ವಿಭಾಗೀಯ ಅಧ್ಯಕ್ಷರು

Divisional Chairmen
UmeshVarshney ಅಧ್ಯಕ್ಷರು, ಜೈವಿಕ ವಿಜ್ಞಾನ ವಿಭಾಗ
ಪ್ರೊಫೆಸರ್ ಉಮೇಶ್ ವಶ್ರ್ನಿ
ಇ-ಮೇಲ್: divchair.bio@iisc.ac.in
ದೂರವಾಣಿ: 91 – 80 – 2293 2809/2686/ 3601

ಉಮೇಶ್ ವಶ್ರ್ನಿಯವರು 1985 ರಲ್ಲಿ ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದರು ಮತ್ತು ನಂತರ AHFMR ಫೆಲೋಆಗಿ ಕಾರ್ಯನಿರ್ವಹಿಸಿದ್ದರು. ಇವರು 1988 ರಲ್ಲಿ ಎಂಐಟಿಯಲ್ಲಿ ಕಾರ್ಯನಿರ್ವಹಿಸಿದ ನಂತರ 1991 ರಲ್ಲಿ ಐಐಎಸ್ಸಿ ಸೇರಿದರು. ಅಣು ಜೀವಶಾಸ್ತ್ರವನ್ನು, ಪ್ರೋಟೀನ್ ಸಂಶ್ಲೇಷಣೆ ಹಾಗು ಯೂಬ್ಯಾಕ್ಟೀರಿಯಾದಲ್ಲಿ ಡಿಎನ್‍ಎ ದುಸ್ಥಿತಿ ಇವರ ಅಧ್ಯಯನ ಕ್ಷೇತ್ರ. ಇವರು ಐಎನ್‍ಎಸ್‍ಎ (ನವ ದೆಹಲಿ), ಐಎಎಸ್ (ಬೆಂಗಳೂರು), ಎನ್‍ಎಎಸ್, ಇಂಡಿಯಾ (ಅಲಹಾಬಾದ್) ಮತ್ತು ಜೆಸಿ ಬೋಸ್ ಫೆಲೋಶಿಪ್ ಸೇರಿದಂತೆ ಎಸ್‍ಎಸ್ ಭಟ್ನಾಗರ್ ಪ್ರಶಸ್ತಿ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ.


 ಅಧ್ಯಕ್ಷರು, ರಾಸಾಯನಿಕ ವಿಜ್ಞಾನ ವಿಭಾಗ
ಪ್ರೊಫೆಸರ್ ಪಿ.ಕೆ. ದಾಸ್
ಇ-ಮೇಲ್: divchair.che@iisc.ac.in
ದೂರವಾಣಿ: 91 – 80 – 2293 2810/2662

ಪಿ.ಕೆ.ದಾಸ್ ಅವರು ರಾಮಕೃಷ್ಣ ಮಿಷನ್ ಕಾಲೇಜ್, ನರೇಂದ್ರಪುರ್ ಮತ್ತು ಐಐಟಿ ಕಾನ್ಪುರ್ ಸಂಸ್ಥೆಗಳಲ್ಲಿ ರಸಾಯನಶಾಸ್ತ್ರದಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪಡೆದಿರುತ್ತಾರೆ. ಅದರ ನಂತರ ಪ್ರೊಫೆಸರ್ ರಿಚರ್ಡ್ ಬರ್ಶೊನ್ ಅವರೊಂದಿಗೆ ಪಿಹೆಚ್.ಡಿ ಪಡೆದುಕೊಳ್ಳಲು ಕೊಲಂಬಿಯಾ ಯುನಿವರ್ಸಿಟಿ, ಯುಎಸ್‍ಎಗೆ ತೆರಳಿದರು. 1984 ರಲ್ಲಿ ಡಾಕ್ಟರೇಟ್ ಪದವಿ ಪಡೆದ ಇವರು ಟೊರೊಂಟೊ ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ಪ್ರೊಫೆಸರ್ ಜಾನ್ ಚಾಲ್ರ್ಸ್ ಪೊಲಾನಿ ಅವರೊಂದಿಗೆ ಕೆಲಸ ಮಾಡಿದರು. 1986 ರಲ್ಲಿ, ಭಾರತ ದೇಶಕ್ಕೆ ಮರಳಿದ ಇವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇನ್ ಆರ್ಗಾನಿಕ್ ಮತ್ತು ಭೌತಿಕ ರಸಾಯನಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.. ಪ್ರೊಫೆಸರ್ ಪಿ.ಕೆ.ದಾಸ್ ಅವರು ಇಂಡಿಯನ್ ಆಕಾಡೆಮಿ ಆಫ್ ಸೈನ್ಸ್ ನ ಫೆಲೋ ಆಗಿದ್ದಾರೆ ಮತ್ತು ಇಂಟನ್ರ್ಯಾಷನಲ್ ಜರ್ನಲ್ ಆಫ್ ಗ್ರೀನ್ ನ್ಯಾನೊಟೆಕ್ನಾಲಜಿಯ ಸಹಾಯಕ ಸಂಪಾದಕರಾಗಿದ್ದಾರೆ. ಪ್ರಾಯೋಗಿಕ ಭೌತಿಕ ರಸಾಯನಶಾಸ್ತ್ರದ ಲೇಸರ್ ಸ್ಪೆಕ್ಟ್ರೋಸ್ಕೋಪಿ, ಡೈನಮಿಕ್ಸ್ ಮತ್ತು ರೇಖಾತ್ಮಕವಲ್ಲದ ಸಣ್ಣ ಕಣಗಳ ದೃಗ್ವಿಜ್ಞಾನ, ದೊಡ್ಡ ಜೈವಿಕ ಅಣುಗಳು ಮತ್ತು ನ್ಯಾನೊಪರ್ಟಿಕಲ್ಸ್ ಇವರ ಆಸಕ್ತಿಯ ವಿಷಯಗಳು.ಅಧ್ಯಕ್ಷರು, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮತ್ತು ಕಂಪ್ಯೂಟರ್ ವಿಜ್ಞಾನಗಳ ವಿಭಾಗ
ಪ್ರೊಫೆಸರ್ ವೈ. ನರಹರಿ
ಇ-ಮೇಲ್: divchair.ele@iisc.ac.in
ದೂರವಾಣಿ: 91 – 80 – 2293 2808/2773
ವೈ. ನರಹರಿ ಅವರು ಕಂಪ್ಯೂಟರ್ ವಿಜ್ಞಾನ ಮತ್ತು ಆಟೋಮೇಷನ್ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದಾರೆ. ಕಂಪ್ಯೂಟರ್ ವಿಜ್ಞಾನ ಮತ್ತು ಗೇಮ್ ತಿಯರಿ ಇಂಟರ್ಫೇಸ್ನಲ್ಲಿ ಸಮಸ್ಯೆಗಳನ್ನು ಅನ್ವೇಷಿಸುವುದು ಇವರ ಪ್ರಸ್ತುತ ಸಂಶೋಧನೆಯ ಕೇಂದ್ರವಾಗಿದೆ. ಅವರ ಇತ್ತೀಚಿನ ಪ್ರಕಟಣೆಗಳಲ್ಲಿ ಐಐಎಸ್ಸಿ ಮುದ್ರಣಾಲಯ ಮತ್ತು 2014 ರಲ್ಲಿ ವಿಶ್ವ ವೈಜ್ಞಾನಿಕ ಪಬ್ಲಿಷಿಂಗ್ ಕಂಪೆನಿ ಹೊರತಂದ ಪಠ್ಯಪುಸ್ತಕ “ಗೇಮ್ ಥಿಯರಿ ಮತ್ತು ಮೆಕ್ಯಾನಿಸಂ ಡಿಸೈನ್” ಸೇರಿವೆ. IEEE, ಇಂಡಿಯನ್ ಆಕಾಡೆಮಿ ಆಫ್ ಸೈನ್ಸ್, ಇಂಡಿಯನ್ ನ್ಯಾಷನಲ್ ಆಕಾಡೆಮಿ ಆಫ್ ಎಂಜಿನಿಯರಿಂಗ್,  ನ್ಯಾಷನಲ್ ಆಕಾಡೆಮಿ ಆಫ್ ಸೈನ್ಸ್ ಮತ್ತು  ಜೆ.ಸಿ. ಬೋಸ್ ರಾಷ್ಟ್ರೀಯ ಫೆಲೋ ಆಗಿದ್ದಾರೆ.


 ಅಧ್ಯಕ್ಷರು, ಇಂಟರ್ ಡಿಸಿಪ್ಲಿನರಿ ರಿಸರ್ಚ್ ವಿಭಾಗ
ಪ್ರೊಫೆಸರ್. ಗೋವಿಂದನ್ ರಂಗರಾಜನ್

ಇ-ಮೇಲ್: divchair.icr@iisc.ac.in
ದೂರವಾಣಿ: 91 – 80 – 2293 2636/3213/3217

ಗೋವಿಂದನ್ ರಂಗರಾಜನ್ ರವರು USA ಯ ಕಾಲೇಜ್ ಪಾಕ್ರ್ನ ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದಿಂದ ಡಾಕ್ಟರೆಟ್ ಪಡೆದರು. 1992 ರಲ್ಲಿ ಭಾರತಕ್ಕೆ ಹಿಂದಿರುಗುವ ಮೊದಲು ಅವರು ಬರ್ಕಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಲಾರೆನ್ಸ್ ಬರ್ಕೆಲಿ ಲ್ಯಾಬ್ನಲ್ಲಿ ಕೆಲಸ ಮಾಡಿದರು. ಇವರು ಪ್ರಸ್ತುತ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಗಣಿತ ಅಧ್ಯಾಪಕ ಹಾಗು ಇಂಟರ್ ಡಿಸಿಪ್ಲಿನರಿ ರಿಸರ್ಚ್ ವಿಭಾಗದ ಅಧ್ಯಕ್ಷರು ಆಗಿದ್ದಾರೆ. ಇವರ ಸಂಶೋಧನಾ ಆಸಕ್ತಿಗಳು ರೇಖಾತ್ಮಕವಲ್ಲದ ಡೈನಾಮಿಕ್ಸ್ ಮತ್ತು ಅಸ್ತವ್ಯಸ್ತತೆ, ಟೈಮ್ ಸರಣಿ ವಿಶ್ಲೇಷಣೆ ಮತ್ತು ಕಂಪ್ಯೂಟೇಶನಲ್ ನರವಿಜ್ಞಾನವನ್ನು ಒಳಗೊಂಡಿವೆ. ಇವರು ಜೆ. ಸಿ. ಬೋಸ್ ರಾಷ್ಟ್ರೀಯ ಫೆಲೋ, ಇಂಡಿಯನ್ ಆಕಾಡೆಮಿ ಆಫ್ ಸೈನ್ಸ್ ಮತ್ತು ಭಾರತದ ದಿ ನ್ಯಾಷಿನಲ್  ಆಕಾಡೆಮಿ ಆಫ್ ಸೈನ್ಸ್ ಸಂಸ್ಥೆಗಳ ಫೆಲೋ ಆಗಿದ್ದಾರೆ. ಇವರು ಫ್ರಾನ್ಸ್ನ ಸರ್ಕಾರದಿಂದ ನೈಟ್ ಆಫ್ ದಿ ಆರ್ಡರ್ ಆಫ್ ಪಾಮ್ಸ ಎಂದು ನೇಮಿಸಲ್ಪಟ್ಟರು. ಇವರು ಹೋಮಿ ಬಾಬಾ ಫೆಲೋ ಸಹ ಆಗಿದ್ದಾರೆ.


 ಅಧ್ಯಕ್ಷರು, ಮೆಕಾನಿಕಲ್ ವಿಜ್ಞಾನ ವಿಭಾಗ
ಪ್ರೊಫೆಸರ್. ವಿಕ್ರಮ್ ಜಯರಾಮ್

ಇ-ಮೇಲ್: divchair.mec@iisc.ac.in
ದೂರವಾಣಿ: 91 – 80 – 2293 2807/3243

ವಿಕ್ರಮ್ ಜಯರಾಮ್ ರವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ತಮ್ಮ ಪದವಿಯನ್ನು ಮತ್ತು ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು. 1990 ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಗೆ ಸೇರ್ಪಡೆಗೊಳ್ಳುವ ಮೊದಲು ಇವರು ಲಾರೆನ್ಸ್ ಬರ್ಕೆಲಿ ಪ್ರಯೋಗಾಲಯದಲ್ಲಿ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಸಾಂಟಾ ಬಾರ್ಬರಾದಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಇವರು ಭಾರತೀಯ ವಿಜ್ಞಾನ ಸಂಸ್ಥೆಯ ಮೆಟೀರಿಯಲ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾರೆ. ಇವರ ಸಂಶೋಧನಾ ಹಿತಾಸಕ್ತಿಗಳು ತಿನ್ ಫಿಲ್ಮ್ ಮೆಕ್ಯಾನಿಕಲ್ ಬಿಹೆವಿಯರ್, ಸೆರಾಮಿಕ್ ಸಂಸ್ಕರಣೆ ಮತ್ತು ಟ್ರೈಬೊಲಾಜಿಗಳಾಗಿವೆ. ಇವರು ಜೆಸಿ ಬೋಸ್ ನ್ಯಾಷನಲ್ ಫೆಲೋ ಹಾಗೂ ಇಂಡಿಯನ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ಮತ್ತು ಅಮೇರಿಕನ್ ಸೆರಾಮಿಕ್ ಸೊಸೈಟಿಯ ಫೆಲೋ ಆಗಿದ್ದಾರೆ.


 ಅಧ್ಯಕ್ಷರು, ಭೌತಿಕ ಮತ್ತು ಗಣಿತ ವಿಜ್ಞಾನ ವಿಭಾಗ
ಪ್ರೊಫೆಸರ್ ರಾಹುಲ್ ಪಂಡಿತ್

ಇ-ಮೇಲ್: divchair.phy@iisc.ac.in
ದೂರವಾಣಿ: 91 – 80 – 2293 2806/2249

ರಾಹುಲ್ ಪಂಡಿತ್‍ರವರು ಭೌತಶಾಸ್ತ್ರದ ಪ್ರಾಧ್ಯಾಪಕ ಹಾಗೂ ಭೌತಿಕ ಮತ್ತು ಗಣೀತ ವಿಜ್ಞಾನ ವಿಭಾಗದ ಅಧ್ಯಕ್ಷರಾಗಿದ್ದಾರೆ. ಇವರು ಐಐಟಿ ದೆಹಲಿ ಸಂಸ್ಥೆಯಿಂದ ಭೌತಶಾಸ್ತ್ರದಲ್ಲಿ ಎಂಎಸ್ ಪದವಿ ಮತ್ತು ಅರ್ಬನಾ-ಚ್ಯಾಂಪೈನ್ನಲ್ಲಿ ಇಲಿನೊಯಿಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರು ಶುದ್ಧ ಮತ್ತು ಅಪ್ಲೈಡ್ ಭೌತಶಾಸ್ತ್ರದ ಅಂತರರಾಷ್ಟ್ರೀಯ ಒಕ್ಕೂಟದ ಸಂಖ್ಯಾಶಾಸ್ತ್ರೀಯ ಭೌತಶಾಸ್ತ್ರದ C3 ಆಯೋಗದಲ್ಲಿದ್ದಾರೆ. ಫಿಜಿಕಲ್ ರಿವೈವ್ ಲೇಟರ್ಸಗೆ ವಿಭಾಗೀಯ ಸಹಾಯಕ ಸಂಪಾದಕರಾಗಿದ್ದಾರೆ. ಇವರು ಎಸ್.ಎಸ್. ಭಟ್ನಾಗರ್ ಮತ್ತು ಮೇಘನಾದ್ ಸಹಾ ಪ್ರಶಸ್ತಿ ಪುರಸ್ಕತರು ಹಾಗೂ ಜೆ.ಸಿ. ಬೋಸ್ ಫೆಲೋಷಿಪ್’ನ ಸ್ವೀಕೃತರಾಗಿದ್ದಾರೆ. ಇವರು ಇಂಡಿಯನ್ ಆಕಾಡೆಮಿ ಆಫ್ ಸೈನ್ಸ್, ದಿ  ಇಂಡಿಯನ್ ನ್ಯಾಷಿನಲ್ ಸೈನ್ಸ್ ಆಕಾಡೆಮಿ  ಮತ್ತು ದಿ ವರ್ಲ್ಡ್ ಆಕಾಡೆಮಿ ಆಫ್ ಸೈನ್ಸ್ ನ ಫೆಲೋ ಆಗಿದ್ದಾರೆ.

ದ್ರವಗಳು, ಪ್ಲಾಸ್ಮಾಗಳು, ಸೂಪರ್ ಫ್ರ್ಲುಯಿಡ್ಸ್ ಮತ್ತು ಕಾಂಪ್ಲೆಕ್ಸ್ ಫ್ಲೂಯಿಡ್ಸ್, ಎಲೆಕ್ಟ್ರಿಕಲ್-ವೇವ್ ಟರ್ಬುಲೆನ್ಸ್ ಮತ್ತು ಕಾರ್ಡಿಯಾಕ್ ಆರ್ರಿಥ್ಮಿಯಾಸ್ ಮತ್ತು ಕೋಲ್ಡ್-ಅಟೋಮ್ ಸಿಸ್ಟಮ್ಸ್ಗಳ ಭೌತಶಾಸ್ತ್ರ ಮತ್ತು ಕಂಪ್ಯುಟೇಶನಲ್ ಸೈನ್ಸ್ ಆಫ್ ಟರ್ಬುಲೆನ್ಸ್ನ ವಿಷಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.