ವಿದ್ವತ್ ಸಭಾ

ವಿದ್ವತ್ ಸಭಾ ಸದಸ್ಯರ ಪಟ್ಟಿ
2018-2021ರ ತ್ರೈವಾರ್ಷಿಕ ಅವಧಿಗೆ ಪುನರ್ರಚನೆ

ಯೋಜನೆ

 ಡಾ. ಪ್ರಹ್ಲಾದ ರಾಮರಾವ್,
Formerly Distinguished Scientist and Chief Controller,
DRDO, ನವದೆಹಲಿ.
ನಟರಾಜನ್ ಚಂದ್ರಶೇಖರನ್
ವಿದ್ವತ್ ಸಭಾ ಅಧ್ಯಕ್ಷರು
ನಟರಾಜನ್ ಚಂದ್ರಶೇಖರನ್ ಅವರು ಟಾಟಾ ಸನ್ಸ್ ಛೇರ್ ಮ್ಯಾನ್. 1][2][3] ಚಂದ್ರಶೇಖರನ್ ಅವರು 2009ರ ನವೆಂಬರ್ 6ರಂದು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನ (ಟಿಸಿಎಸ್) ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ಜವಾಬ್ದಾರಿ ವಹಿಸಿಕೊಂಡರು. ಅದಕ್ಕೆ ಮುನ್ನ ಅವರು ಟಿಸಿಎಸ್ ನ ಮುಖ್ಯ ನಿರ್ವಹಣಾಧಿಕಾರಿ (ಸಿಒಒ) ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು. 1963ರಲ್ಲಿ ಹುಟ್ಟಿದ ಚಂದ್ರಶೇಖರನ್ ಅವರು ಟಾಟಾ ಸಮೂಹದೊಳಗಿನ ಅತ್ಯಂತ ಕಿರಿಯ ಸಿಇಒ ಗಳಲ್ಲಿ ಒಬ್ಬರಾಗಿದ್ದಾರೆ. [5] 2017ರ ಜನವರಿಯಲ್ಲಿ ಅವರು ಟಾಟಾ ಸನ್ಸ್ ನ ಛೇರ್ ಮ್ಯಾನ್ ಆಗಿ ಆಯ್ಕೆಗೊಂಡರು. ನಂತರ, ಅವರು 2017ರ ಫೆಬ್ರುವರಿ 21ರಂದು [6][7][8][9] ಅಧ್ಯಕ್ಷ ಸ್ಥಾನ ವಹಿಸಿಕೊಂಡರು. ಅದಾದ ತಕ್ಷಣ ಅವರನ್ನು ಟಾಟಾ ಮೋಟಾರ್ಸ್ ಛೇರ್ ಮ್ಯಾನ್ ಎಂದು ಪ್ರಕಟಿಸಲಾಯಿತು. [10] ಅದೇ ವರ್ಷದ ಜುಲೈ 7ರಂದು ಅವರನ್ನು ಟಾಟಾ ಗ್ಲೋಬಲ್ ಬಿವರೇಜಸ್ ನ ಛೇರ್ ಮ್ಯಾನ್ ಆಗಿ ನೇಮಕ ಮಾಡಲಾಯಿತು. [11] ಟಾಟಾ ಸಮೂಹದ ನೇತೃತ್ವ ವಹಿಸಿರುವ ಮೊತ್ತಮೊದಲ ಪಾರ್ಸಿಯೇತರ ಮತ್ತು ವೃತ್ತಿಪರ ಕಾರ್ಯನಿರ್ವಾಹಕರು ಇವರು.

ಶ್ರೀ ಎಸ್.ಎನ್.ಅಗರ್ ವಾಲ್
ಛೇರ್ ಮ್ಯಾನ್, ಭೋರುಕಾ ಪವರ್ ಕಾರ್ಪೊರೇಷನ್ ಲಿಮಿಟೆಡ್
ಬೆಂಗಳೂರು
ಶ್ರೀ ಎಸ್.ಎನ್.ಅಗರ್ ವಾಲ್ ಅವರು ಸಾಗಣೆ ಹಾಗೂ ಕಾರ್ಮಿಕ & ಸಾಮಗ್ರಿ ಪೂರೈಕೆ ಕ್ಷೇತ್ರ ಸೇರಿದಂತೆ ವಿವಿಧ ಉದ್ದಿಮೆಗಳಲ್ಲಿ 45ಕ್ಕೂ ಹೆಚ್ಚು ವರ್ಷಗಳ ಅಪಾರ ಅನುಭವ ಹೊಂದಿದ್ದಾರೆ. ಶ್ರೀ ಅಗರ್ ವಾಲ್ ಅವರು ಭೋರುಕಾ ಗ್ಯಾಸಸ್ ಲಿಮಿಟೆಡ್ ಮತ್ತು ಭೋರುಕಾ ಪವರ್ ಕಾರ್ಪೊರೇಷನ್ ಲಿಮಿಟೆಡ್ ಗಳ ಛೇರ್ ಮ್ಯಾನ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಅವರು ಬೆಂಗಳೂರು ಐಐಎಂ ದ ಆಡಳಿತ ಮಂಡಳಿ ಸದಸ್ಯರೂ ಆಗಿದ್ದಾರೆ. ಡೇವನ್ ಪೋರ್ಟ್ ಕಾಲೇಜ್ ಆಫ್ ಬಿಸಿನೆಸ್ ನಿಂದ ವ್ಯವಸ್ಥಾಪನಾ (ಮ್ಯಾನೇಜ್ ಮೆಂಟ್) ಕೋರ್ಸ್ ನ ಪದವಿ ಹಾಗೂ ಅಮೆರಿಕದ ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ನಿಂದ ಉನ್ನತ ವ್ಯವಸ್ಥಾಪನಾ ಕೋರ್ಸ್ ನಲ್ಲಿ (ಅಡ್ವಾನ್ಸ್ ಮ್ಯಾನೇಜ್ ಮೆಂಟ್ ಪ್ರೋಗ್ರ್ಯಾಮ್- ಎಎಂಪಿ) ಪ್ರಮಾಣಪತ್ರವನ್ನೂ ಪಡೆದಿದ್ದಾರೆ.

Representative of the C S I R

Dr. Shekhar C Mande
Director General, Council of Scientific
& Industrial Res. Anusandhan Bhawan, 2, Rafi Marg, NEW DELHI

Representatives of Association of Indian Universities

Northern Region
Prof. R.S. Bawa
Vice Chancellor, Chandigarh University
Gharuan, District Mohali, PUNJAB 140 413

Southern Region
Prof. Sandeep Sancheti
Vice Chancellor, SRM Institute of Science & Technology
SRM Nagar, Kattankulathur
Kancheepuram District, CHENNAI – 603 203

Eastern Region
Prof. Rakesh Bhatnagar
Vice Chancellor
Banaras Hindu University, VARANASI 221 005

Western Region:
Prof. Souvik Bhattacharya
Vice Chancellor
Birla Institute of Technology & Science
Vidya Vihar, Pilani 333 031, Rajasthan

ಪ್ರೊಫೆಸರ್ ಗೋವಿಂದನ್ ರಂಗರಾಜನ್
ನಿರ್ದೇಶಕರು, ಐಐಎಸ್ ಸಿ
ಗೋವಿಂದನ್ ರಂಗರಾಜನ್ ರವರು USA ಯ ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯ, ಕಾಲೇಜ್ ಪಾರ್ಕ್, ದಿಂದ ಡಾಕ್ಟರೆಟ್ ಪಡೆದರು. 1992 ರಲ್ಲಿ ಭಾರತಕ್ಕೆ ಹಿಂದಿರುಗುವ ಮೊದಲು ಅವರು ಬರ್ಕಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಲಾರೆನ್ಸ್ ಬರ್ಕ್ಲಿ ಲ್ಯಾಬ್ನಲ್ಲಿ ಕೆಲಸ ಮಾಡಿದರು. ಇವರು ಪ್ರಸ್ತುತ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಗಣಿತ ಅಧ್ಯಾಪಕರಾಗಿದ್ದಾರೆ. ಇವರ ಸಂಶೋಧನಾ ಆಸಕ್ತಿಗಳು ರೇಖಾತ್ಮಕವಲ್ಲದ ಡೈನಾಮಿಕ್ಸ್ ಮತ್ತು ಅಸ್ತವ್ಯಸ್ತತೆ, ಟೈಮ್ ಸರಣಿ ವಿಶ್ಲೇಷಣೆ ಮತ್ತು ಕಂಪ್ಯೂಟೇಶನಲ್ ನರವಿಜ್ಞಾನವನ್ನು ಒಳಗೊಂಡಿವೆ. ಇವರು ಜೆ. ಸಿ. ಬೋಸ್ ರಾಷ್ಟ್ರೀಯ ಫೆಲೋ, ಇಂಡಿಯನ್ ಆಕಾಡೆಮಿ ಆಫ್ ಸೈನ್ಸ್ ಮತ್ತು ಭಾರತದ ದಿ ನ್ಯಾಷಿನಲ್  ಆಕಾಡೆಮಿ ಆಫ್ ಸೈನ್ಸ್ ಸಂಸ್ಥೆಗಳ ಫೆಲೋ ಆಗಿದ್ದಾರೆ. ಇವರು ಫ್ರಾನ್ಸ್ನ ಸರ್ಕಾರದಿಂದ ನೈಟ್ ಆಫ್ ದಿ ಆರ್ಡರ್ ಆಫ್ ಪಾಮ್ಸ ಎಂದು ನೇಮಿಸಲ್ಪಟ್ಟರು. ಇವರು ಹೋಮಿ ಬಾಬಾ ಫೆಲೋ ಸಹ ಆಗಿದ್ದಾರೆ.

ಪ್ರೊಫೆಸರ್ ಪಿ.ರಾಮರಾವ್
ವಿಶ್ರಾಂತ ಕುಲಪತಿ, ಹೈದರಾಬಾದ್ ವಿಶ್ವವಿದ್ಯಾಲಯ
ಹೈದರಾಬಾದ್
ಪ್ರೊಫೆಸರ್ ಪಲ್ಲೆ ರಾಮರಾವ್ ಅವರು ಭೌತಿಕ ಮತ್ತು ಯಾಂತ್ರಿಕ ಲೋಹಶಾಸ್ತ್ರ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಾಗಿ ಹೆಸರಾದ ವಿಜ್ಞಾನಿಯಾಗಿದ್ದಾರೆ. ಭಾರತ ಹಾಗೂ ವಿದೇಶಗಳ 12ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗ ಸಾಧಿಸಿ, ಸಂಶೋಧನೆಗಳನ್ನು ನಡೆಸಿದ್ದಾರೆ. ವಿಜ್ಞಾನ ರಂಗಕ್ಕೆ ನೀಡಿದ ಕೊಡುಗೆಗಾಗಿ 2011ರಲ್ಲಿ ಭಾರತದ ರಾಷ್ಟ್ರಪತಿಯವರಿಂದ ಪದ್ಮವಿಭೂಷಣ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. [2] ಪ್ರಸ್ತುತ ಅವರು ಹೈದರಾಬಾದ್ ನಲ್ಲಿರುವ ಇಂಟರ್ ನ್ಯಾಷನಲ್ ಅಡ್ವಾನ್ಸ್ ಡ್ ರೀಸರ್ಚ್ ಸೆಂಟರ್ ಫಾರ್ ಪೌಡರ್ ಮೆಟಲರ್ಜಿ & ನ್ಯೂ ಮಟೀರಿಯಲ್ಸ್ದ (ಅಂತರರಾಷ್ಟ್ರೀಯ ಉನ್ನತ ಹುಡಿ ಲೋಹಶಾಸ್ತ್ರ ಮತ್ತು ಹೊಸ ವಸ್ತುಗಳ ಸಂಶೋಧನಾ ಕೇಂದ್ರ) ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ.

ಶ್ರೀ ಆರ್.ಕೆ.ಕೃಷ್ಣಕುಮಾರ್
ನಿರ್ದೇಶಕರು, ಟಾಟಾ ಸನ್ಸ್ ಲಿಮಿಟೆಡ್, ಮುಂಬೈ
ಕೆಕೆ ಎಂದೇ ಜನಪ್ರಿಯರಾಗಿರುವ ಶ್ರೀ ಕೃಷ್ಣಕುಮಾರ್ ರಾಯರೋಥ್ ಕುಟುಂಬಲ್ಲಿ ಅವರು ಟಾಟಾ ಸನ್ಸ್ ಲಿಮಿಟೆಡ್ ನಲ್ಲಿ ಗ್ರೂಪ್ ಕಾರ್ಪೊರೇಟ್ ಸೆಂಟರ್ ನ ಸದಸ್ಯರಾಗಿ ಸೇವೆ ಸಲ್ಲಿಸಿದರು. ಟಾಟಾ ಆಡಳಿತ ಸೇವೆಯ ಹಿರಿಯ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ. 1997ರ ಆಗಸ್ಟ್ 29ರಿಂದ 2003ರ ಜುಲೈ 18ರ ಅವಧಿಯವರೆಗೆ ಇಂಡಿಯನ್ ಹೋಟೆಲ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶರಾಗಿದ್ದರು. ಕೃಷ್ಣಕುಮಾರ್ ಅವರು ಚಹಾ ಉದ್ದಿಮೆಯೊಂದಿಗೆ 40ಕ್ಕೂ ಹೆಚ್ಚು ವರ್ಷಗಳ ನಂಟು ಹೊಂದಿದ್ದಾರೆ.
ಇವರು, 1963ರಲ್ಲಿ ಟಾಟಾ ಆಡಳಿತ ಸೇವೆ ಸೇರಿದರು. ಆರಂಭದಲ್ಲಿ ಟಾಟಾ ಇಂಡಸ್ಟ್ರೀಸ್ ಗೆ ನೇಮಕಗೊಂಡಿದ್ದ ಕೆಕೆ ಅವರು ನಂತರ ಸಮೂಹದ ಇತರ ಕಂಪನಿಗಳಿಗೆ ಸೇರಿದರು. ಟಾಟಾ-ಫಿನ್ಲೆ ಸೇರಿದ ಅವರು, ಅಲ್ಲಿಂದ ಮುಂದಕ್ಕೆ ಟಾಟಾ ಸಮೂಹದ ಚಹಾ ಮತ್ತು ಕಾಫಿ ವ್ಯವಹಾರಗಳ ಭಾಗವಾದರು. 1988ರಲ್ಲಿ ಟಾಟಾ ಟೀ ಕಂಪನಿಗಾಗಿ ಕೋಲ್ಕತ್ತಾಗೆ ತೆರಳಿದ ಅವರು 1991ರ ಮೇ ತಿಂಗಳಿನಿಂದ 1998ರ ಜನವರಿವರೆಗೆ ಅದರ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಟಾಟಾ ರಿಯಾಲ್ಟಿ ಅಂಡ್ ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್ ಅಂಡ್ ಏಷ್ಯನ್ ಕಾಫಿ, ಪಿಎಂ ಹೋಟೆಲ್ಸ್ ಲಿಮಿಟೆಡ್, ಎವರ್ಟ್ ಇನ್ ವೆಸ್ಟ್ ಮೆಂಟ್ಸ್ ಲಿಮಿಟೆಡ್ ಕಂಪನಿ ಲಿಮಿಟೆಡ್, ದಿ ಟೆಟ್ಲಿ ಗ್ರೂಪ್ ಲಿಮಿಟೆಡ್ ಗಳ ಛೇರ್ ಮ್ಯಾನ್ ಆಗಿ ಸೇವೆ ಸಲ್ಲಿಸಿದರು. ಗಿವ್ ಫೌಂಡೇಷನ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರ್ ಎನ್ಟಿ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾಗಿದ್ದಾರೆ. ಟಾಟಾ ಹೌಸಿಂಗ್ ಡೆವೆಲಪ್ ಮೆಂಟ್ ಕಂಪನಿ ಲಿಮಿಟೆಡ್ ನ ಛೇರ್ ಮ್ಯಾನ್ ಆಗಿ ಸೇವೆ ಸಲ್ಲಿಸಿದ್ದಾರೆ. 2006ರ ಮೇ 18ರವರೆಗೆ ಇಂಡಿಯನ್ ರೆಸಾರ್ಟ್ಸ್ ಹೋಟೆಲ್ಸ್ ಲಿಮಿಟೆಡ್ ನ ಛೇರ್ ಮ್ಯಾನ್ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. 2013ರ ಜುಲೈವರೆಗೆ ಓರಿಯಂಟಲ್ ಹೋಟೆಲ್ಸ್ ಲಿಮಿಟೆಡ್ ನಲ್ಲಿ, 2013ರ ಜುಲೈ 26ರವರೆಗೆ ಟಾಟಾ ಕಾಫಿ ಲಿಮಿಟೆಡ್ ನಲ್ಲಿ ಕೂಡ ಸೇವೆ ಸಲ್ಲಿಸಿದ್ದಾರೆ.
ಟಾಟಾ ಸಮೂಹದ ತಾಜ್ ಹೋಟೆಲ್ಸ್ ಲಿಮಿಟೆಡ್ ಅಂಡ್ ಪ್ಯಾಲೆಸೆಸ್ ನ ಉಪಾಧ್ಯಕ್ಷರಾಗಿದ್ದರು. 2003ರ ಜುಲೈ 19ರಿಂದ 2013ರ ಜುಲೈ 18ರವರೆಗೆ ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್ ವೈಸ್ ಛೇರ್ ಮ್ಯಾನ್ ಆಗಿ ಸೇವೆ ಸಲ್ಲಿಸಿದರು. 1997ರಿಂದ 2013ರ ಜುಲೈ 19ರವರೆಗೆ ಟಾಟಾ ಗ್ಲೋಬಲ್ ಬೀವರೇಜಸ್ ಲಿಮಿಟೆಡ್ ನ (ಮುಂಚಿನ ಟಾಟಾ ಟೀ ಲಿಮಿಟೆಡ್) ವೈಸ್ ಛೇರ್ ಮ್ಯಾನ್ ಆಗಿದ್ದರು. 1987ರ ಮೇ 5ರಿಂದ ಟಾಟಾ ಗ್ಲೋಬಲ್ ಬೀವರೇಜಸ್ ಲಿಮಿಟೆಡ್ ನ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದರು. 1991ರ ಜನವರಿ 10ರಿಂದ 2013ರ ಜುಲೈ 26ರವರೆಗೆ ಟಾಟಾ ಕಾಫಿ ಲಿಮಿಟೆಡ್ ನಿರ್ದೇಶಕರಾಗಿದ್ದರು. 1997ರ ಸೆಪ್ಟೆಂಬರ್ 21ರಿಂದ 2013ರ ಜುಲೈ 18ರವರೆಗೆ ಓರಿಯಂಟಲ್ ಹೋಟೆಲ್ಸ್ ಲಿಮಿಟೆಡ್ ನಿರ್ದೇಶಕರಾಗಿದ್ದರು. 2013ರ ಜುಲೈ 18ರವರೆಗೆ ವಾಟಾವಾಲಾ ಪ್ಲಾಂಟೇಷನ್ಸ್ ನಿರ್ದೇಶಕರಾಗಿದ್ದರು. 2013ರ ಜುಲೈವರೆಗೆ ಟಾಟಾ ಸನ್ಸ್ ಲಿಮಿಟೆಡ್ ಮತ್ತು ಟಾಟಾ ಇಂಡಸ್ಟ್ರೀಸ್ ನಿರ್ದೇಶಕರಾಗಿದ್ದರು. 2006ರ ಅಕ್ಟೋಬರ್ 24ರವರೆಗೆ TAJGVK ನಿರ್ದೇಶಕರಾಗಿದ್ದರು. ಟಾಟಾ ಸಮೂಹದ ಆಡಳಿತಕ್ಕೆ ಸಂಬಂಧಪಟ್ಟಂತೆ 40 ವರ್ಷಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ.

ಶ್ರೀ ಕ್ಯಾಪ್ಟನ್ ಶ್ರೀಧರ್ ವಾರಿಯರ್ (ನಿವೃತ್ತ)
ಕುಲಸಚಿವರು, ಐಐಎಸ್ ಸಿ

ANilSahasrabudheಪ್ರೊಫೆಸರ್ ಅನಿಲ್ ಡಿ.ಸಹಸ್ರಬುದ್ಧೆ
ಛೇರ್ ಮ್ಯಾನ್, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ, ನವದೆಹಲಿ
ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮೊದಲ ರಾಂಕ್ (First Rank) ಮತ್ತು ಬಂಗಾರದ ಪದಕದೊಂದಿಗೆ ಎಂಜಿನಿಯರಿಂಗ್ ಪದವಿ ಮುಗಿಸಿದ ಅನಿಲ್ ಸಹಸ್ರಬುದ್ಧೆ ಅವರು, ನಂತರ, ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗ ಮಾಡಿದರು. ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್ ನಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ ಅವರು ನಾರ್ಥ್ ಈಸ್ಟರ್ನ್ ರೀಜನಲ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಅಧ್ಯಾಪಕರೂ ಆಗಿದ್ದರು.ಗುವಾಹಟಿ ಐಐಟಿಯಲ್ಲಿ ವಿಭಾಗದ ಮುಖ್ಯಸ್ಥರಾಗಿ (ಎಚ್ಒಡಿ), ನಿಕಾಯದ ಮುಖ್ಯಸ್ಥರಾಗಿ (ಡೀನ್) ಮತ್ತು ಉಪನಿರ್ದೇಶರಾಗಿ ವಿವಿಧ ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ನಂತರ, ಪುಣೆಯ ಕಾಲೇಜ್ ಆಫ್ ಎಂಜಿನಿಯರಿಂಗ್ ನಿರ್ದೇಶಕರಾಗಿ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಿದ ಅವರು ಆನಂತರ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಛೇರ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Dr. Rakesh Sarwal
Additional Secretary (TE),
Min. of Human Resource Development,
Dept. of Higher Education, Govt. of India,
118-C,Shastri Bhavan, NEW DELHI – 110 001

Dr. Chandra Shekhar Kumar
Joint Secretary (IISERs),
Min. of Human Resource Development,
Dept. of Higher Education, Govt. of India,
124-C,Shastri Bhavan, NEW DELHI – 110 001

Ms. Kamini Chauhan Ratan
Joint Secretary (HE), Min. of Human Resource Development,
Dept. of Higher Education, Govt. of India,
203-C,Shastri Bhavan, NEW DELHI – 110 001

ಶ್ರೀ ಅನಿರುದ್ಧ ಶ್ರವಣ್ 
ಆಯುಕ್ತರು, ಆಯುಕ್ತರ ಕಚೇರಿ,
ಕಾಲೇಜು ಶಿಕ್ಷಣ ಇಲಾಖೆ,
ಎರಡನೇ ಮಹಡಿ, ಡಿಟಿಇ ಕಟ್ಟಡ, ಅರಮನೆ ರಸ್ತೆ,
ಬೆಂಗಳೂರು- 560001

ಶ್ರೀ ಪಂಕಜ್ ಆರ್.ಪಟೇಲ್
ಅಧ್ಯಕ್ಷರು, ಎಫ್ಐಸಿಸಿಐ & ಛೇರ್ ಮ್ಯಾನ್ & ವ್ಯವಸ್ಥಾಪಕ ನಿರ್ದೇಶಕರು
ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್, ಜೈದಸ್ ಟವರ್
ಸ್ಯಾಟಲೈಟ್ ಕ್ರಾಸ್ ರೋಡ್ಸ್, ಅಹಮದಾಬಾದ್- 380015 ಇವರು, 2017ರಲ್ಲಿ ಎಫ್ಐಸಿಸಿಐ (ಫಿಕ್ಕಿ) ಅಧ್ಯಕ್ಷರಾದರು. ಕೋಲ್ಕತ್ತಾದ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಐಐಎಸ್ಇಆರ್) ಹಾಗೂ ಭುವನೇಶ್ವರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ಆಡಳಿತ ಮಂಡಳಿಯ ಛೇರ್ ಮ್ಯಾನ್; ಅಹಮದಾಬಾದ್ ನ ಭಾರತೀಯ ವ್ಯವಸ್ಥಾಪನಾ ಮಂಡಳಿಯ (ಐಐಎಂ) ಆಡಳಿತ ಮಂಡಳಿ ಸದಸ್ಯರು ಮತ್ತು ಹಣಕಾಸು ಸಮಿತಿಯ ಛೇರ್ ಮ್ಯಾನ್; ಉದಯಪುರ ಐಐಎಂನ ಛೇರ್ ಮ್ಯಾನ್; ಅಹಮದಾಬಾದ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರು; ಅಹಮದಾಬಾದ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲೈಫ್ ಸೈನ್ಸಸ ಛೇರ್ ಮ್ಯಾನ್; ನಾರ್ಸಿ ಮೊಂಜಿ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಆಡಳಿತ ಮಂಡಳಿ ಸದಸ್ಯರು; ಗುಜರಾತ್ ಕ್ಯಾನ್ಸರ್ ಸೊಸೈಟಿಯ ಕಾರ್ಯಕಾರಿ ಛೇರ್ ಮ್ಯಾನ್, ಉಪಾಧ್ಯಕ್ಷರು ಹಾಗೂ ಟ್ರಸ್ಟಿ ಮತ್ತು ಗುಜರಾತ್ ಕ್ಯಾನ್ಸರ್ ಮತ್ತು ಸಂಶೋಧನಾ ಸಂಸ್ಥೆಯ[5] ಛೇರ್ ಮ್ಯಾನ್ ಆಗಿದ್ದಾರೆ.
ಅವರ ಮುಂದಾಳತ್ವದಲ್ಲಿ ಕ್ಯಾಡಿಲಾ ಕಂಪನಿಯ ಬೆಳವಣಿಗೆಯನ್ನು ಪರಿಗಣಿಸಿ ಭಾರತೀಯ ಉದ್ದಿಮೆ ಮತ್ತು ಅರ್ಥಶಾಸ್ತ್ರಜ್ಞರ ಪ್ರತಿಷ್ಠಾನವು[6] ಅವರಿಗೆ “ಬೆಸ್ಟ್ ಫಾರ್ಮಾ ಮ್ಯಾನ್ ಆಫ್ ದಿ ಇಯರ್ 2003” ಪುರಸ್ಕಾರ ನೀಡಿ ಗೌರವಿಸಿತು. ಆ ಸಂದರ್ಭದಲ್ಲಿ, ಪಟೇಲ್ ಅವರು, 2005ರ ವೇಳೆಗೆ ಜೈದಸ್ ಕಂಪನಿಯು ಮೂರನೇ ಅತಿ ದೊಡ್ಡ ಔಷಧ ಕಂಪನಿಯಾಗಲಿದೆ ಎಂದು ಊಹಿಸಿದ್ದರು[7]. ಆದರೆ, ಕಂಪನಿಯ ವರಮಾನ ಕಡಿಮೆಯಾಗಿದ್ದರಿಂದ ಪಟೇಲ್ ಅವರು 2005ರ[8] ವೇಳೆಗೆ ಅತ್ಯಂತ ಸಿರಿವಂತ ಭಾರತೀಯರ ಪಟ್ಟಿಯಿಂದ ಹೊರಬಿದ್ದರು.
ಇವರು ಗುಜರಾತ್ ನಲ್ಲಿ ಆಸ್ಪತ್ರೆಗಳ ಅತ್ಯಂತ ದೊಡ್ಡ ಸರಣಿಯಾದ ಜೈದಸ್ ಹಾಸ್ಪಿಟಲ್ಸ್ ನ ಛೇರ್ ಮ್ಯಾನ್ ಕೂಡ ಆಗಿದ್ದಾರೆ.

ಶ್ರೀ ವಿಜಯ್ ಪದಾತೆ,
ಮಹಾನಿರ್ದೇಶಕರು,
ದಿ ಎಂಪ್ಲಾಯರ್ಸ್ ಫೆಡರೇಷನ್ ಆಫ್ ಇಂಡಿಯಾ,
1703, ವರ್ಲ್ದ್ ಟ್ರೇಡ್ ಸೆಂಟರ್-1, ಕ್ಯುಫೆ ಪರೇಡ್,
ಮುಂಬೈ- 400 005.

ಡಾ. ಕೆ. ಎಸ್. ರಾಜನಂದಮ್ 
ಅಧ್ಯಕ್ಷರು, ಐಐಎಸ್ ಸಿ ಅಲುಮ್ನಿ ಅಸೋಸಿಯೇಷನ್ (ಐಐಎಸ್ ಸಿ ಹಳೆಯ ವಿದ್ಯಾರ್ಥಿಗಳ ಕೂಟ)
ಭಾರತ ವಿಜ್ಞಾನ ಸಂಸ್ಥೆ ಕ್ಯಾಂಪಸ್, ಬೆಂಗಳೂರು- 560 012

ಪ್ರೊಫೆಸರ್ ಗಳು ಮತ್ತು ಸಹಾಯಕ ಪ್ರೊಫೆಸರ್ ಗಳು, ಐಐಎಸ್ ಸಿ (ಪದನಿಮಿತ್ತ)
ವಿದ್ವತ್ ಸಭಾದಲ್ಲಿ ಇಲ್ಲದ ಮಂಡಳಿಯ ಸದಸ್ಯರು (ಪದನಿಮಿತ್ತ)