ಗಣಿತಶಾಸ್ತ್ರ ಮತ್ತು ಕಂಪ್ಯೂಟಿಂಗ್ ಕೇಂದ್ರ: ಆಕ್ಸಿಸ್ ಬ್ಯಾಂಕ್- ಐಐಎಸ್‌ಸಿ ಒಡಂಬಡಿಕೆ


09 ಜನವರಿ 23

ಐಐಎಸ್‌ಸಿಯಲ್ಲಿ ಗಣಿತಶಾಸ್ತ್ರ ಮತ್ತು ಕಂಪ್ಯೂಟಿಂಗ್ ಕೇಂದ್ರವನ್ನು ಸ್ಥಾಪಿಸಲು ದೇಶದಲ್ಲಿ ಖಾಸಗಿ ವಲಯದ ಮೂರನೇ ಅತಿ ದೊಡ್ಡ ಬ್ಯಾಂಕ್ ಆಗಿರುವ ಆಕ್ಸಿಸ್ ಬ್ಯಾಂಕ್ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಗಳ ನಡುವೆ ಒಡಂಬಡಿಕೆ (ಎಂಒಯು) ಏರ್ಪಟ್ಟಿದೆ.


ಸ್ಥಾಪನೆಯಾಗಲಿರುವ ‘ಆಕ್ಸಿಸ್ ಬ್ಯಾಂಕ್ ಗಣಿತಶಾಸ್ತ್ರ ಮತ್ತು ಕಂಪ್ಯೂಟಿಂಗ್ ಕೇಂದ್ರ’ವು ಈ ರೀತಿಯ ದೇಶದ ಮೊತ್ತಮೊದಲ ಸಮಗ್ರ ಶೈಕ್ಷಣಿಕ ಸಂಶೋಧನಾ ಕೇಂದ್ರವಾಗಲಿದೆ. ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನದಂತಹ ಹಲವಾರು ಪ್ರಚಲಿತ ಹಾಗೂ ಭವಿಷ್ಯದ ಬೇಡಿಕೆಯ ವಲಯಗಳು ಗಣಿತಶಾಸ್ತ್ರ ಮತ್ತು ಕಂಪ್ಯೂಟಿಂಗ್ ನ ಮೂಲತತ್ವಗಳನ್ನು ಆಧರಿಸಿರುವುದರಿಂದ ಉದ್ದೇಶಿತ ಕೇಂದ್ರವು ದೇಶದ ಭವಿಷ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಲಿದೆ.

ಈ ಸಂದರ್ಭದಲ್ಲಿ ಐಐಎಸ್‌ಸಿ ನಿರ್ದೇಶಕ ಪ್ರೊಫೆಸರ್ ಗೋವಿಂದನ್ ರಂಗರಾಜನ್ ಅವರು ಮಾತನಾಡಿ, “ಸಂಶೋಧನೆ ಹಾಗೂ ಆವಿಷ್ಕಾರದಲ್ಲಿ ನಮ್ಮ ಉತ್ಕೃಷ್ಟತೆಯ ಬದ್ಧತೆಯೊಂದಿಗೆ ಕೈಜೋಡಿಸಿರುವುದಕ್ಕೆ ಆಕ್ಸಿಸ್ ಬ್ಯಾಂಕ್ ಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ” ಎಂದರು.

ಕಾಂಪ್ಯುಟೇಷನಲ್ ಫ್ಲುಯಿಡ್ ಡೈನಮಿಕ್ಸ್, ಕಾಂಪ್ಯುಟೇಷನಲ್ ಬಯಾಲಜಿ, ಕ್ವಾಂಟಮ್ ಕಂಪ್ಯೂಟಿಂಗ್, ಪ್ರಿಸಿಷನ್ ಮೆಡಿಸಿನ್, ಡಿಜಿಟಲ್ ಹೆಲ್ತ್, ಹವಾಮಾನ ವಿಜ್ಞಾನ, ಮೆಟೀರಿಯಲ್ಸ್ ಚೀನೊಮಿಕ್ಸ್, ಸೈಬರ್ ಸುರಕ್ಷತೆ, ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್ ಮತ್ತು ದತ್ತಾಂಶ ವಿಜ್ಞಾನ ಕ್ಷೇತ್ರಗಳಲ್ಲಿ ಗಣಿತಶಾಸ್ತ್ರ ಮತ್ತು ಕಂಪ್ಯೂಟಿಂಗ್ ಕೇಂದ್ರ ವಿಷಯವಾಗಿರುತ್ತದೆ ಈ ಎಂಬುದು ಇಲ್ಲಿ ಗಮನಾರ್ಹ.

‘ಆಕ್ಸಿಸ್ ಬ್ಯಾಂಕ್ ಗಣಿತಶಾಸ್ತ್ರ ಮತ್ತು ಕಂಪ್ಯೂಟಿಂಗ್ ಕೇಂದ್ರ’ವು ಈ ಮೇಲೆ ಉಲ್ಲೇಖಿಸಿದ ಕ್ಷೇತ್ರಗಳಲ್ಲಿ ಉನ್ನತ ಸಂಶೋಧನೆಗೆ ವೇದಿಕೆ ಒದಗಿಸಲಿದೆ.
ಜೊತೆಗೆ, ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಈ ಕೇಂದ್ರವು ಮೇಲೆ ತಿಳಿಸಿದ ವಲಯಗಳಲ್ಲಿ ಮುಂಬರುವ ಪೀಳಿಗೆಯ ಪರಿಣತರನ್ನು ರೂಪಿಸಲು ತರಬೇತಿ ನೆಲೆಯಾಗಿಯೂ ಕಾರ್ಯನಿರ್ವಹಿಸಲಿದೆ.
ಈ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಬೋಧಕರಿಗೆ ವಿಶಾಲ ವ್ಯಾಪ್ತಿಯ ಶೈಕ್ಷಣಿಕ ಹಾಗೂ ಮತ್ತು ವೃತ್ತಿಪರ ಬೆಳವಣಿಗೆಯ ಅವಕಾಶಗಳನ್ನು ಕೇಂದ್ರವು ಲಭ್ಯವಾಗಿಸಲಿದೆ.

“ಸಂಶೋಧನೆ ಮತ್ತು ತಂತ್ರಜ್ಞಾನದ ಭವಿಷ್ಯವನ್ನು ರೂಪಿಸುವಲ್ಲಿ ಕೇಂದ್ರವು ಪ್ರಮುಖ ಪಾತ್ರವನ್ನು ವಹಿಸಲಿದೆ ಎಂಬುದು ನಮ್ಮ ವಿಶ್ವಾಸವಾಗಿದೆ” ಎಂದು ಇದೆ ವೇಳೆ ಗೋವಿಂದನ್ ರಂಗರಾಜನ್ ಅಭಿಪ್ರಾಯಪಟ್ಟರು.

ಆಕ್ಸಿಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಅಮಿತಾಭ್ ಚೌಧರಿ ಅವರು ಮಾತನಾಡಿ, ಪ್ರಸ್ತಾವಿತ ಕೇಂದ್ರದ ಪ್ರಾಮುಖ್ಯದ ಬಗ್ಗೆ ಒತ್ತಿ ಹೇಳಿದರು.

“ಐ.ಐ.ಎಸ್ ಸಿ.ಯು ಗಣಿತಶಾಸ್ತ್ರ ಮತ್ತು ಕಂಪ್ಯೂಟಿಂಗ್ ಗೆಂದೇ ಮೀಸಲಾದ ದೇಶದ ಅತಿ ದೊಡ್ಡ ಕೇಂದ್ರವನ್ನು ನಿರ್ಮಿಸುತ್ತಿರುವ ಸಂದರ್ಭದಲ್ಲಿ ಅವರ ಪಯಣದೊಂದಿಗೆ ನಾವು ಭಾಗಿಯಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ” ಎಂದರು.

ಉನ್ನತ ಶಿಕ್ಷಣ ವ್ಯವಸ್ಥೆಯು ನಿರಂತರವಾಗಿ ವಿಕಸನಗೊಳ್ಳುವ ವಲಯವಾಗಿದೆ. ಅದರಲ್ಲೂ ಕೋವಿಡ್ ನಂತರದಲ್ಲಿ ಇದರ ವಿಕಸನ ಇನ್ನಷ್ಟು ತೀವ್ರ ಗತಿಯಲ್ಲಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ, ಹೊಸತಲೆಮಾರಿನ ಆವಿಷ್ಕಾರ ಮತ್ತು ಗುಣಮಟ್ಟದ ಶಿಕ್ಷಣದಲ್ಲಿ ಪ್ರಪಂಚದ ಪ್ರಮುಖ ನೆಲೆಯಾಗಿ ಗಮನ ಸೆಳೆಯಲು ಭಾರತಕ್ಕೆ ಅತ್ಯಂತ ಹೆಚ್ಚಿನ ಅವಕಾಶಗಳಿವೆ ಎಂದರು.

“ದೇಶದ ಭವಿಷ್ಯದ ಪೀಳಿಗೆಗಳನ್ನು ಬೆಂಬಲಿಸಿ ಇಂಬು ನೀಡುವಲ್ಲಿ ನಮ್ಮ ಪಾತ್ರವನ್ನು ನಿರ್ವಹಿಸುವಲ್ಲಿ ಇದೊಂದು ಸಣ್ಣ ಕೊಡುಗೆಯಾಗಿದೆ” ಎಂದೂ ಚೌಧರಿ ಅವರು ನುಡಿದರು.

ಒಟ್ಟು1.6 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಈ ಕೇಂದ್ರವು ನಿರ್ಮಾಣವಾಗಲಿದೆ. ಇದು ಐ.ಐ.ಎಸ್ ಸಿ. ಯ 20ಕ್ಕೂ ಹೆಚ್ಚು ವಿಭಾಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಹಾಗೂ ಬೋಧಕರಿಗೆ ಅನುಕೂಲವಾಗುವಂತಹ ಅತ್ಯಾಧುನಿಕ ಪ್ರಯೋಗಾಲಯಗಳನ್ನು ಮತ್ತು ಕೋರ್ಸ್ ಗಳನ್ನು ಹೊಂದಿರಲಿದೆ.
ಗಣಿತಶಾಸ್ತ್ರ ಮತ್ತು ಕಂಪ್ಯೂಟಿಂಗ್ ನಲ್ಲಿ ಹೊಸದಾದ ಬಿ.ಟೆಕ್ ಕೋರ್ಸ್ ಅನ್ನು ಇಲ್ಲಿ ಆರಂಭಿಸಲಾಗುವುದು. ಇದರ ಜೊತೆಗೆ, ಗಣಿತ ವಿಜ್ಞಾನಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಇರುವ ಅಂತರಶಿಸ್ತೀಯ ಪಿಎಚ್.ಡಿ. ಅಧ್ಯಯನಗಳನ್ನು ಕೇಂದ್ರವು ನಿರ್ವಹಿಸಲಿದೆ.
ಈ ಕೇಂದ್ರದಿಂದ ಪ್ರತಿ ವರ್ಷ 500ಕ್ಕೂ ಹೆಚ್ಚು ಎಂಜಿನಿಯರ್ ಗಳು ಮತ್ತು ವಿಜ್ಞಾನಿಗಳಿಗೆ ಅನುಕೂಲವಾಗುವ ನಿರೀಕ್ಷೆ ಇದೆ.

ಸಂಪರ್ಕಿಸಿ:

ಐಐಎಸ್‌ಸಿ ಸಂವಹನ ಕಚೇರಿ | news@iisc.ac.in

ಆಕ್ಸಿಸ್ ಬ್ಯಾಂಕ್ ಬಗ್ಗೆ:

ಆಕ್ಸಿಸ್ ಬ್ಯಾಂಕ್ ಭಾರತದಲ್ಲಿ ಮೂರನೇ ಅತಿ ದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿದೆ. ಈ ಬ್ಯಾಂಕ್ ವಿವಿಧ ಗ್ರಾಹಕ ವಲಯಗಳಲ್ಲಿ ವಿಶಾಲ ಶ್ರೇಣಿಯ ಸೇವೆಗಳನ್ನು ಒದಗಿಸುತ್ತಿದೆ. ದೊಡ್ಡ ಮತ್ತು ಮಧ್ಯಮ ಗಾತ್ರದ ಕಾರ್ಪೊರೇಟ್ ಗಳು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು, ಕೃಷಿ ಹಾಗೂ ರಿಟೇಲ್ ವ್ಯಾಪಾರ ವಹಿವಾಟು ಕ್ಷೇತ್ರ ಗಳನ್ನು ಇದು ಒಳಗೊಂಡಿರುತ್ತದೆ. ದೇಶದಲ್ಲಿ ವಿಸ್ತರಣಾ ಕೌಂಟರ್ ಗಳು ಸೇರಿದಂತೆ ಒಟ್ಟು 4,760 ಶಾಖೆಗಳನ್ನು ಮತ್ತು 16,043 ಎಟಿಎಂ ಕೇಂದ್ರಗಳನ್ನು ಇದು ಹೊಂದಿದೆ. 2022ರ ಸೆಪ್ಟೆಂಬರ್ 30ರ ಪ್ರಕಾರ ಆಕ್ಸಿಸ್ ಬ್ಯಾಂಕ್ ಸೇವಾಜಾಲವು 2,676 ನಗರಗಳಿಗೆ ಮತ್ತು ಪಟ್ಟಣಗಳಲ್ಲಿ ವ್ಯಾಪಿಸಿದೆ. ಈ ಮೂಲಕ ಬ್ಯಾಂಕಿಗೆ ಹಲವಾರು ಉತ್ಪನ್ನಗಳು ಮತ್ತು ಸೇವೆಗಳೊಂದಿಗೆ ದೊಡ್ಡ ಗ್ರಾಹಕ ವರ್ಗವನ್ನು ತಲುಪಲು ಸಾಧ್ಯವಾಗಿದೆ. ಆಕ್ಸಿಸ್ ಸಮೂಹವು ಆಕ್ಸಿಸ್ ಮ್ಯೂಚುಯಲ್ ಫಂಡ್, ಆಕ್ಸಿಸ್ ಸೆಕ್ಯುರಿಟೀಸ್ ಲಿಮಿಟೆಡ್, ಆಕ್ಸಿಸ್ ಫೈನಾನ್ಸ್, ಆಕ್ಸಿಸ್ ಟ್ರಸ್ಟಿ, ಆಕ್ಸಿಸ್ ಕ್ಯಾಪಿಟಲ್, A.TReDS Ltd (ಎ.ಟ್ರೆಡ್ಸ್ ಲಿಮಿಟೆಡ್), ಫ್ರೀ ಚಾರ್ಜ್ ಅಂಡ್ ಆಕ್ಸಿಸ್ ಬ್ಯಾಂಕ್ ಫೌಂಡೇಷನ್ ಗಳನ್ನು ಒಳಗೊಂಡಿದೆ. ಆಕ್ಸಿಸ್ ಬ್ಯಾಂಕ್ ಬಗ್ಗೆ ಹೆಚ್ಚಿನ ಮಾಹಿತಿಗೆ ದಯವಿಟ್ಟು ವೆಬ್ಸೈಟ್ https://www.axisbank.com ನೋಡಿರಿ.

ಮಾಧ್ಯಮ ಸಂಬಂಧಿ ವಿಷಯಗಳಿಗಾಗಿ ದಯವಿಟ್ಟು ಸಂಪರ್ಕಿಸಿ:

ಪಿಯಲಿ ರೆಡ್ಡಿ
+91 9322657983
piyali.reddy@axisbank.com

ಶ್ರುತಿ ಮುಡುಪ್
+91 9820651056
Shruti.Mudup@axisbank.com

ಆಡ್ ಫ್ಯಾಕ್ಟರ್ಸ್ ಸಾರ್ವಜನಿಕ ಸಂಪರ್ಕ ಪ್ರತಿನಿಧಿಗಳು

ಜಾನಕಿ ತೆಲಿವಾಲಾ
+ 91 9892623468
janki.telivala@adfactorspr.com

ಶ್ರೇಷ್ಠ ಭಟ್ಟಾಚಾರ್ಯ
+91 7030200118
sreshta.bhattacharya@adfactorspr.com