ವಾಲ್ ಮಾರ್ಟ್ ನಿಂದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ತಂತ್ರಜ್ಞಾನ ಉತ್ಕೃಷ್ಟತಾ ಕೇಂದ್ರ ಆರಂಭ


19 ಏಪ್ರಿಲ್ 2024

ವಾಲ್ ಮಾರ್ಟ್ ಗ್ಲೋಬಲ್ ಟೆಕ್ (ಡಬ್ಲ್ಯು ಜಿ ಟಿ) ಕಂಪನಿಯು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಹಭಾಗಿತ್ವದಲ್ಲಿ ವಾಲ್ ಮಾರ್ಟ್ ತಂತ್ರಜ್ಞಾನ ಉತ್ಕೃಷ್ಟತಾ ಕೇಂದ್ರ ಆರಂಭಿಸಿದೆ. ಭಾರತದಲ್ಲಿ ಸಂಶೋಧನಾ ಕಾರ್ಯ ಪರಿಸರ ಸದೃಢಗೊಳಿಸುವ ಉದ್ದೇಶವನ್ನು ಇದು ಹೊಂದಿದೆ. ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಉತ್ಕೃಷ್ಟ ಸಂಶೋಧನೆ ಮುನ್ನಡೆಸಲು ಹಾಗೂ ಭವಿಷ್ಯದ ಬೆಳವಣಿಗೆ ಅವಕಾಶಗಳೊಂದಿಗೆ ಪ್ರತಿಭೆಗಳನ್ನು ಸಬಲೀಕರಣಗೊಳಿಸಲು ಈ ಕೇಂದ್ರವು ಗಮನ ಕೇಂದ್ರೀಕರಿಸಲಿದೆ. ಈ ಮುನ್ನ, ವಾಲ್ ಮಾರ್ಟ್ ಸಂಸ್ಥೆಯು ಐಐಟಿ ಮದ್ರಾಸ್‌ನಲ್ಲಿ 2024ರ ಫೆಬ್ರುವರಿಯಲ್ಲಿ ತಂತ್ರಜ್ಞಾನ ಉತ್ಕೃಷ್ಟತಾ ಕೇಂದ್ರವನ್ನು ಉದ್ಘಾಟನೆಗೊಳಿಸಿತ್ತು. ಶೈಕ್ಷಣಿಕ ವಲಯದೊಂದಿಗೆ ವಾಲ್ ಮಾರ್ಟ್ ಸಹಭಾಗಿತ್ವವು ಸಮುದಾಯಗಳಿಗೆ ಸೇವೆ ಸಲ್ಲಿಸುವ ಹಾಗೂ ಅವರ ಬದುಕನ್ನು ಉನ್ನತಿಗೇರಿಸಲು ಸಹಕಾರಿಯಾಗಬೇಕೆಂಬ ಕಂಪನಿಯ ಬದ್ಧತೆಯನ್ನು ಇನ್ನಷ್ಟು ಬಲಯುತಗೊಳಿಸುತ್ತದೆ.

ಈ ಕೇಂದ್ರವು ಐಐಎಸ್‌ಸಿ ಕಂಪ್ಯೂಟರ್ ಸೈನ್ಸ್ ಮತ್ತು ಆಟೋಮೇಷನ್ (ಸಿಎಸ್ಎ) ವಿಭಾಗದಲ್ಲಿ ಕಾರ್ಯನಿರ್ವಹಿಸಲಿದೆ. ಕೃತಕ ಬುದ್ಧಿಮತ್ತೆ/ಮಷೀನ್ ಲರ್ನಿಂಗ್, ಕಂಪ್ಯೂಟರ್ ಸಿಸ್ಟಮ್‌ಗಳು ಮತ್ತು ಥಿಯರಿಟಿಕಲ್ ಕಂಪ್ಯೂಟರ್ ಸೈನ್ಸ್ ಗೆ ಸಂಬಂಧಿಸಿದ ಮೂಲಭೂತ ಸಮಸ್ಯೆಗಳನ್ನು ಪರಿಹರಿಸಲು ಇದು ಒತ್ತು ನೀಡಲಿದೆ. ಈ ಉಪಕ್ರಮವು ಹೆಚ್ಚಿನ ಕೌಶಲ್ಯವುಳ್ಳ ಪ್ರೀ- ಡಾಕ್ಟೋರಲ್, ಪಿಎಚ್. ಡಿ. ಹಾಗೂ ಪೋಸ್ಟ್- ಡಾಕ್ಟೋರಲ್ ಅಧ್ಯಯನಾರ್ಥಿಗಳಿಗೆ ಫೆಲೋಷಿಪ್ ಗಳನ್ನು ಕೊಡಮಾಡಲಿದೆ. ಇದರ ಜೊತೆಗೆ, ಭಾರತದಲ್ಲಿ ಎರಡನೇ ಮತ್ತು ಮೂರನೇ ಸ್ತರದ ಸಂಸ್ಥೆಗಳಲ್ಲಿ ಇಂಟರ್ನ್ ಷಿಪ್ ಗಳು, ಕಾರ್ಯಾಗಾರಗಳು ಮತ್ತು ಪ್ರೀ-ಡಾಕ್ಟೋರಲ್ ಅವಕಾಶಗಳ ಮೂಲಕ ಪ್ರತಿಭಾವಂತರ ಹೊಸ ತಲೆಮಾರನ್ನು ಪೋಷಿಸಲು ಆದ್ಯತೆ ನೀಡಲಿದೆ.‌ ಮುಂಚೂಣಿ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳೊಂದಿಗೆ ಸಹಭಾಗಿತ್ವಗಳನ್ನು ಉತ್ತೇಜಿಸಿ ಜಾಗತಿಕ ಸಂಶೋಧನಾ ಸಮುದಾಯಕ್ಕೆ ಕೊಡುಗೆ ನೀಡಲು ನೆರವು ನೀಡಲಿದೆ.

ವಾಲ್ ಮಾರ್ಟ್ ಗ್ಲೋಬಲ್ ಟೆಕ್ ಪ್ಲ್ಯಾಟ್ ಫಾರ್ಮ್ಸ್ ಕಾರ್ಯನಿರ್ವಾಹಕ ಉಪಾಧ್ಯಕ್ಷ (ಇವಿಪಿ) ಹರಿ ವಾಸುದೇವ್, ಕಂಪನಿಯ ಹಿರಿಯ ಉಪಾಧ್ಯಕ್ಷ (ಎಸ್ ವಿ ಪಿ) ಮತ್ತು ಕಂಟ್ರಿ ಹೆಡ್ ಬಾಲು, ಚತುರ್ವೇದುಲ, ಐಐಎಸ್‌ಸಿ ನಿರ್ದೇಶಕ ಜಿ ರಂಗರಾಜನ್, ಐಐಎಸ್‌ಸಿ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ವಿಜ್ಞಾನಗಳ (ಇಇಸಿಎಸ್) ನಿಕಾಯ ಮುಖ್ಯಸ್ಥ ರಾಜೇಶ್ ಸುಂದರೇಶನ್ ಅವರ ಸಮ್ಮುಖದಲ್ಲಿ ಕೇಂದ್ರದ ಉದ್ಘಾಟನೆ ನೆರವೇರಿತು. ವಾಲ್ ಮಾರ್ಟ್ ಪ್ರಮುಖರು ಹಾಗೂ ಸಿಎಸ್‌ಎ ವಿಭಾಗ ಮುಖ್ಯಸ್ಥ ವಿನೋದ್ ಗಣಪತಿಯವರ ನೇತೃತ್ವದ ಬೋಧಕರ ವೃಂದದವರು ಉಪಸ್ಥಿತರಿದ್ದರು.

ವಾಲ್ ಮಾರ್ಟ್ ಗ್ಲೋಬಲ್ ಟೆಕ್ ಪ್ಲ್ಯಾಟ್ ಫಾರ್ಮ್ಸ್ ಇವಿಪಿ ಹರಿವಾಸುದೇವ್ ಅವರು ಈ ಸಂದರ್ಭದಲ್ಲಿ ಮಾತನಾಡಿ, “ವಾಲ್ ಮಾರ್ಟ್ ತಂತ್ರಜ್ಞಾನ ಉತ್ಕೃಷ್ಟತಾ ಕೇಂದ್ರದ ಉದ್ಘಾಟನೆಗೆ ಸಾಕ್ಷಿಯಾಗುತ್ತಿರುವುದು ನನಗೆ ನಿಜವಾಗಿಯೂ ಹೆಮ್ಮೆಯುಂಟು ಮಾಡಿದೆ. ಸಂಶೋಧನಾ ಕ್ಷೇತ್ರಕ್ಕೆ ಇದು ನೀಡುವ ಕೊಡುಗೆಗಳ ಬಗ್ಗೆ ನನಗೆ ಕುತೂಹಲ ಮೂಡಿಸಿದೆ. ಜನನಿರ್ದೇಶಿತ ತಾಂತ್ರಿಕ ಬಲದ ಸಂಸ್ಥೆಯಾಗಿ ನಾವು ಜನರಿಗೆ ಹಾಗೂ ಸಮುದಾಯಗಳಿಗೆ ಸುಧಾರಿತ ಬದುಕು ರೂಪಿಸುವ ದಿಸೆಯಲ್ಲಿ ತಂತ್ರಜ್ಞಾನದ ಶಕ್ತಿಯಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಶೈಕ್ಷಣಿಕ ವಲಯದೊಂದಿಗಿನ ನಮ್ಮ ಸಹಭಾಗಿತ್ವವು ಈ ದೂರದೃಷ್ಟಿಯನ್ನು ಸಾಕಾರಗೊಳಿಸಲು ನೆರವು ನೀಡಲಿದೆ. ಆ ನಿಟ್ಟಿನಲ್ಲಿ, ಐಐಎಸ್‌ಸಿ ಜತೆಗಿನ ಸಹಭಾಗಿತ್ವವು ಈ ಪಯಣದಲ್ಲಿ ಮತ್ತೊಂದು ಮೈಲು ಗಲ್ಲು” ಎಂದು ಅಭಿಪ್ರಾಯಪಟ್ಟರು.

ಬಾಲು ಚತುರ್ವೇದುಲ ಅವರು ಮಾತನಾಡಿ, “ಸಮುದಾಯಗಳಿಗೆ ಸೇವೆ ಸಲ್ಲಿಸುವುದು ಯಾವಾಗಲೂ ವಾಲ್ ಮಾರ್ಟ್ ನ ಪ್ರಧಾನ ಮೌಲ್ಯವಾಗಿದೆ. ಈ ದಿಸೆಯಲ್ಲಿ ಐಐಎಸ್‌ಸಿ ಜೊತೆಗಿನ ಸಹಭಾಗಿತ್ವವು ಮತ್ತೊಂದು ಹೆಜ್ಜೆಯಾಗಿದೆ. ವಾಲ್ ಮಾರ್ಟ್ ತಂತ್ರಜ್ಞಾನ ಉತ್ಕೃಷ್ಟತಾ ಕೇಂದ್ರವು ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಸಂಶೋಧನಾ ಸಮುದಾಯಕ್ಕೆ ಗಮನಾರ್ಹ ಕೊಡುಗೆ ನೀಡಲು ಸಜ್ಜಾಗಿದೆ. ಈ ಕೇಂದ್ರದ ದೂರದೃಷ್ಟಿಯು ಸಾಕಾರಗೊಳ್ಳುವುದನ್ನು ಹಾಗೂ ಅದು ಉಂಟುಮಾಡಲಿರುವ ಅವಕಾಶಗಳನ್ನು ನೋಡಲು ಉತ್ಸುಕನಾಗಿದ್ದೇನೆ” ಎಂದರು.

“ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿದ ಮಹತ್ವದ ವಲಯಗಳಲ್ಲಿ ಸಂಶೋಧನೆಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ವಾಲ್ ಮಾರ್ಟ್ ಗ್ಲೋಬಲ್ ಟೆಕ್ ನೀಡುತ್ತಿರುವ ಬೆಂಬಲಕ್ಕೆ ನಾವು ಆಭಾರಿಯಾಗಿರುತ್ತೇವೆ’ ಎಂದು ಐಐಎಸ್‌ಸಿ ನಿರ್ದೇಶಕ ಜಿ ರಂಗರಾಜನ್ ಹೇಳಿದರು. “ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು, ಸಂಶೋಧನಾ ಮಾರ್ಗದರ್ಶನ ಮತ್ತು ಸಹಭಾಗಿತ್ವಗಳಿಗೆ ಗಮನ ಕೇಂದ್ರೀಕರಿಸುವ ಮೂಲಕ ಐಐಎಸ್‌ಸಿ ಯಲ್ಲಿರುವ ವಾಲ್ ಮಾರ್ಟ್ ತಂತ್ರಜ್ಞಾನ ಉತ್ಕೃಷ್ಟತಾ ಕೇಂದ್ರವು ಮುಂಬರುವ ದಿನಗಳಲ್ಲಿ ಮುಂಚೂಣಿ ಸಂಶೋಧನಾ ನೆಲೆಯಾಗಲಿದೆ” ಎಂದೂ ಅವರು ಅಭಿಪ್ರಾಯ ಪಟ್ಟರು.

“ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿದಂತೆ ಅತ್ಯಾಧುನಿಕ ಸಂಶೋಧನಾ ಕೊಡುಗೆಗಳನ್ನು ನೀಡಿದ ಇತಿಹಾಸವನ್ನು ಐಐಎಸ್‌ಸಿ ಹೊಂದಿದೆ. ವಾಲ್ ಮಾರ್ಟ್ ಗ್ಲೋಬಲ್ ಟೆಕ್ ಸಹಭಾಗಿತ್ವದೊಂದಿಗೆ ಅಲ್ಗಾರಿದಂ, ಮಷೀನ್ ಲರ್ನಿಂಗ್ ಮತ್ತು ಎಡ್ಜ್- ಕಂಪ್ಯೂಟಿಂಗ್ ಕ್ಷೇತ್ರಗಳಲ್ಲಿ ಪರಿವರ್ತಕ ಸಂಶೋಧನೆಗಳನ್ನು ಕೈಗೊಂಡು ಈ ತಾಂತ್ರಿಕ ಪರಂಪರೆಯ ಸದುಪಯೋಗ ಪಡೆಯುವ ಉದ್ದೇಶ ಹೊಂದಿದ್ದೇವೆ” ಎಂದು ಐಐಎಸ್‌ಸಿ ಇಇಸಿಎಸ್ ನಿಕಾಯ ಮುಖ್ಯಸ್ಥ ರಾಜೇಶ್ ಸುಂದರೇಶನ್ ಹೇಳಿದರು. “ಈ ಸಹಭಾಗಿತ್ವದಿಂದ ಅನೇಕ ಕುತೂಹಲಕಾರಿ ಸಂಶೋಧನಾ ಹಾಗೂ ನಾವೀನ್ಯತಾ ಫಲಶ್ರುತಿಗಳನ್ನು ನಿರೀಕ್ಷಿಸುತ್ತೇವೆ” ಎಂದೂ ಹೇಳಿದರು.

ವಾಲ್ ಮಾರ್ಟ್ ಗ್ಲೋಬಲ್ ಟೆಕ್ ಮಾಧ್ಯಮ ಸಂಪರ್ಕ:
ಸುನೈನಾ ಚೌಧರಿ|
sunaina.chowdhry@walmart.com|
7259811787

ಐಏಎಸ್‌ಸಿ ಮಾಧ್ಯಮ ಸಂಪರ್ಕ:
ಸಂವಹನಗಳ ಕಚೇರಿ|
news@iisc.ac.in

ವಾಲ್ ಮಾರ್ಟ್ ಬಗ್ಗೆ:

ವಾಲ್ ಮಾರ್ಟ್ ಇಂಕ್ (ಎನ್ ವೈ ಎಸ್ ಇ: ಡಬ್ಲ್ಯು ಎಂ ಟಿ) ಜನ- ನಿರ್ದೇಶಿತ ತಾಂತ್ರಿಕ ಬಲದ ಆಮ್ನಿ ಚಾನಲ್ ರೀಟೇಲರ್ ಆಗಿದ್ದು, ಜನರಿಗೆ ಹಣ ಉಳಿತಾಯ ಮಾಡಲು ಹಾಗೂ ಬದುಕಿನ ಗುಣಮಟ್ಟ ಹೆಚ್ಚಿಸಲು ಸಹಕಾರಿಯಾಗಿದೆ. ‘ಎನಿಟೈಮ್ ಅಂಡ್ ಎನಿವೇರ್’ ಪರಿಕಲ್ಪನೆಯೊಂದಿಗೆ ಮಳಿಗೆಗಳ ಮೂಲಕ, ಆನ್ಲೈನ್ ಮೂಲಕ ಮತ್ತು ಮೊಬೈಲ್ ಸಾಧನಗಳ ಮೂಲಕ ಕಾರ್ಯಾಚರಿಸುತ್ತಿದೆ. ಪ್ರತಿವಾರವೂ ಸುಮಾರು 255 ದಶಲಕ್ಷ ಗ್ರಾಹಕರು ಹಾಗೂ ಸದಸ್ಯರು 19 ದೇಶಗಳಲ್ಲಿರುವ 10,500ಕ್ಕೂ ಹೆಚ್ಚು ಮಳಿಗೆಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿರುವ ಇ-ಕಾಮರ್ಸ್ ವೆಬ್ಸೈಟ್ ಗಳಿಗೆ ಭೇಟಿಕೊಡುತ್ತಿದ್ದಾರೆ. ಹಣಕಾಸು ವರ್ಷ 2024ರಲ್ಲಿ 648 ಬಿಲಿಯನ್ ಡಾಲರ್ ಆದಾಯ ಗಳಿಸಿರುವ ವಾಲ್ ಮಾರ್ಟ್ ಪ್ರಪಂಚದಾದ್ಯಂತ ಸುಮಾರು 2.1 ದಶಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಸುಸ್ಥಿರತೆ, ಕಾರ್ಪೊರೇಟ್ ಸಮಾಜ ಸೇವೆ ಮತ್ತು ಉದ್ಯೋಗ ಅವಕಾಶಗಳ ಸೃಷ್ಟಿಯಲ್ಲಿ ವಾಲ್ ಮಾರ್ಟ್ ಮುಂಚೂಣಿಯಲ್ಲಿ ಮುಂದುವರಿದಿದೆ. ವಾಲ್ ಮಾರ್ಟ್ ಬಗ್ಗೆ ಇನ್ನಷ್ಟು ಹೆಚ್ಚುವರಿ ವಿಷಯ ಬೇಕಿದ್ದರೆ walmart.comಗೆ ಭೇಟಿಕೊಟ್ಟು ನೋಡ ಬಹುದು. ಫೇಸ್ಬುಕ್ ನಲ್ಲಿ facebook.com/walmart, ‘ಎಕ್ಸ್ ‘ನಲ್ಲಿ (ಮುಂಚಿನ ಟ್ವಿಟ್ಟರ್) twitter.com/walmart, ಹಾಗೂ ಲಿಂಕ್ಡ್ ಇನ್ ನಲ್ಲಿ linkedin.com/company/walmart ಇಲ್ಲಿಯೂ ಕಂಪನಿ ಕುರಿತ ಮಾಹಿತಿ ಲಭ್ಯವಿರುತ್ತದೆ.

ವಾಲ್ ಮಾರ್ಟ್ ಗ್ಲೋಬಲ್ ಟೆಕ್ ಬಗ್ಗೆ:

ವಾಲ್ ಮಾರ್ಟ್ ಗ್ಲೋಬಲ್ ಟೆಕ್ ಕಂಪನಿಯು ರಿಟೇಲ್ ವ್ಯವಹಾರವನ್ನು ಪರಿವರ್ತಿಸುವ ಒಳನೋಟದೊಂದಿಗೆ ಪ್ರೇರಣೆ ಪಡೆದು ಅತ್ಯಾಧುನಿಕ ತಂತ್ರಜ್ಞಾನ ಆಧರಿಸಿ ಕಾರ್ಯಾಚರಿಸುತ್ತಿದೆ. ಜನ-ನಿರ್ದೇಶಿತ ಹಾಗೂ ತಂತ್ರಜ್ಞಾನ ಚಾಲಿತ ಸಂಸ್ಥೆಯಾಗಿ ನಾವು ನಾವೀನ್ಯತೆಗಳನ್ನು ಮುನ್ನಡೆಸಿ ಜಾಗತಿಕವಾಗಿ ಕೋಟ್ಯಂತರ ಜನರ ಬದುಕನ್ನು ಪ್ರಭಾವಿಸುತ್ತೇವೆ. ಜಗತ್ತಿನ ಮುಂಚೂಣಿ ರಿಟೇಲರ್ ಕಂಪನಿಯಾಗಿರುವ ನಮಗೆ ನಮ್ಮ ಅಸೋಸಿಯೇಟ್ ಗಳು ಒದಗಿಸುವ ನಾವೀನ್ಯತಾ ಪರಿಹಾರಗಳ ಬಲದಿಂದಾಗಿ ಡಿಜಿಟಲ್ ಪರಿಹಾರಗಳನ್ನು ಆಧರಿಸಿದ ಕ್ಷಮತೆ ಹಾಗೂ ಭವಿಷ್ಯ-ಸನ್ನದ್ಧತೆಯಿಂದ ಕೂಡಿದ ಸಂಸ್ಥೆಯಾಗಿದೆ. ವಾಲ್ ಮಾರ್ಟ್ ಗ್ಲೋಬಲ್ ಟೆಕ್ ಬಗೆಗೆ ಹೆಚ್ಚುವರಿ ಮಾಹಿತಿಯನ್ನು ನಮ್ಮ ವೆಬ್ಸೈಟ್ ಮತ್ತು ಲಿಂಕ್ಡ್ ಇನ್ ಗೆ ಭೇಟಿ ನೀಡುವ ಮೂಲಕ ಪಡೆಯಬಹುದು.

ಐಐಎಸ್‌ಸಿ ಬಗ್ಗೆ:

ಉದ್ಯಮಿ ಜಮ್ ಷೇಟ್ ಜಿ ನಸರ್ ವಾಂಜಿ ಟಾಟಾ, ಮೈಸೂರು ರಾಜಸಂಸ್ಥಾನ ಮತ್ತು ಭಾರತ ಸರ್ಕಾರಗಳ ದೂರದರ್ಶಿತ್ವದ ಪಾಲುದಾರಿಕೆಯಲ್ಲಿ ಭಾರತ ವಿಜ್ಞಾನ ಸಂಸ್ಥೆಯು (ಐ.ಐ.ಎಸ್ ಸಿ.ಯಲ್ಲಿ) 1909ರಲ್ಲಿ ಸ್ಥಾಪನೆಗೊಂಡಿತು. ಕಳೆದ 115 ವರ್ಷಗಳಲ್ಲಿ ಐ.ಐ.ಎಸ್.ಸಿ.ಯು ಆಧುನಿಕ ವೈಜ್ಞಾನಿಕ ಹಾಗೂ ತಾಂತ್ರಿಕ ಸಂಶೋಧನೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಭಾರತದ ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ಭಾರತದ ಭೌತಿಕ ಹಾಗೂ ಕೈಗಾರಿಕಾ ಅಭ್ಯುದಯಕ್ಕೆ ಕಾರಣವಾಗುವಂತಹ ಉನ್ನತ ಬೋಧನೆಗೆ ಹಾಗೂ ಸ್ವೋಪಜ್ಞ ಪರಿವೀಕ್ಷಣೆಗಳಿಗೆ ಎಲ್ಲಾ ಜ್ಞಾನಶಾಖೆಗಳಲ್ಲಿ ಅವಕಾಶ ಕಲ್ಪಿಸುವುದಕ್ಕೆ ಸಂಸ್ಥೆಯ ಕಟಿಬದ್ಧವಾಗಿದೆ. ಭಾರತ ಸರ್ಕಾರವು 2018ರಲ್ಲಿ ಐ.ಐ.ಎಸ್ ಸಿ.ಯನ್ನು “ಇನ್ಸ್ ಟಿಟ್ಯೂಟ್ ಆಫ್ ಎಮೆನೆನ್ಸ್” ಎಂದು ಆಯ್ಕೆಮಾಡಿತು. ಸಂಸ್ಥೆಯು ನಿರಂತರವಾಗಿ, ಜಾಗತಿಕ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್ ನಲ್ಲಿ ಭಾರತದ ಅಗ್ರಮಾನ್ಯ ಸಂಸ್ಥೆಗಳಲ್ಲಿ ಒಂದು ಎಂಬ ಸ್ಥಾನಮಾನಕ್ಕೆ ಪಾತ್ರವಾಗುತ್ತಿದೆ.
—000—