ವಿಚಕ್ಷಣ ಘಟಕ

ಭ್ರಷ್ಟಾಚಾರದ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮಗಳ ಅನುಸಾರ ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ವಿಚಕ್ಷಣ (ಜಾಗೃತಿ) ಘಟಕವು ಸಂಸ್ಥೆಗೆ ಸಂಬಂಧಿಸಿದಂತೆ ಮುಖ್ಯ ಪಾತ್ರ ವಹಿಸುತ್ತಿದೆ. ಈ ಘಟಕವು ಕೆಳಗೆ ನಮೂದಿಸಲಾದ ಸದಸ್ಯರ ತಂಡದೊಂದಿಗೆ ಸಂಸ್ಥೆಯ ವಿಚಕ್ಷಣ ವಿಷಯಗಳ ಕುರಿತು ಕಾರ್ಯ ನಿರ್ವಹಿಸುತ್ತದೆ.

೧. ಪ್ರೊ. ದೆಬಸಿಶ್ ಘೋಷ್, ಮುಖ್ಯ ವಿಚಕ್ಷಣ ಅಧಿಕಾರಿ

೨. ಮಿಸೆಸ್. ಅಪರ್ಣ ಕಂಡಿ, ಖರೀದಿ ಮತ್ತು ಮಳಿಗೆಗಳು, ವಿಚಕ್ಷಣ ಅಧಿಕಾರಿ

ಕೇಂದ್ರ ವಿಚಕ್ಷಣ ಆಯೋಗವು ಈ ಕೆಳಗೆ ನಮೂದಿಸಿದ ನಿವೃತ್ತ ಕೇಂದ್ರ ಸರ್ಕಾರಿ ಸಿಬ್ಬಂದಿಯನ್ನು ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು ವಿಚಕ್ಷಣ ಘಟಕದ ಸ್ವತಂತ್ರ ಬಾಹ್ಯ ನಿರ್ವಹಣಾ ಸದಸ್ಯರಾಗಿ ನೇಮಿಸಿದೆ:

  1. ನಜೀಬ್ ಶಾ,  ದೂರವಾಣಿ: 9311706358, ಇಮೇಲ್: najibshah@hotmail.com
  2. ಎಂ ಜೆ ಜೋಸೆಫ್,  ದೂರವಾಣಿ: 9560697979, ಇಮೇಲ್: mohan.joseph@gamil.com

ಉದ್ದೇಶಗಳು:

ಸಂಸ್ಥೆಯ ಒಟ್ಟಾರೆ ಕಾರ್ಯ ನಿರ್ವಹಣೆಯಲ್ಲಿ ಏಕತೆ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುವುದು
ವಿಚಕ್ಷಣ ಘಟಕದ ಮೂಲ ಉದ್ದೇಶ. ಇದು ಭಾರತ ಸರ್ಕಾರದ ಕೇಂದ್ರ ವಿಚಕ್ಷಣ ಆಯೋಗದ ನಿರ್ದೇಶನ ಮತ್ತು ಅಗತ್ಯತೆಗಳಿಗೆ ಅನುಗುಣವಾಗಿ ಸಂಸ್ಥೆಯನ್ನು ಬಲಪಡಿಸುವಲ್ಲಿ ನೆರವಾಗುತ್ತದೆ.

ಕರ್ತವ್ಯ ಮತ್ತು ಜವಾಬ್ದಾರಿಗಳು:

  • ನಿರ್ಬಂಧಿತ ವಿಚಕ್ಷಣೆ ಮತ್ತು ವಿಧಿಬದ್ಧ ವಿಚಕ್ಷಣೆ
  • ಐಐಎಸ್‌ಸಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಖಾತ್ರಿಪಡಿಸುವುದು
  • ಐಐಎಸ್‌ಸಿ ಸಿಬ್ಬಂದಿಗೆ ಸಂಬಂಧಪಟ್ಟ ಎಲ್ಲಾ ವಿಚಕ್ಷಣ ವಿಷಯಗಳಿಗೆ ಸಂಬಂಧಪಟ್ಟಿರುವುದು
  • ಭ್ರಷ್ಟಾಚಾರ, ವಿಚಕ್ಷಣೆ ಹಾಗೂ ಐಐಎಸ್‌ಸಿ ಸಿಬ್ಬಂದಿಗಳ ಹಣಕಾಸು ಅಕ್ರಮಗಳ ಕುರಿತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಂಎಚ್‌ಆರ್‌ಡಿ), ಕೇಂದ್ರೀಯ ವಿಚಕ್ಷನ ಆಯೋಗ (ಸಿವಿಸಿ) ಮತ್ತು ಕೇಂದ್ರ ತನಿಖಾ ಮಂಡಳಿ (ಸಿಬಿಐ) ಸ್ವೀಕರಿಸಿದ ವಿವಿಧ ದೂರುಗಳು.
  • ಎಂಎಚ್‌ಆರ್‌ಡಿಯ ಸಿವಿಒ, ಸಿವಿಸಿ ಮತ್ತು ಸಿಬಿಐನೊಂದಿಗೆ ಸಮನ್ವಯ
  • ಸಿವಿಸಿ ನಿರ್ದೇಶನದ ಅನುಸಾರ ಕಾಲಕಾಲಕ್ಕೆ ವಿಚಕ್ಷಣ ಜಾಗೃತಿ ಸಪ್ತಾಹ ಮತ್ತು ಇತರ ಕಾರ್ಯಕ್ರಮಗಳ ಆಯೋಜನೆ
  • ಸಿವಿಸಿ ವಿಷಯಗಳ ಕುರಿತು ವರದಿ ಸಿದ್ಧಪಡಿಸುವುದು

ಕಾರ್ಯ ನಿರ್ವಹಣೆ:

ಐಐಎಸ್‌ಸಿ ವಿಚಕ್ಷಣ ಘಟಕದ ದೈನಂದಿನ ಕಾರ್ಯ ನಿರ್ವಹಣೆಯು ಸಹಜ ನ್ಯಾಯದ ಅಡಿಯಲ್ಲಿ ಹಲವು ನೀತಿ ನಿಯಮಗಳು, ಮಾರ್ಗಸೂಚಿಗಳು, ಆಡಳಿತಾತ್ಮಕ ಕಾರ್ಯನೀತಿ ಮತ್ತು ತತ್ವಗಳಿಂದ ನಿರ್ದೇಶತವಾಗಿದೆ. ಈ ಚಟುವಟಿಕೆಗಳ ಅನುಸಾರ ಘಟಕದ ಕಾರ್ಯಗಳು ಈ ಕೆಳಗಿನಂತೆ ಇರಲಿವೆ:

  • ಭ್ರಷ್ಟಾಚಾರ, ಅಕ್ರಮ ಮತ್ತು ಅವ್ಯವಸ್ಥೆ ಕುರಿತ ದೂರುಗಳ ಕುರಿತು ತತ್‌ಕ್ಷಣದ ಕ್ರಮ.
  • ವೈಯಕ್ತಿಕ ವಿಚಕ್ಷಣ ಪ್ರಕರಣಗಳ ಜಾರಿ ಮತ್ತು ಪ್ರಕ್ರಿಯೆ.
  • ಅರ್ಜಿಗಳು, ದೂರುಗಳ ಪರಿಶೀಲನೆ ಮತ್ತು ಪರಾಮರ್ಶೆ ಹಾಗೂ ವಿಚಕ್ಷಣ ಪ್ರಕರಣಗಳಲ್ಲಿ ಪ್ರತಿನಿಧಿಸುವುದು.
  • ಭ್ರಷ್ಟಾಚಾರ ನಿರ್ಮೂಲನೆ ನಿಟ್ಟಿನಲ್ಲಿ ನಿಯಮ/ನೀತಿ/ಮಾರ್ಗಸೂಚಿಗಳ ಪರಾಮರ್ಶೆ.
  • ಸಾರ್ವಜನಿಕ ಖರೀದಿ/ ಕಾರ್ಯ, ಪಾವತಿ, ದೂರುಗಳು ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಎಂಎಚ್‌ಆರ್‌ಡಿ (ಸಿವಿಒ) ಅಥವ ಸಿವಿಸಿ ಸಂಸ್ಥೆಗಳ ತನಿಖೆ ಮತ್ತು ವಿಚಾರಣೆಗಳಿಗೆ ಪ್ರತಿಕ್ರಿಯೆ/ ಪೂರಕ ಮಾಹಿತಿ ಒದಗಿಸುವುದು.

ಸಂಪರ್ಕಿಸಿ:

ಅಪರ್ಣ ಕಂಡಿ,
ಖರೀದಿ ಮತ್ತು ಮಳಿಗೆಗಳು, ವಿಚಕ್ಷಣ ಅಧಿಕಾರಿ
ಆಡಳಿತ ಕಟ್ಟಡ (ಐಐಎಸ್‌ಸಿ ಮುಖ್ಯ ದ್ವಾರದ ಬಳಿ)
ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು-೫೬೦೦೧೨
ದೂರವಾಣಿ: ೦೮೦-೨೨೯೩ ೩೬೮೮