ಶೈಕ್ಷಣಿಕ ಮಂಡಳಿ

Prof. P. Rama Raoಪ್ರೊ. ಪಿ.ರಾಮರಾವ್
ವಿಶ್ರಾಂತ ಕುಲಪತಿ, ಹೈದರಾಬಾದ್ ವಿಶ್ವವಿದ್ಯಾಲಯ
ಅಧ್ಯಕ್ಷರು, ಆಡಳಿತ ಮಂಡಳಿ, ಐಐಎಸ್ ಸಿ.
ಹೈದರಾಬಾದ್ (ಭಾರತ ಸರ್ಕಾರದ ನಾಮ ನಿರ್ದೇಶಿತರು)
ಪ್ರೊಫೆಸರ್ ಪಲ್ಲೆ ರಾಮರಾವ್ ಅವರು ಭೌತಿಕ ಮತ್ತು ಯಾಂತ್ರಿಕ ಲೋಹಶಾಸ್ತ್ರ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಾಗಿ ಹೆಸರಾದ ವಿಜ್ಞಾನಿಯಾಗಿದ್ದಾರೆ. ಭಾರತ ಹಾಗೂ ವಿದೇಶಗಳ 12ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ಜೊತೆ ಸಹಯೋಗ ಸಾಧಿಸಿ, ಸಂಶೋಧನೆಗಳನ್ನು ನಡೆಸಿದ್ದಾರೆ. ವಿಜ್ಞಾನ ರಂಗಕ್ಕೆ ನೀಡಿದ ಕೊಡುಗೆಗಾಗಿ 2011ರಲ್ಲಿ ಭಾರತದ ರಾಷ್ಟ್ರಪತಿಯವರಿಂದ ಪದ್ಮವಿಭೂಷಣ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. [2] ಈಗ ಅವರು ಹೈದರಾಬಾದ್ ನಲ್ಲಿರುವ ಇಂಟರ್ ನ್ಯಾಷನಲ್ ಅಡ್ವಾನ್ಸ್ ಡ್ ರೀಸರ್ಚ್ ಸೆಂಟರ್ ಫಾರ್ ಪೌಡರ್ ಮೆಟಲರ್ಜಿ & ನ್ಯೂ ಮಟೀರಿಯಲ್ಸ್ದ (ಅಂತರರಾಷ್ಟ್ರೀಯ ಉನ್ನತ ಹುಡಿ ಲೋಹಶಾಸ್ತ್ರ ಮತ್ತು ಹೊಸ ವಸ್ತುಗಳ ಸಂಶೋಧನಾ ಕೇಂದ್ರ) ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ.

ಡಾ. ನರೇಂದ್ರ ಜಾಧವ್
ಗೌರವಾನ್ವಿತ ಸಂಸದರು (ರಾಜ್ಯಸಭೆ),
#304, ಶಲಾಕ, 4ನೇ ಮಹಡಿ, ಮಹರ್ಷಿ ಕರ್ವೆ ರಸ್ತೆ,
ಕೂಪರ್ ಏಜ್ ದೂರವಾಣಿ ವಿನಿಮಯ ಕೇಂದ್ರದ ಹತ್ತಿರ, ಮುಂಬೈ- 400 021
ನರೇಂದ್ರ ದಾಮೋದರ್ ಜಾಧವ್ (ಜನನ- 1953ರ ಮೇ 28) ಅವರು ಅರ್ಥಶಾಸ್ತ್ರಜ್ಞರಾಗಿ, ಶಿಕ್ಷಣ ತಜ್ಞರಾಗಿ, ಸಾರ್ವಜನಿಕ ನೀತಿ ನಿರೂಪಣಾ ಪರಿಣತರಾಗಿ, ಇಂಗ್ಲಿಷ್, ಮರಾಠಿ ಮತ್ತು ಹಿಂದಿ ಲೇಖಕರಾಗಿ ಹೆಸರಾಗಿರುವ ಪ್ರೊಫೆಸರ್ ಆಗಿದ್ದಾರೆ.
ಪ್ರಸ್ತುತ ಅವರು ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಇದಕ್ಕೆ ಮುನ್ನ ಭಾರತೀಯ ಯೋಜನಾ ಆಯೋಗ ಮತ್ತು ರಾಷ್ಟ್ರೀಯ ಸಲಹಾ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಅದಕ್ಕಿಂತ ಮುಂಚೆ, ಸಾವಿತ್ರಿಭಾಯಿ ಫುಲೆ ಪುಣೆ ವಿಶ್ವವಿದ್ಯಾಲಯದ ಕುಲಪತಿಯವರಾಗಿ ಸೇವೆ ಸಲ್ಲಿಸಿದ್ದಾರೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (ಐಎಂಎಫ್) ಕೂಡ ಕಾರ್ಯನಿರ್ವಹಿಸಿರುವ ಅವರು, ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಅರ್ಥಶಾಸ್ತ್ರ ಸಂಶೋಧನೆಯ ನೇತೃತ್ವ ವಹಿಸಿದ್ದರು.
67ನೇ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾಗಿರುವ ಜಾಧವ್ ಅವರಿಗೆ ನಾಲ್ಕು ಗೌರವ ಡಾಕ್ಟರೇಟ್ ಗಳು ಸಂದಿವೆ. ಫ್ರ್ಯಾನ್ಸ್ ಸರ್ಕಾರದ ‘ಕಮ್ಯಾಂಡರ್ ಆಫ್ ದಿ ಆರ್ಡರ್ ಆಫ್ ಅಕಾಡೆಮಿಕ್ ಪಾಮ್ಸ್’ ಬಿರುದಿಗೂ ಭಾಜನರಾಗಿದ್ದಾರೆ.

ಡಾ. ಚಂದ್ರಶೇಖರ್ ಕುಮಾರ್
Joint Secretary
Ministry of Human Resource Development
Higher Education Department, Govt. of India
107-C, Shastri Bhawan, NEW DELHI – 110 001 011-23382587 (O)
cs.kumar@nic.in

ಡಾ. ಜೆ.ಜೆ.ಇರಾನಿ
ನಿರ್ದೇಶಕರು, ಟಾಟಾ ಸನ್ಸ್ ಲಿಮಿಟೆಡ್,
ಮುಂಬೈ (ಟಾಟಾ ಪ್ರತಿಷ್ಠಾನಗಳ ನಾಮನಿರ್ದೇಶಿತರು)
ಡಾ.ಜಮಷೇಡ್ ಜೀಜಿ ಇರಾನಿ K.B.E., FREng[1] ಅವರು ಭಾರತೀಯ ಉದ್ಯಮಿಯಾಗಿದ್ದಾರೆ. ಲೋಹಶಾಸ್ತ್ರ (ಮೆಟಲರ್ಜಿ) ವ್ಯಾಸಂಗ ಮಾಡಿದ ನಂತರ ಬ್ರಿಟಿಷ್ ಐರನ್ ಅಂಡ್ ರೀಸರ್ಚ್ ಅಸೋಸಿಯೇಷನ್ ಸೇರಿದರು. ತರುವಾಯ, ಟಾಟಾ ಸ್ಟೀಲ್ ಪ್ರವೇಶಿಸಿದ ಅವರು ಹಂತಹಂತವಾಗಿ ಮೇಲೇರುತ್ತಾ ಅದರ ಮುಖ್ಯಸ್ಥರಾಗಿ ನೇಮಕಗೊಂಡರು. ನಿವೃತ್ತರಾದ ನಂತರ ಟಾಟಾ ಸಮೂಹದ ಹಾಗೂ ಇನ್ನಿತರ ಹಲವಾರು ಕಂಪನಿಗಳ ಆಡಳಿತ ಮಂಡಳಿಗಳಲ್ಲಿದ್ದು ಸೇವೆ ಸಲ್ಲಿಸಿದರು. 2007ರಲ್ಲಿ ಪದ್ಮಭೂಷಣ ಪ್ರಶಸ್ತಿ ಅವರಿಗೆ ಸಂದಿದೆ.

ಶ್ರೀ ರೋನೇಂದ್ರ ಸೇನ್ 
(ಟಾಟಾ ಟ್ರಸ್ಟ್‌ಗಳ ನಾಮನಿರ್ದೇಶಿತರು)
Ronen (Ranendra) Sen joined the Indian Foreign Service in 1966. He served between 1968 and 1985 in the former USSR (twice), the USA and Bangladesh as Third/Second/First Secretary, Counsellor and Minister; as Deputy Secretary, Department of Atomic Energy & Secretary to the Atomic Energy Commission, and as Deputy Secretary and Joint Secretary in the Ministry of External Affairs. He was foreign and defence policy advisor to successive Prime Ministers of India from 1986 to 1991 and had several assignments as Special Envoy of the Prime Minister for meetings with Heads of State/Government.

Sen had consecutive appointments as Ambassador of India to Mexico (1991-92); to the Russian Federation (1992-98); to the Federal Republic of Germany (1998-2002); as High Commissioner to the United Kingdom (2002-04); and as Ambassador to the USA (2004-09).He is the only Indian so far to serve as ambassador in three P-5  and five G-20 capitals. He also participated in 182 bilateral and multilateral summit meetings in six continents.

Among other preoccupations, Sen has been  a  Jury member of the Indira Gandhi Prize for Peace, Disarmament & Development (2009-date); member of the track 2 India-US Strategic Dialogue (2009-date); Independent Director on the Board of Tata Motors Limited (2010-12), President, Federation of Indo-German Associations in India (2014-date); Independent Director, Tata Sons Private Limited (2015-19), etc.

In 2012 he was conferred with the Padma Bhushan, by the President of India for his contributions to foreign and defence policy. He also received honorary doctorates, degrees and special citations from universities and other institutions.

His wife, Kalpana, was closely involved in India’s national adult literacy mission in the 1980s and a  number of philanthropic activities in India and abroad, especially those focussed on under-privileged children.

ಪ್ರೊ. ಗೋವಿಂದನ್ ರಂಗರಾಜನ್
ನಿರ್ದೇಶಕರು, ಐಐಎಸ್ ಸಿ (ಪದನಿಮಿತ್ತ)
ಗೋವಿಂದನ್ ರಂಗರಾಜನ್ ರವರು USA ಯ ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯ, ಕಾಲೇಜ್ ಪಾರ್ಕ್, ದಿಂದ ಡಾಕ್ಟರೆಟ್ ಪಡೆದರು. 1992 ರಲ್ಲಿ ಭಾರತಕ್ಕೆ ಹಿಂದಿರುಗುವ ಮೊದಲು ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಲಾರೆನ್ಸ್, ಬರ್ಕ್ಲಿ, ಲ್ಯಾಬ್ನಲ್ಲಿ ಕೆಲಸ ಮಾಡಿದರು. ಇವರು ಪ್ರಸ್ತುತ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಗಣಿತ ಅಧ್ಯಾಪಕರಾಗಿದ್ದಾರೆ. ಇವರ ಸಂಶೋಧನಾ ಆಸಕ್ತಿಗಳು ರೇಖಾತ್ಮಕವಲ್ಲದ ಡೈನಾಮಿಕ್ಸ್ ಮತ್ತು ಅಸ್ತವ್ಯಸ್ತತೆ, ಟೈಮ್ ಸರಣಿ ವಿಶ್ಲೇಷಣೆ ಮತ್ತು ಕಂಪ್ಯೂಟೇಶನಲ್ ನರವಿಜ್ಞಾನವನ್ನು ಒಳಗೊಂಡಿವೆ. ಇವರು ಜೆ. ಸಿ. ಬೋಸ್ ರಾಷ್ಟ್ರೀಯ ಫೆಲೋ, ಇಂಡಿಯನ್ ಆಕಾಡೆಮಿ ಆಫ್ ಸೈನ್ಸ್ ಮತ್ತು ಭಾರತದ ದಿ ನ್ಯಾಷಿನಲ್  ಆಕಾಡೆಮಿ ಆಫ್ ಸೈನ್ಸ್ ಸಂಸ್ಥೆಗಳ ಫೆಲೋ ಆಗಿದ್ದಾರೆ. ಇವರು ಫ್ರಾನ್ಸ್ನ ಸರ್ಕಾರದಿಂದ ನೈಟ್ ಆಫ್ ದಿ ಆರ್ಡರ್ ಆಫ್ ಪಾಮ್ಸ ಎಂದು ನೇಮಿಸಲ್ಪಟ್ಟರು. ಇವರು ಹೋಮಿ ಬಾಬಾ ಫೆಲೋ ಸಹ ಆಗಿದ್ದಾರೆ.

ಪ್ರೊ. ವೈ. ಎನ್. ಶ್ರೀಕಾಂತ್ 
ಡೀನ್, ಎಂಜಿನಿಯರಿಂಗ್ ವ್ಯಾಸಂಗ ಶಾಖೆ (ಪದನಿಮಿತ್ತ)
ವೈ.ಎನ್.ಶ್ರೀಕಾಂತ್ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಬಿ.ಇ. ಪದವಿ ಪಡೆದಿದ್ದಾರೆ. ನಂತರ, ಭಾರತೀಯ ವಿಜ್ಞಾನ ಸಂಸ್ಥೆಯ ಕಂಪ್ಯೂಟರ್ ವಿಜ್ಞಾನ ಮತ್ತು ಆಟೋಮೇಷನ್ ವಿಭಾಗಗಳಿಂದ ಕ್ರಮವಾಗಿ ಎಂ.ಇ. ಹಾಗೂ ಪಿಎಚ್.ಡಿ. ಗಳಿಸಿದ್ದಾರೆ. ಕಂಪೈಲರ್ ಡಿಸೈನ್ ಮತ್ತು ಲ್ಯಾಂಗ್ವೇಜ್ ಪ್ರೋಗ್ರ್ಯಾಮಿಂಗ್ ಅವರ ಆಸಕ್ತಿಯ ಕ್ಷೇತ್ರಗಳು. ಅವರು 1987ರಲ್ಲಿ ಸಹಾಯಕ ಪ್ರೊಫೆಸರ್ ಆಗಿ ಸಿಎಸ್ಎ ವಿಭಾಗ ಸೇರಿದರು. 2000-2005ರ ಅವಧಿಯಲ್ಲಿ ಸಿಎಸ್ಎ ಛೇರ್ ಮ್ಯಾನ್ ಆಗಿದ್ದರು.

ಭಾರತ ಸರ್ಕಾರದ ನಾಮನಿರ್ದೇಶಿತರು
ಶ್ರೀ ಅಮಿತ್ ಖಾರೆ
ಕಾರ್ಯದರ್ಶಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾವಲಯ, ಉನ್ನತ ಶಿಕ್ಷಣ ಇಲಾಖೆ, ಭಾರತ ಸರ್ಕಾರ, 127-C, ಶಾಸ್ತ್ರಿ ಭವನ,
ನವದೆಹಲಿ- 110 001

ಶ್ರೀ ಎ.ಎಸ್.ಕಿರಣ್ ಕುಮಾರ್
ನಿವೃತ್ತ ಕಾರ್ಯದರ್ಶಿ, ಬಾಹ್ಯಾಕಾಶ ಇಲಾಖೆ,
ಅಂತರಿಕ್ಷ ಭವನ, ನ್ಯೂ ಬಿಇಎಲ್ ರಸ್ತೆ,
ಬೆಂಗಳೂರು- 560 231
ಆಲೂರು ಸೀಳಿನ್ ಕಿರಣ್ ಕುಮಾರ್ (ಜನನ- 1952ರ ಅಕ್ಟೋಬರ್ 22) ಅವರು ಬಾಹ್ಯಾಕಾಶ ವಿಜ್ಞಾನಿಯಾಗಿದ್ದು, 2015ರ ಜನವರಿ 14ರಂದು[1] ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಛೇರ್ ಮ್ಯಾನ್ ಆಗಿ ನಿಯುಕ್ತಿಗೊಂಡರು. ಚಂದ್ರಯಾನ-1 ಮತ್ತು ಮಂಗಳಯಾನ ಬಾಹ್ಯಾಕಾಶ ನೌಕೆಗಳಿಗೆ[2][3][4][5] ಅಗತ್ಯವಾಗಿದ್ದ ಪ್ರಮುಖ ಸಾಧನಗಳನ್ನು ಅಭಿವೃದ್ಧಿಪಡಿಸಿದ ಶ್ರೇಯ ಅವರಿಗೆ ಸಲ್ಲುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ[6] ಸಲ್ಲಿಸಿದ ಸೇವೆಗಾಗಿ 2014ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಈ ಮುನ್ನ ಅವರು, ಅಹಮದಾಬಾದ್ ನಲ್ಲಿರುವ ಬಾಹ್ಯಾಕಾಶ ಆನ್ವಯಿಕ ಕೇಂದ್ರದ (ಸ್ಪೇಸ್ ಅಪ್ಲಿಕೇಷನ್ ಸೆಂಟರ್) ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಕರ್ನಾಟಕ ಸರ್ಕಾರದ ನಾಮನಿರ್ದೇಶಿತರು
ಡಾ.ರಾಜಕುಮಾರ್ ಖತ್ರಿ
ಪ್ರಧಾನ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ,
ಕರ್ನಾಟಕ ಸರ್ಕಾರ, ಬೆಂಗಳೂರು- 560 001

ISNP - 1ಶ್ರೀ ಐ.ಎಸ್.ಎನ್.ಪ್ರಸಾದ್
ಪ್ರಧಾನ ಕಾರ್ಯದರ್ಶಿ, ಹಣಕಾಸು ಇಲಾಖೆ,
ಕರ್ನಾಟಕ ಸರ್ಕಾರ, ಬೆಂಗಳೂರು (ಕರ್ನಾಟಕ ಸರ್ಕಾರದ ನಾಮನಿರ್ದೇಶಿತರು)
ಭಾರತೀಯ ಆಡಳಿತಾ ಸೇವಾ (ಐಎಎಸ್) ಅಧಿಕಾರಿಯಾದ ಶ್ರೀ ಐ.ಎಸ್.ಎನ್.ಪ್ರಸಾದ್ ಅವರು ಹೈದರಾಬಾದ್ ನಲ್ಲಿ ಬಿ.ಇ.(ಸಿವಿಲ್) ಮತ್ತು ಫಿಲಿಪ್ಪೀನ್ಸ್ ನಲ್ಲಿ ‘ಅಭಿವೃದ್ಧಿ ವ್ಯವಸ್ಥಾಪನೆ’ಯಲ್ಲಿ (ಡೆವಲಪ್ ಮೆಂಟ್ ಮ್ಯಾನೇಜ್ ಮೆಂಟ್- ಎಂಡಿಎಂ) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1986ರಲ್ಲಿ ಅವರು, ಭಾರತೀಯ ಆಡಳಿತ ಸೇವೆ (ಕರ್ನಾಟಕ ವೃಂದ) ಸೇರಿದರು. ಪ್ರಸ್ತುತ ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಮದ್ಯಪಾನ ನಿಗಮ ನಿಯಮಿತದ ಛೇರ್ ಮ್ಯಾನ್ ಆಗಿಯೂ ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ.

UGCಯ ಪ್ರತಿನಿಧಿ

ಪ್ರೊಫೆಸರ್ ರಾಜೇಂದ್ರ ಪ್ರಸಾದ್
ನಿರ್ದೇಶಕ,
ಅಮಿಟಿ ಜೈವಿಕ ತಂತ್ರಜ್ಞಾನ ಸಂಸ್ಥೆ, ಅಮಿಟಿ ವಿಶ್ವವಿದ್ಯಾಲಯ,
ಗುಡಗಾಂವ್ (ಹರಿಯಾಣ)_ 122 413

C S I Rನ ಪ್ರತಿನಿಧಿ

ಡಾ. ಶೇಖರ್ ಸಿ. ಮಂಡೆ
ಡೈರೆಕ್ಟರ್ ಜನರಲ್, ಕೌನ್ಸಿಲ್ ಆಫ್ ಸೈಂಟಿಫಿಕ್ ಮತ್ತು ಕೈಗಾರಿಕಾ ಸಂಶೋಧನೆ,
ಅನುಸಂಧಾನ ಭವನ, 2, ರಫಿ ಮಾರ್ಗ, ನವದೆಹಲಿ – 110 001

ಶ್ರೀ  ಕ್ಯಾಪ್ಟನ್ ಶ್ರೀಧರ್ ವಾರಿಯರ್ (ನಿವೃತ್ತ)
ಕುಲಸಚಿವರು,
ಐಐಎಸ್ ಸಿ,
(ಪದನಿಮಿತ್ತ ಕಾರ್ಯದರ್ಶಿ)

ANilSahasrabudheಪ್ರೊಫೆಸರ್ ಅನಿಲ್ ಡಿ.ಸಹಸ್ರಬುದ್ಧೆ
ಛೇರ್ ಮ್ಯಾನ್, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ,
ನವದೆಹಲಿ (ಎಐಸಿಟಿಇ ನಾಮನಿರ್ದೇಶಿತರು)
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮೊದಲ ರಾಂಕ್ (First Rank) ಮತ್ತು ಬಂಗಾರದ ಪದಕದೊಂದಿಗೆ ಎಂಜಿನಿಯರಿಂಗ್ ಪದವಿ ಮುಗಿಸಿದ ಅನಿಲ್ ಸಹಸ್ರಬುದ್ಧೆ ಅವರು, ನಂತರ, ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದರು. ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್ ನಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಅವರು ನಾರ್ಥ್ ಈಸ್ಟರ್ನ್ ರೀಜನಲ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲೂ ಬೋಧಕರಾಗಿದ್ದರು.ಗುವಾಹಟಿ ಐಐಟಿಯಲ್ಲಿ ವಿಭಾಗದ ಮುಖ್ಯಸ್ಥರಾಗಿ (ಎಚ್ಒಡಿ), ನಿಕಾಯ ಮುಖ್ಯಸ್ಥರಾಗಿ (ಡೀನ್) ಮತ್ತು ಉಪನಿರ್ದೇಶರಾಗಿ ವಿವಿಧ ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ನಂತರ, ಪುಣೆಯ ಕಾಲೇಜ್ ಆಫ್ ಎಂಜಿನಿಯರಿಂಗ್ ನಿರ್ದೇಶಕರಾಗಿ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಿದ ಅವರು ತರುವಾಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಛೇರ್ ಮ್ಯಾನ್ ಆಗಿದ್ದಾರೆ.

ವಿಶ್ವವಿದ್ಯಾಲಯಗಳ ಸಂಘದ ಪ್ರತಿನಿಧಿ

ಉತ್ತರಭಾರತದ ಪ್ರದೇಶ :
ಪ್ರೊ. ಆರ್. ಎಸ್. ಬಾವ

ಉಪಕುಲಪತಿ, ಚಂಡೀಗಢ್ ವಿಶ್ವವಿದ್ಯಾಲಯ
ಘರುಯನ್, ಮೊಹಾಲಿ ಜಿಲ್ಲೆ, ಪಂಜಾಬ್, 140 413
ದಕ್ಷಿಣಭಾರತದ ಪ್ರದೇಶ :
ಪ್ರೊ. ಸಂದೀಪ್ ಸಂಚೇತಿ

ಉಪಕುಲಪತಿ, SRM ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, SRM ನಗರ, ಕತ್ತನಕೊಳತ್ತೂರ್,
ಕಾಂಚೀಪುರಂ ಜಿಲ್ಲೆ, ಚೆನ್ನೈ – 603 203

ಪ್ರೊ ಎ ಜಿ ಸ್ಯಾಮುಯೇಲ್ಸನ್

ಡೀನ್, ವಿಜ್ಞಾನ ವ್ಯಾಸಂಗ ಶಾಖೆ

ಅಶೋಕ ಸ್ಯಾಮ್ಯುಯೆಲ್ಸನ್ ಅವರು ಐಐಟಿ ಮದ್ರಾಸ್ ನಲ್ಲಿ 1978ರಲ್ಲಿ ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ. ವ್ಯಾಸಂಗ ಮಾಡಿದರು. ನಂತರ, ಕಾರ್ನೆಲ್ ವಿಶ್ವವಿದ್ಯಾಲಯದಿಂದ 1983ರಲ್ಲಿ ಪಿಎಚ್.ಡಿ. ಪಡೆದರು. 1983ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಸೇರಿದರು. ಆಗಿನಿಂದಲೂ ಸಂಸ್ಥೆಯ ನಿರವಯವ ಮತ್ತು ಭೌತ ರಸಾಯನ ಶಾಸ್ತ್ರ ವಿಭಾಗದ ಅಧ್ಯಾಪಕ ವರ್ಗದಲ್ಲಿದ್ದಾರೆ. ಹೊಸ ವೇಗವರ್ಧಕಗಳ ತಯಾರಿಕೆಗೆ ಸಂಬಂಧಿಸಿದಂತೆ ಆರ್ಗ್ಯಾನೋಮೆಟ್ಯಾಲಿಕ್ ಮತ್ತು ಕೋಆರ್ಡಿನೇಷನ್ ಕೆಮಿಸ್ಟ್ರಿಯಲ್ಲಿ ಸಂರಚನಾ ಕ್ರಿಯಾಶೀಲತೆ ಸಂಬಂಧಗಳು ಅವರು ಆಸಕ್ತಿಯ ಕ್ಷೇತ್ರಗಳಾಗಿವೆ.