ಮೆಕ್ಯಾನಿಕಲ್ ವಿಜ್ಞಾನ ವಿಭಾಗ


ಭೋಧನಾ ಸಿಬ್ಬಂದಿ – 138
ಡಾಕ್ಟರೇಟ್ ವಿದ್ಯಾರ್ಥಿಗಳು – 635
ಸ್ನಾತಕೋತ್ತರ ವಿದ್ಯಾರ್ಥಿಗಳು – 264
93 ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆದಿದ್ದಾರೆ
2  ವಿದ್ಯಾರ್ಥಿಗಳು MSc(Engg) ಪದವಿ ಪಡೆದಿದ್ದಾರೆ
80 ವಿದ್ಯಾರ್ಥಿಗಳು Mtech ಪದವಿ ಪಡೆದಿದ್ದಾರೆ
5 ವಿದ್ಯಾರ್ಥಿಗಳು Mtech(Res) ಪದವಿ ಪಡೆದಿದ್ದಾರೆ
25 ವಿದ್ಯಾರ್ಥಿಗಳು Mdes ಪದವಿ ಪಡೆದಿದ್ದಾರೆ

ಪ್ರಮುಖ ಸಂಶೋಧನಾ ಕ್ಷೇತ್ರ

ಭೂತಾಂತ್ರಿಕ ಎಂಜಿನಿಯರಿಂಗ್, ಸಿವಿಲ್ ಮತ್ತು ಏರೋಸ್ಪೇಸ್ ರಚನೆಗಳು, ಸಾರಿಗೆ, ಜಲಸಂಪನ್ಮೂಲಗಳು, ಪರಿಸರ ಎಂಜಿನಿಯರಿಂಗ್ ಮತ್ತು ನಿರಂತರತೆಯ ನೆಲೆ, ಹವಾಗುಣ, ರಚನಾ ಹಾಗೂ ಕಾರ್ಯಕಾರಿ ದ್ರವ್ಯಗಳು, ತಯಾರಿಕೆ, ವಿನ್ಯಾಸ ಸಿದ್ಧಾಂತ ಮತ್ತು ವಿಧಾನಕ್ರಮ, ಭೂರಾಸಾಯನಶಾಸ್ತ್ರ, ಭೂಸಂರಚನೆ, ಗ್ರಹಗಳ ವಿಕಸನ, ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್ ಅಳವಡಿಕೆಗಳು, ಏರೋಡೈನಮಿಕ್ಸ್, ದಹನಕ್ರಿಯೆ, ನ್ಯಾವಿಗೇಷನ್ ಮತ್ತು ಗೈಡನ್ಸ್, ಘನಯಂತ್ರಶಾಸ್ತ್ರ, ಫ್ಲುಯಿಡ್ ಯಂತ್ರಶಾಸ್ತ್ರ, ಶಾಖ ವಿಜ್ಞಾನಗಳು, ಧ್ವನಿ ವಿಜ್ಞಾನ,  ಯಂತ್ರಮಾನವ ವಿಜ್ಞಾನ, ಚಲನಶೀಲತೆ ವಿಜ್ಞಾನ, ಜೈವಿಕಅಣು ಎಂಜಿನಿಯರಿಂಗ್, ಕ್ರಿಯಾವರ್ಧನೆ, ಕೊಲಾಯಿಡ್ ಗಳು ಮತ್ತು ಅಂತರಮುಖ ವಿಜ್ಞಾನ, ನ್ಯಾನೊ ತಂತ್ರಜ್ಞಾನ, ಉಷ್ಣಚಲನಶೀಲತೆ.

ವಿಷಯ

ವಿಭಾಗದ ಸಂಶೋಧನಾ ಕಾರ್ಯಗಳು ವೈವಿಧ್ಯವಾಗಿವೆ. ಭೂಕಂಪನಶಾಸ್ತ್ರ ಮತ್ತು ಹವಾಗುಣ ಬದಲಾವಣೆ- ಮಾದರೀಕರಣ ಹಾಗೂ ಪುರಾತನ ಅಧ್ಯಯನಗಳು ಮುಖ್ಯ ಕ್ಷೇತ್ರಗಳಾಗಿವೆ. ಇವು ಪರಿಸರಿಕವಾಗಿ ನಿರಂತರತೆಯನ್ನು ಖಚಿತಗೊಳಿಸುವ ವಿನ್ಯಾಸ ಹಾಗೂ ತಾಜ್ಯ ನಿರ್ವಹಣೆಗಳ ಕುರಿತು ಕುರಿತು ಸಹಜವಾಗಿ ಕೆಲಸಮಾಡುವಲ್ಲಿ ಎಡೆಮಾಡಿಕೊಡುತ್ತದೆ. ದ್ರವ್ಯಗಳ ಕುರಿತ ಅಧ್ಯಯನಗಳಲ್ಲಿ ಜೈವಿಕ ವಸ್ತುಗಳು, ಪಾಲಿಮರುಗಳು ಮತ್ತು ಫೋಟೊವೋಲ್ಟಾಯಿಕುಗಳ ಅಧ್ಯಯನ ಹಾಗೂ ಮಾಡೆಲಿಂಗ್ ಸೇರುತ್ತದೆ. ಫ್ಲುಯಿಡ್ ಡೈನಾಮಿಕ್ಸ್ ಅಧ್ಯಯನದಲ್ಲಿ ಷಾಕ್ ತರಂಗಗಳು ಮತ್ತು ಸೂಪರ್ ಸಾನಿಕ್ ವೇಗಗಳಲ್ಲಿ ಇತರೆ ಪ್ರಘಟನೆಗಳ ಅಧ್ಯಯನ ಸೇರುತ್ತದೆ. ಇದು ಈ ವಿಭಾಗದ ಇತರೆ ಎಲ್ಲ ಉಪವಿಭಾಗಗಳನ್ನು ಮೀರುವ ಪ್ರಮುಖ ಅಧ್ಯಯನ ಕ್ಷೇತ್ರವಾಗಿದೆ. ಇಲ್ಲಿನ ಸಂಶೋಧಕರು ಎಚ್ ಐವಿ, ಹೆಪಟೈಟಿಸ್(ಸಿ) ಮತ್ತು ಡೆಂಗ್ಯುಗಳಂತಹ ವೈರಾಣು ಸೋಂಕುಗಳಿಗೆ ಹೊಸ ಔಷಧಿಗಳು ಮತ್ತು ವ್ಯಾಕ್ಸೀನ್ ಗಳನ್ನು ಗುರುತಿಸುವ ಕೆಲಸವನ್ನೂ ಕೈಗೊಳ್ಳುತ್ತಾರೆ.

ಈ-ಕೋಲಿಯೆಂಬುದು ಸಾಮಾನ್ಯವಾಗಿ ನಮ್ಮ ಪರಿಸರದಲ್ಲಿ ಕಾಣುವ ಬ್ಯಾಕ್ಟೀರಿಯ, ಇದು ಮನುಷ್ಯರಲ್ಲಿ ಗಂಭೀರವಾದ ಸೋಂಕು ಉಂಟುಮಾಡಬಲ್ಲದು. ವಿಭಾಗದ ಸಂಶೋಧಕರು  ಒಂದು ಈ-ಕೋಲಿ ಸೆನ್ಸರ್ ಕಂಡು ಹಿಡಿದಿದ್ದಾರೆ. ಇದು ಪಾಲಿಮರಿನಿಂದ ಮಾಡಲ್ಪಟ್ಟಿದ್ದು , ಈ-ಕೋಲಿಗಳ ಸಂಖ್ಯೆ ಬದಲಾವಣೆಗೆ ತಕ್ಕಂತೆ ಇದರ ನಿರೋಧಕತೆಯು ನಿಮಿಷಗಳಲ್ಲಿ ಬದಲಾಗುತ್ತದೆ

ಜೆಟ್ ಇಂಜಿನುಗಳ ಟರ್ಬೈನುಗಳು ಸೂಪರ್ ಆಲಾಯ್ ಗಳಾಗಿದ್ದು ಅತ್ಯಧಿಕ ತಾಪಮಾನವನ್ನು ಭರಿಸುವ ಶಕ್ತಿಯನ್ನು ಹೊಂದಿರುವ ಸಾಮಾನ್ಯವಾಗಿ  ನಿಕ್ಕಲ್ ನಿಂದ ಮಾಡಲ್ಪಟ್ಟಿರುವಂತಹವು. ಇವು. ಭವಿಷ್ಯದಲ್ಲಿ ಹಸಿರು ಇಂಧನಗಳು ಸಾಮಾನ್ಯವಾಗುತ್ತವೆ. ಆದರೆ ಇವು ಇನ್ನೂ ಹೆಚ್ಚು ಬೇಗ ಸವೆಯುವಂತಹವು. ಯಂತ್ರವಿಜ್ಞಾನ ಎಂಜಿನಿಯರಿಂಗ್ ವಿಭಾಗದವರು  ಜೆಟ್ ಇಂಜಿನುಗಳಲ್ಲಿ ಬಳಸಲು  ಸವೆತ–ನಿರೋಧಕ ಕೋಬಾಲ್ಟ್ ಆಧಾರಿತ ಸೂಪರ್ ಅಲಾಯ್ ಗಳನ್ನು ತಯಾರಿಸಿದ್ದಾರೆ.

ಅರಣ್ಯನಾಶವು ನಮ್ಮ ಪರಿಸರವ್ಯವಸ್ಥೆಗೆ ಅತಿ ದೊಡ್ಡ ಅಪಾಯವಾಗಿದ್ದು ಇದು ದೀರ್ಘಕಾಲೀನವಾಗಿ ಪರಿಣಾಮ ಬೀರುತ್ತದೆ. ಆದರೆ ನಾವು ಇನ್ನೂ ಕೂಡ ಅರಣ್ಯನಾಶವು ವಿಭಿನ್ನ ರೀತಿಯಲ್ಲಿ ನಮ್ಮ ಪರಿಸರವ್ಯಸ್ಥೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆಂಬುದರ  ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ.   ದಿವೇಚ ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ ನ ವಿಜ್ಞಾನಿಗಳು ಭಾರತದ ಮಳೆವಿನ್ಯಾಸವು ಸ್ಥಳೀಯ ಅರಣ್ಯನಾಶಕ್ಕಿಂತ ಹೆಚ್ಚಿನ ಎತ್ತರಪ್ರದೇಶ ಅರಣ್ಯನಾಶದಿಂದ ಹೆಚ್ಚು  ಪ್ರಭಾವಿತವಾಗಿವೆ ಎಂಬುದನ್ನು ತೋರಿಸುವ ಒಂದು ಕಂಪ್ಯೂಟರ್ ಅನುಕರಣಕವನ್ನು ಅಭಿವೃದ್ಧಿಗಳಿಸಿದ್ದಾರೆ

ಸಂಶೋಧನಾ ಚಿತ್ರಣ
pdf ಗಳಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ಈ ವಿಭಾಗದಲ್ಲಿನ ಇಲಾಖೆಗಳು