ಐಐಎಸ್‌ಸಿ ಮತ್ತು ಮಿನ್ವಾಕ್ಸ್ ತಂಡವು ಅಭಿವೃದ್ಧಿಪಡಿಸಿದ “ಬೆಚ್ಚಗಿನ” ಕೋವಿಡ್ -19 ಲಸಿಕೆಯು ಇಲಿಗಳು ಮತ್ತು ಕಿರುಕಡಿಗಗಳಲ್ಲಿ (ಒಂದು ವಿಧದ ಇಲಿ) ಬಲವಾದ ಪ್ರತಿರೋಧಕ ಪ್ರತಿಕ್ರಿಯೆ ಮತ್ತು ಸುರಕ್ಷತೆಯನ್ನು ಉಂಟುಮಾಡುತ್ತದೆಂದು ತಿಳಿದುಬಂದಿದೆ. ಇದನ್ನು ಇತ್ತೀಚೆಗೆ ಪ್ರಕಟವಾದ ‘ಎಸಿಎಸ್ ಸಾಂಕ್ರಾಮಿಕ ರೋಗಗಳು’ ಲೇಖನದಲ್ಲಿ ಹೇಳಲಾಗಿದೆ. ಇದಲ್ಲದೆ, ಬಹುಮುಖ್ಯವಾಗಿ ಈ ಲಸಿಕೆಯು ಈಗಿರುವ ಆಲ್ಫಾ, ಬೀಟಾ, ಗಾಮಾ ಮತ್ತು ಡೆಲ್ಟಾ – ಈ ಎಲ್ಲಾ ನಾಲ್ಕು SARS-CoV-2 ರೂಪಾಂತರಗಳನ್ನು ವೈರಾಣುವಿಗೆ ಅಂಟಿಕೊಂಡು ಸೋಂಕನ್ನು ತಡೆಗಟ್ಟುವ ಮೂಲಕ ರೋಗದ ಪರಿಣಾಮವನ್ನು ನಿಷ್ಕ್ರಿಯಗೊಳಿಸುವ ಆಂಟಿಬಾಡಿಗಳನ್ನು ಉಂಟುಮಾಡುತ್ತದೆ .
ಚಂಡೀಗಢದ CSIR-IMTech ಮತ್ತು CSIRO ನಡೆಸುತ್ತಿರುವ ಆಸ್ಟ್ರೇಲಿಯಾದ ರಾಷ್ಟ್ರೀಯ ವಿಜ್ಞಾನ ಸಂಸ್ಥೆಯಾದ ಆಸ್ಟ್ರೇಲಿಯಾ ಸೆಂಟರ್ ಫಾರ್ ಡಿಸೀಸ್ ಪ್ರಿಪೇರ್ಡ್ನೆಸ್ ನ ಸಂಶೋಧಕರು ಲಸಿಕೆಯನ್ನು ಪಡೆದ ಮಾದರಿ ಪ್ರಾಣಿಗಳ(ಸ್ಯಾಂಪಲ್) ಸೀರಂ (ರಕ್ತ) ಮಾದರಿಗಳ ರೂಪಾಂತರಗಳನ್ನು ನಿಷ್ಕ್ರಿಯಗೊಳಿಸುವ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಿದರು.
ರಿಸೆಪ್ಟರ್ ಬೈಂಡಿಂಗ್ ಡೊಮೇನ್ (RBD) ಎಂದು ಕರೆಯಲಾದ SARS-CoV-2 ನ ಮೇಲ್ಮೈ ಸ್ಪೈಕ್ ಗ್ಲೈಕೊಪ್ರೊಟೀನ್‌ನ ಒಂದು ಸ್ವರೂಪವನ್ನು ಜೀನು ಮಟ್ಟದಲ್ಲಿ ಬದಲಾವಣೆಯನ್ನು ರೂಪಿಸಿ ಈ ಲಸಿಕೆಯನ್ನು ರೂಪಿಸಲಾಗಿದೆ. ಇದು ವೈರಾಣು ಪ್ರವೇಶ ಮತ್ತು ಸೋಂಕನ್ನು ಅನುವುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮ ದೇಹದಿಂದ ಉತ್ಪತ್ತಿಯಾಗುವ ಹೆಚ್ಚಿನ ನಿಷ್ಕ್ರಿಯಗೊಳಿಸುವ ಆಂಟಿಬಾಡಿಗಳು RBDಯ ಮೇಲೆ ದಾಳಿಮಾಡುತ್ತವೆ.
ಲಸಿಕೆಯ ತಯಾರಿಯ ಹಿಂದಿನ ವಿಧದಲ್ಲಿ ಲಸಿಕೆಯು ಒಂದು ತಿಂಗಳ ಕಾಲ 37⁰C ತಾಪಮಾನದಲ್ಲಿ ತನ್ನ ಆಕಾರವನ್ನು ಕಳೆದುಕೊಳ್ಳದೆ ಸ್ಥಿರವಾಗಿರುವುದನ್ನು ಮತ್ತು 100⁰C ವರೆಗಿನಷ್ಟು ಹೆಚ್ಚಿನ ತಾಪಮಾನಕ್ಕೆ ಒಡ್ಡಿದರೂ ತಡೆಯೊಡ್ಡುವುದನ್ನು ಆ ಹಿಂದಿನ ವರದಿ ವಿಶದಪಡಿಸಿತ್ತು. ಹಾಗೆಯೆ ಇದು ಹಿಂದಿನ ಲಸಿಕೆಗಳಿಗಿಂತ ಸುಧಾರಿತ ವಿಧಗಳಲ್ಲಿ ಒಂದು. ಶೈತ್ಯಾಗಾರ ಸೌಲಭ್ಯ ಮತ್ತು ಸಾಗಾಣಿಕೆ ದುಬಾರಿಯಾಗಿರುವ ಭಾರತದಂತಹ ದೇಶಗಳಲ್ಲಿ ಇಂತಹ ಲಸಿಕೆಗಳು ವಿಶೇಷವಾಗಿ ಉಪಯುಕ್ತ . ಇದರ ಒಂದು ಸುಧಾರಿತ ರಚನೆಯೊಂದನ್ನು ತ್ವರಿತವಾಗಿ ಕ್ಲಿನಿಕಲ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಉಲ್ಲೇಖ: