕ ಹಾಗೂ ಕೈಗಾರಿಕಾ ಅಭ್ಯುದಯಕ್ಕೆ ಕಾರಣವಾಗುವಂತಹ ಉನ್ನತ ಬೋಧನೆಗೆ ಹಾಗೂ ಸ್ವೋಪಜ್ಞ ಪರಿವೀಕ್ಷಣೆಗಳಿಗೆ ಎಲ್ಲಾ ಜ್ಞಾನಶಾಖೆಗಳಲ್ಲಿ ಅವಕಾಶ ಕಲ್ಪಿಸುವುದಕ್ಕೆ” ಸಂಸ್ಥೆಯ ಕಟಿಬದ್ಧವಾಗಿದೆ. ಭಾರತ ಸರ್ಕಾರವು 2018ರಲ್ಲಿ ಐ.ಐ.ಎಸ್ ಸಿ.ಯನ್ನು “ಇನ್ಸ್ ಟಿಟ್ಯೂಷ್ ಆಫ್ ಎಮೆನೆನ್ಸ್” ಎಂದು ಆಯ್ಕೆಮಾಡಿತು. ಸಂಸ್ಥೆಯು ನಿರಂತರವಾಗಿ, ಜಾಗತಿಕ ವಿಶ್ವವಿದ್ಯಾಲಯಗಳ ರಾಂಕಿಂಗ್ ನಲ್ಲಿ ಭಾರತದ ಅಗ್ರಮಾನ್ಯ ಸಂಸ್ಥೆಗಳಲ್ಲಿ ಒಂದು ಎಂಬ ಸ್ಥಾನಮಾನಕ್ಕೆ ಪಾತ್ರವಾಗುತ್ತಿದೆ.
ಸಂಪರ್ಕಿಸಿ:
ಸಾರ್ವಜನಿಕ ಸಂಪರ್ಕ ಕಚೇರಿ (pro@iisc.ac.in); ಸಂವಹನ ಕಚೇರಿ (news@iisc.ac.in)